More

    ಹೊಸ ಹೆಜ್ಜೆಯತ್ತ ಲಾಸ್ಯ; ಕೆನಡಾದಲ್ಲಿ ಸಿನಿಮಾ ಕಲಿಯಲು ಹೊರಟ ಕನ್ನಡದ ಹುಡುಗಿ

    ಬೆಂಗಳೂರು: ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮುನ್ನ ಕೆಲವು ನಟ, ನಟಿಯರು ನಟನಾ ಅಥವಾ ಫಿಲಂ ಮೇಕಿಂಗ್ ಸ್ಕೂಲ್‌ಗೆ ಹೋಗಿ ಕಲಿಯುವುದು ಸಾಮಾನ್ಯ. ಆದರೆ, ಚಿತ್ರರಂಗದಲ್ಲಿ ಸಕ್ರಿಯವಾಗಿರುವಾಗ ಬ್ರೇಕ್ ಪಡೆದು ಕಲಿಯಲು ಹೋಗುವವರು ಅಪರೂಪ. ‘ಲ್ೈ ಈಸ್ ಬ್ಯೂಟಿುಲ್’, ‘ವೇದ’ ಸೇರಿ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಲಾಸ್ಯ ಈಗ ಇಂತಹದೊಂದು ಹೆಜ್ಜೆಯಿಡಲು ರೆಡಿಯಾಗಿದ್ದಾರೆ. ಕೆನಡಾದ ಪ್ರತಿಷ್ಠಿತ ಟೊರೆಂಟೊ ಫಿಲಂ ಸ್ಕೂಲ್‌ನಲ್ಲಿ ಮಾಸ್ಟರ್ಸ್‌ ಆ್ ಕ್ರಿಯೇಟಿವ್ ಆರ್ಟ್ಸ್ ಕಲಿಯಲು ಹೋಗುತ್ತಿದ್ದಾರೆ. ಎರಡು ವರ್ಷಗಳ ಅವಧಿಯ ಕೋರ್ಸ್ ಇದಾಗಿದ್ದು, ನಟನೆ, ನಿರ್ದೇಶನ, ನಿರ್ಮಾಣ, ವಿತರಣೆ, ಸಿನಿಮಾ ಬಿಜಿನೆಸ್ ಹೀಗೆ ಸಿನಿಮಾಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಕಲಿಸಲಾಗುತ್ತದೆ. ಈ ಬಗ್ಗೆ ಲಾಸ್ಯ ನಾಗರಾಜ್ ವಿಜಯವಾಣಿ ಜತೆ ಮಾತನಾಡಿದ್ದಾರೆ.

    ಹಲವು ವರ್ಷಗಳ ಆಸೆ:
    ಚಿತ್ರರಂಗದಲ್ಲಿ ಸಕ್ರಿಯವಾಗಿರುವಾಗ ಬ್ರೇಕ್ ತೆಗೆದುಕೊಳ್ಳಲಿರುವ ಬಗ್ಗೆ, ‘2020ರಲ್ಲೇ ಅಂದುಕೊಂಡಿದ್ದೆ. ‘ದೃಶ್ಯ 2’ ಹಾಗೂ ಹರ್ಷ ಸರ್ ಸೆಟ್‌ನಲ್ಲಿ ಕೆಲಸ ಮಾಡುವಾಗಲೇ ಸಿನಿಮಾ ಕಲಿಯಬೇಕು ಅಂದುಕೊಂಡಿದ್ದೆ. ಆದರೆ, ಕೋವಿಡ್ ಹಾಗೂ ತಂದೆ ತೀರಿಕೊಂಡ ಕಾರಣದಿಂದ ಆಗಿರಲಿಲ್ಲ. ಈಗ ಮತ್ತೆ ಅವಕಾಶವಿದೆ ಜತೆಗೆ ತಾಯಿಯ ಬೆಂಬಲ ಇರುವುದರಿಂದ ಹೋಗುವ ಧೈರ್ಯ ಮಾಡಿದೆ’ ಎಂದು ಹೇಳಿಕೊಳ್ಳುತ್ತಾರೆ ಲಾಸ್ಯ.

    ಸ್ವತಂತ್ರವಾಗಬಹುದು:
    ಫಿಲಂ ಮೇಕಿಂಗ್ ಕಲಿಯುವುದರಿಂದ ಸ್ವತಂತ್ರವಾಗಬಹುದು ಎನ್ನುವ ಲಾಸ್ಯ, ‘ಅಲ್ಲಿ ನಟನೆಯ ಜತೆಗೆ ಒಂದು ಸಿನಿಮಾ ನಿರ್ಮಾಣಕ್ಕೆ ಏನೆಲ್ಲಾ ಅಗತ್ಯವಿದೆಯೋ ಎಲ್ಲವನ್ನೂ ಕಲಿಸುತ್ತಾರೆ. ಉದಾಹರಣೆಗೆ, ಚಲನಚಿತ್ರೋತ್ಸವದಲ್ಲಿ ಸಿನಿಮಾ ಹೇಗೆ ಪಿಚ್ ಮಾಡಬೇಕು, ಚಿತ್ರದ ಸಿನಾಪ್ಸಿಸ್ ಹೇಗೆ ತಯಾರಿಸಬೇಕು, ಒಟಿಟಿಗಳಿಗೆ ನಮ್ಮ ಸಿನಿಮಾ ಬಗ್ಗೆ ಹೇಳುವಾಗ ಏನೆಲ್ಲಾ ಡಾಕ್ಯುಮೆಂಟ್‌ಗಳು ಬೇಕು ಎಲ್ಲವನ್ನೂ ಕಲಿಸುತ್ತಾರೆ. ಹೀಗಾಗಿ, ಸ್ವತಂತ್ರವಾಗಿ ಸಿನಿಮಾ ನಿರ್ಮಿಸಲು ಈ ಶಿಕ್ಷಣ ಪೂರಕವಾಗುತ್ತದೆ. ಬೇರೆ ನಿರ್ಮಾಣ ಸಂಸ್ಥೆಗಳಲ್ಲೂ ಕೆಲಸ ಮಾಡಬಹುದು’ ಎನ್ನುತ್ತಾರೆ.

    ಕನ್ನಡ ಚಿತ್ರರಂಗಕ್ಕೂ ಸಹಾಯ:
    ಕನ್ನಡ ಚಿತ್ರರಂಗದಿಂದ ದೂರವಿರುತ್ತೇನೆ ಆದರೆ ಸಿನಿಮಾದಿಂದ ಅಲ್ಲ ಎನ್ನುವುದು ಲಾಸ್ಯ ಮಾತು. ‘ಸಿನಿಮಾ ಬಗ್ಗೆ ಕಲಿಯಲೆಂದೇ ಹೋಗುತ್ತಿರುವ ಕಾರಣ ಇದು ಬ್ರೇಕ್ ಎಂದು ಹೇಳುವುದಿಲ್ಲ. ಜತೆಗೆ ಅಲ್ಲಿ ಕಲಿತ ವಿಷಯಗಳನ್ನು ಮುಂದೆ ಇಲ್ಲಿಯೂ ಅಳವಡಿಸಬಹುದು. ಟಿ.ಎಸ್ ನಾಗಾಭರಣ ಸರ್, ಇಲ್ಲಿ ಇರುವ ಪಠ್ಯಗಳು ಹಳೆಯದ್ದಾಗಿದೆ. ಕೆನಾಡದಲ್ಲಿ ನನಗೆ ಕಲಿಸಿರುವ ಪಠ್ಯಗಳನ್ನು ಮುಂದೆ ಇಲ್ಲಿಯೂ ಅಳವಡಿಸಲು ಸಹಾಯವಾಗುತ್ತದೆ ಎಂದಿದ್ದರು. ಇನ್ನು, ಇಲ್ಲಿನ ಸಿನಿಮಾ ಸಂಸ್ಕೃತಿ ಅಲ್ಲಿಗೆ ಒಯ್ಯಬಹುದು, ಅಲ್ಲಿಂದ ಇಲ್ಲಿಗೆ ತರಬಹುದು. ಅಲ್ಲಿಯೂ ನಾನು ನಟನೆ ಮಾಡುತ್ತಿರುತ್ತೇನೆ’ ಎನ್ನುತ್ತಾರೆ ಲಾಸ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts