More

    ಬೇಸಿಗೆ ರಜೆಯಲ್ಲಿ ನವೀನ ಅವಕಾಶ : ಶಾಲಾ ಮಕ್ಕಳಿಗಾಗಿ ‘ಇನ್ನೋವೇಷನ್ ಅವಾರ್ಡ್ 2021’ ಸ್ಪರ್ಧೆ

    ನವದೆಹಲಿ : ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಸಂಸ್ಕೃತಿಯನ್ನು ಬೆಳೆಸಲು, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್)  ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಯೊಂದನ್ನು ಆಯೋಜಿಸಿದೆ. “ಅಸ್ತಿತ್ವದಲ್ಲಿರುವ ಸಾಮಾಜಿಕ ಸಮಸ್ಯೆಗಳಿಗೆ” ಪರಿಹಾರ ನೀಡುವ “ನವೀನ ವೈಜ್ಞಾನಿಕ ಮತ್ತು ತಾಂತ್ರಿಕ” ಪರಿಕಲ್ಪನೆಗಳು, ಆಲೋಚನೆಗಳು, ಮತ್ತು ವಿನ್ಯಾಸಗಳಿಗೆ “ಇನ್ನೋವೇಷನ್ ಅವಾರ್ಡ್ ಫಾರ್ ಸ್ಕೂಲ್ ಚಿಲ್ರನ್, 2021” ಪ್ರಶಸ್ತಿಯನ್ನು ನೀಡಲಿದೆ.

    ಈ ಸ್ಪರ್ಧೆಯಲ್ಲಿ 12 ನೇ ತರಗತಿವರೆಗೆ ಯಾವುದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದು. ಹದಿನೈದು ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 1 ಲಕ್ಷ ರೂ,, ಎರಡನೇ ಬಹುಮಾನ 50,000 ರೂ. (ಇಬ್ಬರು ವಿಜೇತರಿಗೆ), ಮೂರನೇ ಬಹುಮಾನ 30,000 ರೂ. (ಮೂವರಿಗೆ), ನಾಲ್ಕನೇ ಬಹುಮಾನ 20,000 ರೂ. (ನಾಲ್ವರಿಗೆ) ಮತ್ತು ಐದನೇ ಬಹುಮಾನ 10,000 ರೂ.(ಐವರಿಗೆ) ಎನ್ನಲಾಗಿದೆ. ಸ್ಪರ್ಧೆಗೆ ಪ್ರಸ್ತಾವನೆಗಳನ್ನು ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನಾಂಕವಾಗಿದೆ.

    ಇದನ್ನೂ ಓದಿ: ಚಿಕ್ಕ ಮಕ್ಕಳಲ್ಲಿ ಹೆಚ್ಚಿದ ಕರೊನಾ ಸೋಂಕು; ಎಚ್ಚರವಾಗಿರಲು ಸಲಹೆ

    ಸ್ಪರ್ಧಿಸಲು ಇಚ್ಛಿಸುವವರು ತಮ್ಮ ಇನ್ನೋವೇಷನ್ ಪ್ರಪೋಸಲ್​ನ ಕುರಿತಾದ ವಿವರಗಳನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮತ್ತು 5,000 ಪದಗಳನ್ನು ಮೀರದಂತೆ ಬರೆದು ಸಲ್ಲಿಸಬಹುದಾಗಿದೆ. ಇದರೊಂದಿಗೆ ತಮ್ಮ ಶಾಲೆಯ ಪ್ರಾಂಶುಪಾಲರು ನೀಡುವ ದೃಢೀಕರಣ ಪತ್ರವನ್ನೂ ಲಗತ್ತಿಸಬೇಕು. ತಮ್ಮ ಇನ್ನೋವೇಷನ್ ಅಥವಾ ನವೀನ ಆವಿಷ್ಕಾರದ ಶೀರ್ಷಿಕೆಯೊಂದಿಗೆ, ಹೆಸರು ಮತ್ತು ಹುಟ್ಟಿದ ದಿನಾಂಕ, ಶಾಲೆ ಮತ್ತು ವಸತಿ ವಿಳಾಸ, ಓದುತ್ತಿರುವ ತರಗತಿ, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸಗಳನ್ನು ಸ್ಪರ್ಧಿಗಳು ನೀಡಬೇಕು ಎಂದು ಸಿಎಸ್ಐಆರ್ ತಿಳಿಸಿದೆ.

    ಪ್ರಸ್ತಾವನೆಗಳನ್ನು ಸಲ್ಲಿಸಬೇಕಾದ ವಿಳಾಸ : ಹೆಡ್, ಸಿಎಸ್​ಐಆರ್-ಇನೋವೇಷನ್ ಪ್ರೊಟೆಕ್ಷನ್ ಯುನಿಟ್, ವಿಜ್ನಾನ್ ಸೂಚನಾ ಭವನ್, 14-ಸತ್ಸಂಗ್ ವಿಹಾರ್ ಮಾರ್ಗ್, ಸ್ಪೆಷಲ್ ಇನ್ಸ್​ಟಿಟ್ಯೂಷನಲ್ ಏರಿಯಾ, ನ್ಯೂ ಡೆಲ್ಲಿ – 110067. ಈ ಬಗ್ಗೆ ಸಿಬಿಎಸ್​​ಸಿ ಸಹ ತನ್ನ ಎಲ್ಲಾ ಶಾಲೆಗಳ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಸ್ಪರ್ಧೆಯಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಬೇಕಾಗಿ ಹೇಳಿದೆ. ಹೆಚ್ಚಿನ ವಿವರಗಳು csir.res.in/csir-innovation-award-school-children-2021 ವೆಬ್​ ಪೇಜ್​ನಲ್ಲಿ ಲಭ್ಯವಿದೆ. (ಏಜೆನ್ಸೀಸ್)

    VIDEO | ವರದಿಗಾರ್ತಿಯ ಮೈಕ್​ ಕಸಿದು ಓಡಿದ ನಾಯಿ! ಎಲ್ಲವೂ ಲೈವ್ ಟೆಲಿಕಾಸ್ಟ್!

    ಪಬ್​ ಜೀ ಆಡಲು ಮೈದಾನಕ್ಕೆ ಹೋದ 12 ವರ್ಷದ ಬಾಲಕ ಭೀಕರ ಹತ್ಯೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts