More

    BBKS10: ಡ್ರೋಣ್ ಪ್ರತಾಪ್​ ಫೇಕ್​? ಮನೆಯಿಂದ ಹೊರಬಂದ ನೀತು ಹೇಳಿದ್ದಿಷ್ಟು!

    ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10ರ ಏಂಟನೇ ವಾರದಲ್ಲಿ ಎಲಿಮಿನೇಟ್ ಆಗಿ ಹೊರಬಂದ ಸ್ಪರ್ಧಿ ನೀತು ವನಜಾಕ್ಷಿ, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾದರು. ಈ ವೇಳೆ ಬಿಗ್​ ಮನೆಯೊಳಗಿನ ಹಲವಾರು ಸಂಗತಿಗಳನ್ನು ನೇರವಾಗಿ ಹಂಚಿಕೊಂಡಿದ್ದು, ಡ್ರೋನ್ ಪ್ರತಾಪ್​ ಇರುವಿಕೆ ಹಾಗೂ ಇರುವ ರೀತಿಯ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಪ್ರೊ ಕಬಡ್ಡಿ 10ನೇ ಆವೃತ್ತಿ 12 ತಂಡಗಳ ನಾಯಕರು ಯಾರು ?: ಕಣದಲ್ಲಿದ್ದಾರೆ ಏಳು ಕನ್ನಡಿಗರು, ಪವನ್ ಶೆರಾವತ್‌ ದುಬಾರಿ

    “ಬಿಗ್ ಬಾಸ್​ ಮನೆಯಲ್ಲಿ ಎಲ್ಲರೂ ಕೂಡ ನನ್ನ ನೆಚ್ಚಿನ ಸ್ಪರ್ಧಿಯೇ ಆಗಿದ್ದರು. ಯಾಕಂದ್ರೆ ಪ್ರತಿಯೊಬ್ಬರು ಅವರದ್ದೇ ಆಟವಾಡುತ್ತಿದ್ದಾರೆ. ಜತೆಗೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ತುಂಬ ಇಷ್ವವಾದಂತ ವ್ಯಕ್ತಿಗಳು ಅಂದ್ರೆ ಅದು ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್. ಇವರಿಬ್ಬರು ಬಹಳ ಟ್ರೂ ಅನಿಸುತ್ತಿತ್ತು. ಇಬ್ಬರೊಂದಿಗೂ ಸಹ ಉತ್ತಮ ಸಂಬಂಧವಿತ್ತು. ನಾನು ಮನೆಯಿಂದ ಹೊರಬರುವಾಗ ಪ್ರತಾಪ್​ ಕಣ್ಣೀರಿಟ್ಟ. ಅವನು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ ತೆಗೆದುಕೊಳ್ಳುತ್ತಾನೆ” ಎಂದರು.

    “ಪ್ರತಾಪ್​ ಮಾತಿನಲ್ಲಿ ಸ್ಪಷ್ಟತೆ ಇದೆ. ಅವನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸರಿಯಾಗಿ ಪರಿಗಣಿಸುತ್ತಾನೆ. ಹೊರಗಡೆ ಏನೇ ಆಗಿರಬಹುದು ಆದ್ರೆ, ಮನೆಯೊಳಗೆ”….ಮತ್ತಷ್ಟು ಸಂಗತಿಗಳನ್ನು ತಿಳಿಯಲು ಕೆಳಗೆ ನೀಡಿರುವ ಸಂದರ್ಶನದ ವಿಡಿಯೋ ಮೇಲೆ ಕ್ಲಿಕ್ ಮಾಡಿ ವೀಕ್ಷಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts