More

  ರಶ್ಮಿಕಾ-ರಣಬೀರ್​ ನಟನೆಯ ‘ಅನಿಮಲ್​’ ಸಿನಿಮಾ ಹೇಗಿದೆ? ರಣಬೀರ್​​ ನಗ್ನ ದೃಶ್ಯವಿದೆ..! ಜನರ ವಿಮರ್ಶೆ ಏನು?

  ‘ಅನಿಮಲ್​’ ಸಿನಿಮಾ (Animal Movie) ಇಂದು (ಡಿ.1) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ (Ranbir Kapoor) ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದ್ದಾರೆ. ಬಾಬಿ ಡಿಯೋಲ್​, ಅನಿಲ್​ ಕಪೂರ್​ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
  ಫಸ್ಟ್​ ಡೇ ಫಸ್ಟ್​ ಶೋ ವೀಕ್ಷಿಸಿದ ರಶ್ಮಿಕಾ ಮತ್ತು ರಣ್​ಬೀರ್​​ ಫ್ಯಾನ್ಸ್​​ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಸೋಷಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.


  ​ಸಿನಿಮಾದಲ್ಲಿ ಆ್ಯಕ್ಷನ್​ ದೃಶ್ಯಗಳು ಇವೆ. ಮಾಸ್​ ಪ್ರೇಕ್ಷಕರಿಗೆ ಇದು ಇಷ್ಟ ಆಗಿದೆ. ರಣಬೀರ್​ ಕಪೂರ್​ ಚಿತ್ರದಲ್ಲಿ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್​ ಅವತಾರದಲ್ಲಿ ಅವರ ಅಭಿನಯಕ್ಕೆ ಫ್ಯಾನ್ಸ್​ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವು ನೆಟ್ಟಿಗರು ಈ ಸಿನಿಮಾಗೆ 5ಕ್ಕೆ 5 ಸ್ಟಾರ್​ ನೀಡಿದ್ದಾರೆ. ಈ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಲಿದೆ ಎಂದು ಸಾಕಷ್ಟು ಮಂದಿ ಹೇಳುತ್ತಿದ್ದಾರೆ.


  3 ಗಂಟೆ 21 ನಿಮಿಷದ ಸಿನಿಮಾ ಇದಾಗಿದ್ದು, ಎಲ್ಲಿಯೂ ಬೋರ್​ ಆಗೋದಿಲ್ಲ ಎಂದು ಇನ್ನೂ ಹಲವರು ಹೇಳುತ್ತಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


  ರಣಬೀರ್​ ಕಪೂರ್​ ಅವರಿಗೆ ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಭಾಷೆಯಲ್ಲಿ ಅಭಿಮಾನಿಗಳಿದ್ದಾರೆ.
  ರಶ್ಮಿಕಾ ಮಂದಣ್ಣ ಕೂಡ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಈ ಸಿನಿಮಾದಿಂದ ಅವರ ಚಾರ್ಮ್​ ಹೆಚ್ಚಾಗಿದೆ. ಈ ಸಿನಿಮಾ ತುಂಬಾ ರಗಡ್​ ಆಗಿ ಮೂಡಿಬಂದಿದೆ. ರಣಬೀರ್​ ಕಪೂರ್​ ಅವರ ವೃತ್ತಿ ಜೀವನದಲ್ಲಿ ಇದು ಹೊಸ ಪ್ರಯತ್ನ ಎಂದು ಫ್ಯಾನ್ಸ್​ ಹೇಳುತ್ತಿದ್ದಾರೆ.


  ಚಿತ್ರದಲ್ಲಿ ರಣಬೀರ್ ಕಪೂರ್ ನಗ್ನ ದೃಶ್ಯವಿದೆಯೇ?
  ಕೆಲ ಮಾಧ್ಯಮಗಳು ರಣ್​ಬೀರ್​ ಈ ಚಿತ್ರದಲ್ಲಿ ನಗ್ನವಾಗಿದ್ದಾರೆ ಎಂದು ವರದಿ ಮಾಡಿದ್ದರು. ಆದರೆ ಯಾವುದೇ ಶಾಟ್‌ಗಳು ಲಭ್ಯವಿಲ್ಲದಿದ್ದರೂ ಕೆಲವೊಂದು ಸೀನ್​ಗಳಿಗೆ ನಗ್ನ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಈ ಹಿಂದೆ ಸಾವರಿಯಾ ಸಿನಿಮಾದಲ್ಲೂ ರಣ್​ಬೀರ್​​ ಟಾವಲ್ ಹಿಡಿದು ಹಾಕಿದ್ದ ಸ್ಟೆಪ್ಸ್​​ ಸಖತ್​ ವೈರಲ್ ಆಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts