More

    ಚಳಿಗಾಲದಲ್ಲಿ ಚರ್ಮವನ್ನು ರಕ್ಷಿಸೋದು ಹೇಗೆ? ಇಲ್ಲಿವೆ ಸರಳ ಸಲಹೆಗಳು…

    ಬೆಂಗಳೂರು: ಚುಮು ಚುಮು ಚಳಿಯ ನಡುವೆ ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವುದು ಎಂದರೆ ಅದು ದೊಡ್ಡ ಸಾಧನೆ! ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ನಿಮ್ಮ ಚರ್ಮದ ಆರೋಗ್ಯದ ಬಗ್ಗೆ ಯೋಚಿಸಿದ್ದೀರಾ? ಒಳ್ಳೆಯದು, ವ್ಯಾಯಾಮ ಮಾಡುವಾಗ ಬೆವರಿನಿಂದ ಕಿರಿಕಿರಿ ಉಂಟಾಗಿ ಚರ್ಮ ಕೆಂಪು ಕಟ್ಟುವುದರಿಂದ ಹಿಡಿದು ಇತರ ಸಮಸ್ಯೆಗಳೂ ಕಂಡು ಬರುತ್ತವೆ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವುದರ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.

    ಅನೇಕ ಜನರು ಸಾಮಾನ್ಯವಾಗಿ ಚಳಿಗಾಲದ ಉದ್ದಕ್ಕೂ ಒಣ ತ್ವಚೆಯಿಂದ ಬಳಲುತ್ತಾರೆ. ಇನ್ನೂ ಕೆಲವರ ಚರ್ಮ ಬಿರುಕು ಕೂಡ ಬಿಡುತ್ತದೆ. ಆದ್ದರಿಂದ, ಸಾಮಾನ್ಯವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿರುವವರು ತಮ್ಮ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು.

    1. ಚಳಿಗಾಲದಲ್ಲೂ ಹೆಚ್ಚು ನೀರು ಕುಡಿಯಿರಿ:
    ಚಳಿಗಾಲದಲ್ಲಿ ಜನರು ಕಡಿಮೆ ನೀರು ಕುಡಿಯುತ್ತಾರೆ. ಏಕೆಂದರೆ ಹೊರಗಡೆ ಚಳಿ ಇರುವಾಗ ಶರೀರದಿಂದ ಹೆಚ್ಚು ನೀರು ಆವಿ ಆಗುತ್ತಿಲ್ಲ ಎಂದು ಶರೀರವೇ ತಪ್ಪಾಗಿ ತಿಳಿದುಕೊಳ್ಳುತ್ತದೆ. ಇದೆರ ಜೊತೆಗೆ ಜಿಮ್‌ನಲ್ಲಿ ಅಥವಾ ಆಟದ ಮೈದಾನದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿದ್ದರೆ, ನೀವು ಹೆಚ್ಚು ನೀರು ಕುಡಿಯಲೇಬೇಕು. ಶರೀರದಲ್ಲಿ ಸಾಕಷ್ಟು ನೀರು ಮತ್ತು ಕೊಬ್ಬಿನ ಅಂಶ ಇದ್ದಾಗ ಚರ್ಮ ಬಿರುಕು ಬಿಡುವುದಿಲ್ಲ.

    2. ಬೆವರನ್ನು ಆಗಾಗ ಒರೆಸಲು ಮರೆಯಬೇಡಿ
    ದೈಹಿಕ ಕೆಲಸದಲ್ಲಿ ಅಥವಾ ಜಿಮ್‌ನಲ್ಲಿ ಚಟುವಟಿಕೆಯ ನಂತರ ನಿಮ್ಮ ಚರ್ಮದಲ್ಲಿ ಆಳವಾಗಿ ಕೊಳೆ ನೆಲೆಗೊಂಡಿರುತ್ತೆ. ಇದನ್ನು ತೆಗೆದುಹಾಕಲು ಒಂದೇ ದಾರಿ. ಆಗಾಗ ಬೆವರನ್ನು ಒರೆಸುತ್ತಾ ಇರಬೇಕು. ಇಲ್ಲವಾದರೆ ಆ ಕೊಳೆ ಅಲ್ಲೇ ಒಟ್ಟಾಗುತ್ತಾ ಹೋಗಿ ಚರ್ಮದ ಹೊಳಪನ್ನು ಕಡಿಮೆ ಮಾಡುತ್ತದೆ. ಅದಲ್ಲದೆ, ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ.

    3. ಉತ್ತಮ ಸನ್‌ಸ್ಕ್ರೀನ್ ಬಳಸಿ
    ನೀವು ನಾಲ್ಕು ಗೋಡೆಗಳ ಹೊರಗೆ ವ್ಯಾಯಾಮ ಅಥವಾ ಕೆಲಸ ಮಾಡುತ್ತಿದ್ದರೆ, ಸನ್‌ಸ್ಕ್ರೀನ್ ನಿಮ್ಮ ಚರ್ಮಕ್ಕೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತದೆ. ನೇರಳಾತೀತ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್ ಸಹಾಯ ಮಾಡುತ್ತದೆ. ಮೋಡ ಕವಿದ ದಿನಗಳಲ್ಲೂ ನೇರಳಾತೀತ ಕಿರಣಗಳು ಭೂಮಿಗೆ ತಲುಪುತ್ತಾ ಇರುತ್ತೆ. ಹೀಗಾಗಿ ಸದಾ ಸನ್​ ಸ್ಕ್ರೀನ್​ ಬಳಸುವುದನ್ನು ಮರೆಯಬಾರದು.

    4. ಮಾಯಿಶ್ಚರೈಸರ್ ಅತ್ಯಗತ್ಯ
    ಬೆವರುವಿಕೆ ಶರೀರದ ಒಳಗೆ ಮತ್ತು ಹೊರಗೆ ನಿರ್ಜಲೀಕರಣಕ್ಕೆ ಕಾರಣವಾಡುತ್ತದೆ. ಅದಕ್ಕಾಗಿ ಮಾಯಿಶ್ಚರೈಸರ್ ಬಳಸಬೇಕು. ಸನ್ ಸ್ಕ್ರೀನ್​ ನಂತರ ಮಾಯಿಶ್ಚರೈಸರ್ ಬಳಸಬಹುದು.

    5. ಒಮೆಗಾ -3 ಸೇವನೆಯನ್ನು ಹೆಚ್ಚಿಸಿ
    ನಿಯಮಿತವಾಗಿ ಫಿಟ್‌ನೆಸ್ ಬಗ್ಗೆ ಗಮನ ಹೊಂದಿರುವ ಜನರು ಸಾಮಾನ್ಯವಾಗಿ ತಮ್ಮ ಆಹಾರದ ಬಗ್ಗೆ ಕಾಳಜಿಯನ್ನು ಹೊಂದಿರುತ್ತಾರೆ. ಆದರೂ ಒಮೆಗಾ-3 ಪೋಷಕಾಂಶದ ಸೇವನೆಯನ್ನು ಹೆಚ್ಚಿಸುವುದರಿಂದ ಚರ್ಮವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದಲ್ಲದೆ ಇದು ಚರ್ಮದಲ್ಲಿ ಎಣ್ಣೆ ಅಂಶದ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಅದಲ್ಲದೇ ಬೆವರಿನ ಕಾರಣದಿಂದಾಗಿ ಚರ್ಮದ ಒಡೆಯುವಿಕೆಯನ್ನೂ ತಡೆಯುತ್ತದೆ.

    6. ಪ್ರತ್ಯೇಕ ಮತ್ತು ತಾಜಾ ಟವೆಲ್ಗಳನ್ನು ಇರಿಸಿ
    ಮುಖವನ್ನು ತೊಳೆಯುವುದು ನಿಮ್ಮ ಚರ್ಮದ ಆರೈಕೆಯ ಪ್ರಮುಖ ಭಾಗವಾಗಿದೆ. ಜಿಮ್‌ನಲ್ಲಿ ಅಥವಾ ವ್ಯಾಯಾಮ ಮಾಡುವಾಗ ಯಾವಾಗಲೂ ಎರಡು ಟವೆಲ್‌ಗಳನ್ನು ಜೊತೆಗಿರಲಿ. ಒಂದನ್ನು ಬೆವರು ಒರೆಸಲು ಬಳಸಿ. ಇನ್ನೊಂದನ್ನು ಮುಖ ತೊಳೆದ ನಂತರ ಒರೆಸಲು ಇಡಿ. ಒಂದೇ ಟವೆಲ್​ ಅನ್ನು ಎರಡಕ್ಕೂ ಬಳಸಬೇಡಿ. ಇದು ಚರ್ಮದ ಸೋಕೊಗೆ ಕಾರಣ ಆಗಬಹುದು.

    7. ಮುಖ ಮುಟ್ಟುವುದನ್ನು ತಪ್ಪಿಸಿ
    ಬೆವರುವಾಗ ನಿಮ್ಮ ಮುಖವನ್ನು ಸ್ಪರ್ಶಿಸುವುದು ಸಾಮಾನ್ಯ. ಆದರೆ ಕೆಲಸ ಮಾಡುವಾಗ ಅಥವಾ ಯಾವುದೇ ಕ್ರೀಡೆಯಲ್ಲಿ ಭಾಗವಹಿಸುವಾಗ ಹಾಗೆ ಮಾಡುವುದನ್ನು ತಡೆಯಿರಿ. ಬದಲಾಗಿ, ಟವೆಲ್​ ಬಳಸಿಕೊಳ್ಳಿ. ದೈಹಿಕ ಚಟುವಟಿಕೆ ನಂತರ ನಮ್ಮ ಕೈಯಲ್ಲಿರಬಹುದಾದ ಕೊಳಕು ಮತ್ತು ಬ್ಯಾಕ್ಟೀರಿಯಾಗಳನ್ನು ನಮ್ಮ ಚರ್ಮಕ್ಕೆ ತಾಗಿಸುವುದು ಸೂಕ್ತವಲ್ಲ.

    8. ಸ್ನಾನ ಮಾಡಿ
    ನಿಮ್ಮ ವ್ಯಾಯಾಮದ ನಂತರ, ನಿಮ್ಮ ದೇಹ ತಣ್ಣಗಾದ ತಕ್ಷಣ ಸ್ನಾನ ಮಾಡಿ. ತಡ ಮಾಡುವುದರಿಂದ ಬೆವರು ಕೊಳೆ, ಮತ್ತು ಕಾಕ್ಟೈಲ್ ನಿಮ್ಮ ಚರ್ಮದ ಮೇಲೆ ದೀರ್ಘಕಾಲದವರೆಗೆ ಉಳಿಯಬಹುದು. ಇದು ದದ್ದುಗಳ ಮತ್ತು ಮೊಡವೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts