More

    ಜೀ5 ಜತೆ ಕೈಜೋಡಿಸಿದ ನಮ್ಮಫ್ಲಿಕ್ಸ್ ; ಅಮೆರಿಕದಲ್ಲಿ ಹೊಸ ಆಫರ್ ಪರಿಚಯಿಸಿದ ಒಟಿಟಿ ವೇದಿಕೆಗಳು

    ವಿಜಯವಾಣಿ ಸುದ್ದಿಜಾಲ ಬೆಂಗಳೂರು:

    ಕನ್ನಡದ ಹೆಸರಾಂತ ಒಟಿಟಿ ನಮ್ಮಫ್ಲಿಕ್ಸ್ ಇದೀಗ ಅಮೆರಿಕದ ಪ್ರೇಕ್ಷಕರಿಗೆ ಸ್ಯಾಂಡಲ್‌ವುಡ್ ಅನ್ನು ಹೊಸ ರೀತಿಯಲ್ಲಿ ಪರಿಚಯಿಸಲು ಹೊರಟಿದೆ. ಹೀಗಾಗಿ ಜೀ5 ಒಟಿಟಿ ಜತೆ ಕೈಜೋಡಿಸಿ ಹೊಸ ಆಫರ್ ಪರಿಚಯಿಸಿದೆ. ಅದರಂತೆ ನಮ್ಮಫ್ಲಿಕ್ಸ್ (ಕನ್ನಡ), ಸಿಂಪ್ಲಿ ಸೌತ್ (ದಕ್ಷಿಣ ಭಾರತದ ಭಾಷೆಗಳು), ಓಹೋ ಗುಜರಾತಿ (ಗುಜರಾತಿ), ಚೌಪಲ್ (ಪಂಜಾಬಿ, ಗುಜರಾತಿ, ಹರಿಯಾಣ್ವಿ), ಐ ಸ್ಟ್ರೀಮ್ (ಮಲಯಾಳಂ) ಹಾಗೂ ಎಪಿಕ್ ಒನ್ (ಹಿಂದಿ) ಒಟಿಟಿಗಳು ಜೀ5 ಗ್ಲೋಬಲ್ ಆ್ಯಡ್-ಆನ್ಸ್ ಆರ್‌ನಲ್ಲಿ ಅಮೆರಿಕ ಪ್ರೇಕ್ಷಕರಿಗೆ ದೊರೆಯಲಿವೆ. 1.49 ಡಾಲರ್‌ಗೆ (124 ರೂ.) ಈ ಆಫರ್ ಪಡೆಯಬಹುದು. ಆ ಮೂಲಕ ಅಮೆರಿಕದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಹೊಸ ಬಗೆಯ ಕನ್ನಡ ಮನರಂಜನಾ ಲೋಕವನ್ನು ತೆರೆದಿಡುವ ಪ್ರಯತ್ನ ನಮ್ಮಫ್ಲಿಕ್ಸ್ ಸಂಸ್ಥೆಯದು.

    ಇದನ್ನೂ ಓದಿ : ಭಾರತದ ಮೊದಲ ಫೀಲ್ಡ್ ಮಾರ್ಷಲ್ ಕುರಿತ ‘ಸ್ಯಾಮ್ ಬಹದ್ದೂರ್’ ಚಿತ್ರ ಬಿಡುಗಡೆ; ಕಣ್ಣೀರು ಹಾಕಿದ ಪುತ್ರಿ

    ಜೀ5 ಜತೆ ಕೈಜೋಡಿಸಿದ ನಮ್ಮಫ್ಲಿಕ್ಸ್ ; ಅಮೆರಿಕದಲ್ಲಿ ಹೊಸ ಆಫರ್ ಪರಿಚಯಿಸಿದ ಒಟಿಟಿ ವೇದಿಕೆಗಳು

    ಮುಂಬೈನಲ್ಲಿ ಮಂಗಳವಾರ (ನ. 28) ನಡೆದ ಸಮಾರಂಭದಲ್ಲಿ ಜೀ5 ಗ್ಲೋಬಲ್ ಆ್ಯಡ್-ಆನ್ಸ್ ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ಬಾಲಿವುಡ್ ನಟ ಮನೋಜ್ ಬಾಜಪೈ, ಪ್ರತೀಕ್ ಗಾಂಧಿ, ನಟಿ ಅಮೀಷಾ ಪಟೇಲ್, ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ, ನಟ ಕವೀಶ್ ಶೆಟ್ಟಿ, ಜೀ5 ಎಂಡಿ ಅಮಿತ್ ಗೋಯೆಂಕಾ, ಜೀ ಚ್ೀ ಬಿಜಿನೆಸ್ ಆಫೀಸರ್ ಅರ್ಚನಾ, ನಮ್ಮಫ್ಲಿಕ್ಸ್ ಸಿಇಒ ವಿಜಯಪ್ರಕಾಶ್ ಅಕ್ಕರಕಿ ಮತ್ತು ಅಶ್ವಿನ್ ಪಾಟೀಲ್ ಭಾಗವಹಿಸಿದ್ದರು.

    ಇದನ್ನೂ ಓದಿ : ವಿಜಯಕಾಂತ್ ಅನಾರೋಗ್ಯದ ಬಗ್ಗೆ ವದಂತಿ.. ನಿರಾಕರಿಸಿದ ಕ್ಯಾಪ್ಟನ್ ಪತ್ನಿ ಪ್ರೇಮಲತಾ

    ಜೀ5 ಜತೆ ಕೈಜೋಡಿಸಿದ ನಮ್ಮಫ್ಲಿಕ್ಸ್ ; ಅಮೆರಿಕದಲ್ಲಿ ಹೊಸ ಆಫರ್ ಪರಿಚಯಿಸಿದ ಒಟಿಟಿ ವೇದಿಕೆಗಳು

    ಅಮೆರಿಕದಲ್ಲಿರುವ ಕನ್ನಡ ಪ್ರೇಕ್ಷಕರಿಗೆ ಜೀ5ನಲ್ಲಿ ಆ್ಯಡ್-ಆನ್ಸ್ ಮೂಲಕ ನಮ್ಮಫ್ಲಿಕ್ಸ್ ಕೂಡ ಜತೆಯಾಗಿದೆ. ಅಮೆರಿಕದಲ್ಲಿ ಯಾರೆಲ್ಲಾ ಜೀ5 ಬಳಕೆದಾರರಿದ್ದಾರೆ, ಇನ್ನುಮುಂದೆ ಅವರಿಗೆ ನಮ್ಮಫ್ಲಿಕ್ಸ್ ಕೂಡ ಲಭ್ಯವಾಗಲಿದೆ. ಹೆಸರಾಂತ ಒಟಿಟಿ ವೇದಿಕೆಯಾದ ಜೀ5 ಜತೆ ಟೈಅಪ್ ಆಗಿರುವುದು ಹಾಗೂ ಕನ್ನಡದಲ್ಲಿ ಅವರು ನಮ್ಮಫ್ಲಿಕ್ಸ್‌ಗೆ ಆದ್ಯತೆ ನೀಡಿರುವುದು ಖುಷಿಯ ವಿಷಯ. ಇದರಿಂದ ನಮ್ಮಫ್ಲಿಕ್ಸ್ ಇನ್ನಷ್ಟು ಹೆಚ್ಚು ಸಂಖ್ಯೆಯಲ್ಲಿ ಗ್ರಾಹಕರನ್ನು ತಲುಪಬಹುದಾಗಿದೆ. -ವಿಜಯಪ್ರಕಾಶ್ ಅಕ್ಕರಕಿ, ನಮ್ಮಫ್ಲಿಕ್ಸ್ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts