More

    ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಗಾಗಿ ಹೀಗೆ ಮಾಡಿ

    ನವದೆಹಲಿ : ಚಳಿಗಾಲ ಕಳೆದು ಬೇಸಿಗೆ ಕಾಲ ಬಂದಾಯ್ತು. ಇನ್ನು ಚರ್ಮದ ಆರೈಕೆಯ ವಿಧಾನ ಕೂಡ ಬದಲಾಗಬೇಕು. ಬೇಸಿಗೆಯಲ್ಲಿ ಚರ್ಮಕ್ಕೆ ಅಗತ್ಯ ನೀರಿನ ಅಂಶ ದೊರೆಯುವುದರೊಂದಿಗೆ ಬಿರುಸಾದ ಸೂರ್ಯನ ಅಲ್ಟ್ರಾವೈಲೆಟ್​​ ಕಿರಣಗಳಿಂದ ರಕ್ಷಣೆ ಸಿಗುವಂತೆ ನೋಡಿಕೊಳ್ಳಿ. ಇದಕ್ಕಾಗಿ ಕ್ಲೆನ್ಸಿಂಗ್, ಟೋನಿಂಗ್, ಮಾಯಿಸ್ಚರೈಸಿಂಗ್ ಮತ್ತು ಸನ್​ಬ್ಲಾಕ್​ – ಹೀಗೆ ನಾಲ್ಕು ಹಂತಗಳ ಆರೈಕೆಯು ನಿಮ್ಮ ನಿತ್ಯ ರೂಢಿಯಾಗಬೇಕು ಎನ್ನುತ್ತಾರೆ ತಜ್ಞರು.

    1. ಕ್ಲೆನ್ಸಿಂಗ್ : ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಸೌಮ್ಯವಾದ, ನಾನ್-ಫೋಮಿಂಗ್ ಕ್ಲೆನ್ಸರ್​​ಅನ್ನು ಬಳಸಬೇಕು ಎಂದು ದೆಹಲಿ ಮೂಲದ ಚರ್ಮರೋಗ ವೈದ್ಯೆ ಡಾ.ಕಿರಣ್ ಲೋಹಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹೆಚ್ಚು ಬೆವರುವ ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ಸ್ವಚ್ಛವಾಗಿಡಲು ಮತ್ತು ಬ್ಲ್ಯಾಕ್‌ಹೆಡ್‌, ವೈಟ್‌ಹೆಡ್‌ ಮತ್ತು ಹಠಾತ್ ಮೊಡವೆಗಳ ಉದ್ಭವವನ್ನು ತಡೆಯಲು ಉತ್ತಮ ಕ್ಲೆನ್ಸರ್‌ ಬಳಕೆ ಮೊದಲ ಹೆಜ್ಜೆಯಾಗಿದೆ ಎಂದಿದ್ದಾರೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ; ಈ ಕಾಲದಲ್ಲಿ ಸೇವಿಸಬಹುದಾದ ಪಾನೀಯಗಳು

    2. ಟೋನಿಂಗ್​: ಆಲ್ಕೊಹಾಲ್ ರಹಿತ ಟೋನರ್​ಅನ್ನು ಹೆಚ್ಚಿನ ಧೂಳು, ಎಣ್ಣೆ ಅಂಶ ಮತ್ತು ಮೇಕ್​ಅಪ್ ತೆಗೆಯಲು ಬಳಸಬೇಕು. ಉತ್ತಮ ಗುಣಮಟ್ಟದ ಟೋನರ್ ಆಯ್ಕೆ ಮಾಡಿ.

    3. ಮಾಯಿಸ್ಚರೈಸಿಂಗ್: ನಿಮ್ಮ ಚರ್ಮದ ಟೈಪ್ ಯಾವುದಾದರೂ ಸರಿ, ನಿತ್ಯ ಮಾಯಿಸ್ಚರೈಸ್ ಮಾಡಲೇಬೇಕು. ಇನ್ನು ಒಣ ತ್ವಚೆ ಇರುವವರು ಹೆಚ್ಚು ಗಾಢವಾದ ಮಾಯಿಸ್ಚರೈಸರ್ ಬಳಸಬಹುದು ಎಂದಿದ್ದಾರೆ.

    ಇದನ್ನೂ ಓದಿ: ಈ ಮುದ್ದು ಮಗು ಮುಂದೆ ಬಿಗ್ ಬಾಸ್ ಖ್ಯಾತಿ ಗಳಿಸಿದಾಕೆ… ಯಾರೆಂದು ಊಹಿಸಬಲ್ಲಿರಾ?!

    4. ಸನ್​ಸ್ಕ್ರೀನ್ : ಬೇಸಿಗೆಯಲ್ಲಿ ಚರ್ಮದ ಆರೈಕೆಯಲ್ಲಿ ಬಹಳ ಮುಖ್ಯವಾದ ಅಂಶ ಸನ್​ಸ್ಕ್ರೀನ್ ಬಳಕೆ. ಹೊರಗೆ ಓಡಾಡುವ ಜನರಂತೂ ಇದನ್ನು ಬೆಳಿಗ್ಗೆ ಮರೆಯದೇ ಬಳಸಬೇಕು. “ಬೆಳಿಗ್ಗೆ ಕನಿಷ್ಠ ಎರಡು ಚಮಚದಷ್ಟು ಸನ್​​ಸ್ಕ್ರೀನ್​ಅನ್ನು ಹಚ್ಚಿಕೊಳ್ಳಿ. ಮತ್ತೆ ನಿಮ್ಮ ಸ್ಕಿನ್ ಟೈಪ್ ಮತ್ತು ಹೊರಗೆ ಎಷ್ಟು ಸಮಯ ಕಳೆಯುತ್ತೀರಿ ಎನ್ನುವುದನ್ನು ಆಧರಿಸಿ, ಐದಾರು ಗಂಟೆಗಳ ನಂತರ ಅಥವಾ ಸಂಜೆ ಮತ್ತೆ ಹಚ್ಚಿ” ಎನ್ನುತ್ತಾರೆ, ಡಾ. ಲೋಹಿಯಾ.

    ನಿಮ್ಮ ನಂಬಿಕೆಯ ಬ್ಯೂಟಿಷಿಯನ್ಸ್ ಬಳಿ ಹೋಗಿ ಹೈಡ್ರಾ ಫೇಶಿಯಲ್​​ಗಳಿಂದ ಹಿಡಿದು ಆಖ್ವಾ ಥರ್ಮಲ್​ಗಳವರೆಗೆ ನಿಮ್ಮ ಚರ್ಮಕ್ಕೆ ತಕ್ಕಂತೆ ಶುಶ್ರೂಷೆ ಮಾಡಿಸಿಕೊಳ್ಳಲು ಕೂಡ ಇದು ಉತ್ತಮ ಕಾಲ. ಜೊತೆಗೆ ಸಮತೋಲನಯುತ ಆರೋಗ್ಯಕಾರಿ ಡಯಟ್​ ಪಾಲಿಸಿ. ಮುಖ್ಯವಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಮರೆಯಬೇಡಿ. (ಏಜೆನ್ಸೀಸ್)

    ಯಾರೀ ಮತ್ಸ್ಯಕನ್ಯೆ ? ಮತ್ತೊಮ್ಮೆ ನೋಡಿ…

    ಬೇಸಿಗೆ ರಜೆಯಲ್ಲಿ ನವೀನ ಅವಕಾಶ : ಶಾಲಾ ಮಕ್ಕಳಿಗಾಗಿ ‘ಇನ್ನೋವೇಷನ್ ಅವಾರ್ಡ್ 2021’ ಸ್ಪರ್ಧೆ

    ಈ ಬಾರಿಯ ಬಿಗ್​ಬಾಸ್​ ವಿನ್ನರ್​ ಭವಿಷ್ಯ ನುಡಿದ ನೆಟ್ಟಿಗರು: ಲ್ಯಾಗ್​ ಮಂಜು, ರಾಜೀವ್​ ಅಲ್ಲ, ಮತ್ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts