ಬೆಂಗಳೂರು: ಸಾಮಾಜಿಕ ಜಾಲತಾಣ ಬಹಳ ವೈಯಕ್ತಿಕವಾದದ್ದು. ನಿಮ್ಮ ಇನ್ಸ್ಟಾಗ್ರಾಂ ಖಾತೆಗೆ ಯಾರಾದರೂ ಅನಧಿಕೃತ ಪ್ರವೇಶವನ್ನು ಹೊಂದಿದ್ದಾರೆ ಅಥವಾ ಹ್ಯಾಕ್ ಮಾಡಲಾಗಿದೆ ಎಂಬ ಭಾವನೆ ಇದ್ದರೆ ಇಲ್ಲಿದೆ ಒಂದು ಉಪಾಯ. ಖಾತೆಗೆ ಯಾವ ಸಾಧನಗಳನ್ನು ಲಾಗ್ ಇನ್ ಮಾಡಲಾಗಿದೆ ಎಂಬುದನ್ನು ನೋಡಲು ಇನ್ಸ್ಟಾಗ್ರಾಂ ಅನುಮತಿ ನೀಡಿದೆ. ಹಳೆಯ ಫೋನ್ ಅಥವಾ ಪಿಸಿ (PC) ಮೂಲಕ ಲಾಗಿನ್ ಆಗಿದ್ದರೆ ಲಾಗ್ ಔಟ್ ಆಗಲು ಕೂಡ ಈ ವಿಧಾನವನ್ನು ಬಳಸಬಹುದು. ಅನುಮಾನಾಸ್ಪದ ಸಾಧನಗಳಿಗೆ ಪ್ರವೇಶವನ್ನು ತ್ವರಿತವಾಗಿ ಹಿಂತೆಗೆದುಕೊಂಡು ಇನ್ಸ್ಟಾಗ್ರಾಂ ಖಾತೆಯನ್ನು ಸುರಕ್ಷಿತಗೊಳಿಸುವುದು ಹೇಗೆಂದು ತಿಳಿಸಿದೆ.
ಇನ್ಸ್ಟಾಗ್ರಾಂ ಲಾಗ್ ಇನ್ ಆಗಿರುವ ಸಾಧನಗಳ ಪಟ್ಟಿಯನ್ನು ನೋಡಲು ನಿಮ್ಮ ಪ್ರೊಫೈಲ್‌ಗೆ ಹೋಗಬೇಕು. ನಂತರ ಮೇಲಿನ ಬಲಭಾಗದಲ್ಲಿರುವ ಮೂರು-ಸಾಲಿನ ಮೆನುವನ್ನು ಟ್ಯಾಪ್ ಮಾಡಿ ‘ಸೆಟ್ಟಿಂಗ್ ಮತ್ತು ಪ್ರೈವಸಿ’ ಆಯ್ಕೆಗೆ ಹೋಗಬೇಕು. ಇಲ್ಲಿ ಮೆಟಾದ ಹೊಸ ಖಾತೆ ಕೇಂದ್ರ ತೆರೆಯುತ್ತದೆ.
‘ಖಾತೆ ಸೆಂಟರ್’ ಆಯ್ಕಯಲ್ಲಿ ‘ಪಾಸ್‌ವರ್ಡ್ ಮತ್ತು ಭದ್ರತೆ’ ಮೇಲೆ ಟ್ಯಾಪ್ ಮಾಡಿದಾಗ ‘ವೇರ್ ಯೂ ಆರ್ ಲಾಗ್ಡ್ ಇನ್’ (Where You’re Logged in) ಎಂಬ ಆಯ್ಕೆಯನ್ನು ನೋಡಬಹುದು, ಅದರ ಮೇಲೆ ಟ್ಯಾಪ್ ಮಾಡುವುದರಿಂದ ಯಾವ ಸಾಧನಗಳಲ್ಲಿ ಲಾಗ್ ಇನ್ ಆಗಿದ್ದೀರಿ ಎಂಬ ಮಾಹಿತಿ ಸಿಗುತ್ತದೆ.
ಇನ್ಸ್ಟಾಗ್ರಾಂ ಪ್ರೊಫೈಲ್ ಅನ್ನು ಇಲ್ಲಿ ಟ್ಯಾಪ್ ಮಾಡಿ ಮತ್ತು ಖಾತೆಯು ಲಾಗ್ ಇನ್ ಆಗಿರುವ ಸಾಧನಗಳ ಪಟ್ಟಿಯನ್ನು ಅವುಗಳ ಭೌತಿಕ ಸ್ಥಳದೊಂದಿಗೆ ನೋಡಬಹುದು. ಖಾತೆಗೆ ಬೇರೊಬ್ಬರು ಪ್ರವೇಶವನ್ನು ಪಡೆದಿದ್ದಾರೆ ಎಂದು ಕಂಡುಬಂದರೆ ಆ ಖಾತೆಯನ್ನು ಆಯ್ಕೆ ಮಾಡಿ ‘ಲಾಗ್‌ಔಟ್’ ಬಟನ್ ಕ್ಲಿಕ್ ಮಾಡಿದರೆ ಆ ಸಾಧನದಲ್ಲಿ ನಿಮ್ಮ ಇನ್ಸ್ಟಾಗ್ರಾಂ ಅನ್ನು ಉಪಯೋಗಿಸಲಾಗುವುದಿಲ್ಲ.
ವೆಬ್ ಬ್ರೌಸರ್‌ನಿಂದ ಇನ್ಸ್ಟಾಗ್ರಾಂ ಬಳಸುತ್ತಿದ್ದರೆ, ‘ಅಕೌಂಟ್ಸೆಂಟರ್.ಇನ್ಸ್ಟಾಗ್ರಾಂ.ಕಾಂ’ಗೆ (accountscenter.instagram.com) ಹೋಗಿ ‘ವೇರ್ ಯೂ ಆರ್ ಲಾಗ್ಡ್ ಇನ್’ ಪುಟದಲ್ಲಿ ಯಾವ ಸಾಧನಗಳಿಂದ ಲಾಗಿನ್‌ಗಳಾಗಿದೆ ಎಂಬುದು ತೋರಿಸುತ್ತದೆ, ಅದರ ಮುಖಾಂತರ ಬೇಡವಾದ ಖಅತೆಯನ್ನು ಲಾಗ್ ಔಟ್ ಆಗಬಹುದು. (ಏಜೆನ್ಸೀಸ್)
ಇಲ್ಲಿವೆ ಪುರುಷರಿಗೆ ಬೇಕಾದ ಸ್ಕಿನ್ ಕೇರ್ ಟಿಪ್ಸ್!