More

    ಇಲ್ಲಿವೆ ಪುರುಷರಿಗೆ ಬೇಕಾದ ಸ್ಕಿನ್​ ಕೇರ್​ ಟಿಪ್ಸ್​​!

    ಬೆಂಗಳೂರು: ಹೆಚ್ಚಿನ ಪುರುಷರಿಗೆ ತ್ವಚೆಯ ಆರೈಕೆ ಪ್ರಮುಖ ಆದ್ಯತೆಯಾಗಿರುವುದಿಲ್ಲ. ಉತ್ತಮ ತ್ವಚೆ ಇದ್ದರೆ ಆಕರ್ಷಕವಾಗಿ ಕಾಣಬಹುದು, ಅದರೊಂದಿಗೆ ಮುಖದ ನೈಸರ್ಗಿಕ ಹೊಳಪನ್ನು ಸಹ ಕಾಪಾಡಿಕೊಳ್ಳಬಹುದು. ಆದಾಗ್ಯೂ ಬಹಳಷ್ಟು ಜನ ಪುರುಷರು ಚರ್ಮದ ಪ್ರಕಾರವನ್ನು ಸಂಪೂರ್ಣವಾಗಿ ತಿಳಿಯದೆ ಅಜಾಗರೂಕರಾಗಿ ಹಲವಾರು ವಿವಿಧ ಉತ್ಪನ್ನಗಳನ್ನು ಬಳಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇದರಿಂದ ತ್ವಚೆಗೆ ಹಾನಿಯಾಗುವುದೇ ಹೆಚ್ಚು.

    ಪುರುಷರು ಮಾಡುವ ದೊಡ್ಡ ತಪ್ಪೆಂದರೆ ಚರ್ಮದ ಪ್ರಕಾರವನ್ನು ತಿಳಿಯದೆ ಇರುವುದು. ಅನೇಕ ಪುರುಷರ ಚರ್ಮವು ಮಹಿಳೆಯರಿಗಿಂತ ನೈಸರ್ಗಿಕವಾಗಿ ಹೆಚ್ಚು ಎಣ್ಣೆಯುಕ್ತವಾಗಿದೆ ಎಂದು ನಂಬಿರುತ್ತಾರೆ. ಹೆಚ್ಚಾಗಿ ಮಾಯಿಸ್ಚರೈಸ್​​ ಮಾಡುವ ಅಗತ್ಯವಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಚರ್ಮ ಒಣಗುವುದನ್ನು ತಡೆಯಲು ಮಾಯಿಶ್ಚರೈಸರ್ ಅಗತ್ಯ. ವಿಶೇಷವಾಗಿ ಶೇವ್​​ ಮಾಡಿದ ನಂತರ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಅನ್ನು ಬಳಸುವುದು ಬಹಳ ಅಗತ್ಯ.

    ಮತ್ತೊಂದು ತಪ್ಪು ಕಲ್ಪನೆಯೆಂದರೆ ಮಾಯಿಶ್ಚರೈಸರ್‌ಗಳು ಮತ್ತು ಸುಕ್ಕು ತಡೆಗಟ್ಟುವ ಕ್ರೀಮ್‌ ಮಹಿಳೆಯರಿಗೆ ಮಾತ್ರವಲ್ಲ. ವಯಸ್ಸಿಗೆ ಸಂಬಂಧಿಸಿದ ಚರ್ಮದ ಸಮಸ್ಯೆಗಳನ್ನು ತಡೆಗಟ್ಟಲು ಪುರುಷರಿಗೆ ಈ ಉತ್ಪನ್ನಗಳು ಅವಶ್ಯಕ. ರೆಟಿನಾಲ್, ಮಲ್ಬೆರಿ, ವಿಟಮಿನ್ ಸಿ (Vitamin C), ಹೈಲುರಾನಿಕ್ ಆಮ್ಲ ಮತ್ತು ನಿಯಾಸಿನಮೈಡ್ ಹೊಂದಿರುವ ಉತ್ಪನ್ನಗಳನ್ನು ರೇಖೆಗಳು ಮತ್ತು ಸುಕ್ಕುಗಳನ್ನು ತೆಗೆಯಲು ಸಹಾಯ ಮಾಡುತ್ತದೆ.

    ಕ್ಷೌರದ ವಿಷಯಕ್ಕೆ ಬಂದರೆ, ಅನೇಕ ಪುರುಷರು ರೇಜರ್ ಬಂಪ್​ ಸಮಸ್ಯೆಯನ್ನು ಎದುರಿಸುತ್ತಾರೆ. ಮುಖವನ್ನು ಉಗುರುಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯುವುದು ಒಳಿತು. ಅದರೊಂದಿಗೆ ಶೇವಿಂಗ್ ಮಾಡುವ ಮೊದಲು ಮಾಯಿಶ್ಚರೈಸರ್ ಅಥವಾ ಹಾಲಿನ ಕ್ರೀಮ್ ಅನ್ನು ಬಳಸುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು. ಅಲ್ಲದೆ, ಆಲ್ಕೋಹಾಲ್ ಹೊಂದಿರುವ ಆಫ್ಟರ್ ಶೇವ್ ಬಳಸುವುದು ಬಹಳ ತಪ್ಪು. ಏಕೆಂದರೆ ಅದು ಚರ್ಮವನ್ನು ಒಣಗಿಸಿ ಕಿರಿಕಿರಿಯನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು.

    ತ್ವಚೆಯ ರಕ್ಷಣೆ ಕಷ್ಟದ ವಿಷಯವಲ್ಲ. ಸ್ವಲ್ಪ ಪ್ರಯತ್ನ ಮತ್ತು ಚರ್ಮದ ಪ್ರಕಾರವನ್ನು ಅರ್ಥಮಾಡಿಕೊಂಡರೆ ಸಾಕು. ಉತ್ತಮ ಗುಣಮಟ್ಟದ ಚರ್ಮದ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವುದರ ಬದಲು ನೈಸರ್ಗಿಕ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸರಳವಾದ ತ್ವಚೆಯ ದಿನಚರಿಯನ್ನು ಅನುಸರಿಸುವುದು ಉತ್ತಮ. ಉತ್ಪನ್ನಗಳನ್ನು ಖರೀದಿಸುವ ಮೊದಲು ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಉತ್ಪನ್ನಗಳನ್ನು ಖರೀದಿಸುವುದು ಒಳ್ಳೆಯದು. (ಏಜೆನ್ಸೀಸ್)

    ಮಾನವ ಮಿದುಳು ಓದುವ ತಂತ್ರಜ್ಞಾನ!; ಟೆಕ್ಸಾಸ್ ವಿವಿ ವಿಜ್ಞಾನಿಗಳ ಸಾಧನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts