ಬೆಂಗಳೂರು: ರೀಲ್ಸ್ ಪ್ರತಿಯೊಬ್ಬರ ದೈನಂದಿನ ಚಟುವಟಿಕೆಯಲ್ಲೊಂದಾಗಿದೆ. ರೀಲ್‌ಗಳನ್ನು ನೋಡುವಾಗ ಕೆಲವೊಂದು ನಮಗೆ ಇಷ್ಟವಾಗುತ್ತದೆ, ಕೆಲವೊಂದು ಹಿಡಿಸುವುದಿಲ್ಲ. ಅದಕ್ಕಾಗಿ ಫೇಸ್‌ಬುಕ್ ಒಂದು ಹೊಸ ಆಯ್ಕೆಯನ್ನು ಪರಿಚಯಿಸಿದೆ. ಫೇಸ್‌ಬುಕ್ ರೀಲ್‌ಗಳಿಗಾಗಿ ಮೆಟಾ ಹೊಸ ವೈಯಕ್ತೀಕರಣ ನಿಯಂತ್ರಣಗಳನ್ನು ನೀಡಿದೆ. ಇದು ಬಳಕೆದಾರರು ಹೆಚ್ಚು ಅಥವಾ ಕಡಿಮೆ ನೋಡಲು ಬಯಸುವ ಕಂಟೆಂಟ್ ಅನ್ನು ಕಸ್ಟಮೈಸ್ ಮಾಡಲು ಅನುಮತಿ ಣಿಡಿದೆ. ನೋಡುವ ವೀಡಿಯೊಗಳು ಹೆಚ್ಚು ಪ್ರಸ್ತುತವಾಗಿಲಿ ಎಂದು ಈ ಹೊಸ ಆಯ್ಕಯಯ ಉದ್ದೇಶ. ಮೇನ್ ನ್ಯಾವಿಗೇಷನ್‌ಗೆ ರೀಲ್‌ಗಳನ್ನು ಸೇರಿಸುವ ಮೂಲಕ ಫೇಸ್‌ಬುಕ್‌ನಲ್ಲಿ ಕಿರು-ರೂಪದ ವೀಡಿಯೊಗಳನ್ನು ಹೆಚ್ಚು ಅನ್ವೇಷಿಸುವಂತೆ ಮಾಡುತ್ತಿದೆ.
“ವಾಚ್ ಟ್ಯಾಬ್‌ನ ಮೇಲ್ಭಾಗಕ್ಕೆ ಸೇರಿಸುವ ಮೂಲಕ ಮತ್ತು ಹೊಸ ನಿಯಂತ್ರಣಗಳನ್ನು ಪರಿಚಯಿಸುವ ಮೂಲಕ ಫೇಸ್‌ಬುಕ್‌ನಲ್ಲಿ ರೀಲ್‌ಗಳನ್ನು ಅನ್ವೇಷಿಸಲು ಸುಲಭಗೊಳಿಸುತ್ತಿದ್ದೇವೆ ಆದ್ದರಿಂದ ಹೆಚ್ಚು ಅಥವಾ ಕಡಿಮೆ ನೋಡಲು ಬಯಸುವ ವಿಷಯದ ಕುರಿತು ಫೇಸ್ಬುಕ್ಗೆ ಪ್ರತಿಕ್ರಿಯೆಯನ್ನು ನೀಡಬಹುದು” ಎಂದು ಫೇಸ್ ಬುಕ್ ಪೋಸ್ಟ್ನ ಮೂಲಕ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. ಈ ಹೊಸ ಆಯ್ಕಯಿಂದ ಕಂಟೆಂಟ್ ಕ್ರಿಯೇಟರ್ಗಳ ರೀಲ್‌ಗಳು ಮತ್ತು ದೀರ್ಘ ವೀಡಿಯೊಗಳನ್ನು ಮನಬಂದಂತೆ ಸ್ಕ್ರಾಲ್ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ನಿಮ್ಮ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆಯಾ? ಇಲ್ಲಿದೆ ಪರಿಹಾರ…!
ಬಳಕೆದಾರರ ಆಸಕ್ತಿಗಳನ್ನು ಪ್ರತಿಬಿಂಬಿಸಲು, ವಿಡಿಯೋ ಪ್ಲೇಯರ್‌ನ ಕೆಳಭಾಗದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ ಹೆಚ್ಚು ಅಥವಾ ಕಡಿಮೆ ನೋಡು ಬೇಕೆನಿಸುವ ರೀಲ್‌ಗಳ ಪ್ರಕಾರಗಳನ್ನು ತಿಳಿಸಬಹುದು. ಬಳಕೆದಾರರು ವಾಚ್ ಫೀಡ್‌ನಲ್ಲಿ ರೀಲ್‌ಗಳು ಮತ್ತು ವಿಡಿಯೊಗಳ ಕೆಳಗೆ ಈ ಆಯ್ಕೆಯನ್ನು ನೋಡಲು ಪ್ರಾರಂಭಿಸುತ್ತಾರೆ.
ಬಳಕೆದಾರರು ಕೆಲವು ರೀಲ್‌ಗಳನ್ನು ಏಕೆ ನೋಡುತ್ತಿದ್ದಾರೆ ಎಂಬುದನ್ನು ವಿವರಿಸಲು ಮೆಟಾ ರೀಲ್ಸ್ ವೀಡಿಯೊ ಪ್ಲೇಯರ್‌ನಲ್ಲಿ ಹೊಸ ‘ಸಾಂದರ್ಭಿಕ ಲೇಬಲ್‌ಗಳನ್ನು’ ಪ್ರಾರಂಭಿಸಿತು – ಉದಾಹರಣೆಗೆ, ಅವರ ಸ್ನೇಹಿತ ಅದನ್ನು ಇಷ್ಟಪಟ್ಟಿದ್ದಾರೆ. ಅದರಂತೆ ರೀಲ್‌ನಲ್ಲಿ ‘ಶೋ ಮೋರ್’ (Show More) ಆಯ್ಕೆಯನ್ನು ಟ್ಯಾಪ್ ಮಾಡುವುದರಿಂದ ಆ ರೀಲ್ನ ಶ್ರೇಣಿಯ ಸ್ಕೋರ್ ಮತ್ತು ಅದರಂತಹ ರೀಲ್‌ಗಳಿಗೆ ತಾತ್ಕಾಲಿಕವಾಗಿ ಹೆಚ್ಚಾಗಿ ತೋರಿಸಲು ಪ್ರಾರಂಭಿಸುತ್ತದೆ. ಶೋ ಲೆಸ್ ಅನ್ನು ಆಯ್ಕೆ ಮಾಡುವುದರಿಂದ ಅದರ ಶ್ರೇಯಾಂಕದ ಸ್ಕೋರ್ ತಾತ್ಕಾಲಿಕವಾಗಿ ಕಡಿಮೆಯಾಗಿ ಅಂತಹ ರೀಲ್‌ಗಳು ಹೆಚ್ಚಾಗಿ ಕಾಣುವುದಿಲ್ಲ. (ಏಜೆನ್ಸೀಸ್)
ಇನ್ನು ಈ 41 ನಗರಗಳಲ್ಲಿ ಜಿಯೋ 5ಜಿ ಲಭ್ಯ! ಹೀಗಿದೆ ಆ ನಗರಗಳ ಪಟ್ಟಿ…