More

    ಈ ಐದು ಸರಳ ಆಹಾರ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಟ್ಟು ಕಾಪಾಡುತ್ತೆ..!

    ಬೆಂಗಳೂರು: ರಾಜ್ಯಾದ್ಯಂತ ಈಗ ಚಳಿಗಾಲ ಶುರುವಾಗಿದೆ. ಅದರ ಜೊತೆಗೆ ಮಾಂಡೌಸ್​ ಚಮಡಮಾರುತವೂ ಸೇರಿ ಬೆಂಗಳೂರು ತಣ್ಣಗಾಗಿದೆ. ಚಳಿಗಾಲದಲ್ಲಿ ಶರೀರವನ್ನು ಚಳಿಯಿಂದ ಕಾಪಾಡುವುದೇ ಒಂದು ಸಾಹಸ. ಕೆಲವೊಮ್ಮೆ ಎಷ್ಟೇ ಸ್ವೆಟ್ಟರ್​, ಕಂಬಳಿಗಳನ್ನು ಹೊದ್ದುಕೊಂಡರೂ ಸಾಲುವುದಿಲ್ಲ. ಆಹ ನಾವು ನಮ್ಮ ಆಹಾರದಲ್ಲೇ ಬದಲಾವಣೆ ಮಾಡಿಕೊಳ್ಳಬೇಕಾಗುತ್ತೆ. ಹಾಗೆಂದು ಆಹಾರ ಬದಲಾಯಿಸಿ ಸ್ವೆಟ್ಟರ್​-ಜ್ಯಾಕೆಟ್​ಗಳನ್ನು ಬಿಟ್ಟರೆ ಆರೋಗ್ಯ ಕೆಡುವುದು ಖಚಿತ.

    ನಾವು ದಿನನಿತ್ಯವೂ ಬಳಸುವ ವಸ್ತುಗಳನ್ನೇ ಬಳಸಿ ಚಳಿಗಾಲದಲ್ಲಿ ಶರೀರವನ್ನು ರೋಗರಹಿತವಾಗಿ ಇರಿಸಿಕೊಳ್ಳಬಹುದು. ಈ ಆಹಾರ ಪದಾರ್ಥಗಳು ಯಾವುದು ಎಂದು ಕೇಳುತ್ತೀರಾ? ಇಲ್ಲಿದೆ ಉತ್ತರ:

    ಬೆಲ್ಲ ಮತ್ತು ತುಪ್ಪ:

    ಈ ಐದು ಸರಳ ಆಹಾರ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಟ್ಟು ಕಾಪಾಡುತ್ತೆ..!

    ಬೆಲ್ಲವನ್ನು ಚಳಿಗಾಲದ ಸೂಪರ್‌ಫುಡ್ ಎಂದೇ ಕರೆಯಲಾಗುತ್ತೆ. ಇದು ಶರೀರಕ್ಕೆ ಬೇಕಾದ ಉಷ್ಣತೆಯನ್ನು ನೀಡುತ್ತದೆ. ಜೊತೆಗೆ ಅದರಲ್ಲಿರುವ ಅನೇಕ ಖನಿಜಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದನ್ನು ತುಪ್ಪದೊಂದಿಗೆ ಸೇರಿಸಿದರೆ ಇನ್ನೂ ಉತ್ತಮ!

    ಮನೆಯಲ್ಲಿ ಮಾಡುವ ದೋಸೆ, ಇಡ್ಲಿ, ರೊಟ್ಟಿಗಳನ್ನು ತುಪ್ಪ ಮತ್ತು ಬೆಲ್ಲದೊಂದಿಗೆ ತಿನ್ನಬಹುದು. ತುಪ್ಪದೊಂದಿಗೆ ಬೆಲ್ಲವನ್ನು ತಿನ್ನುವುದರಿಂದ ಶೀತ-ಕಫವನ್ನು ತಡೆಗಟ್ಟಬಹುದು. ಇದರೊಂದಿಗೆ ಸ್ವಲ್ಪ ಜೀರಿಗೆಯನ್ನು ಪುಡಿ ಮಾಡಿ ಸೇವಿಸಿದರೆ ಶೀತ-ಕಫಕ್ಕೆ ಮನೆ ಮದ್ದೇ ಆಗುತ್ತದೆ.

     

    ಎಳ್ಳು:

    ಈ ಐದು ಸರಳ ಆಹಾರ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಟ್ಟು ಕಾಪಾಡುತ್ತೆ..!
    ಎಳ್ಳು ಚಳಿಗಾಲದಲ್ಲಿ ತಿಂದರೆ ವಿಶೇಷ ಪ್ರಯೋಜನಗಳಿವೆ ಎಳ್ಳಿನಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿದ್ದು ಇದು ಶರೀರವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತೆ. ಅದಲ್ಲದೇ ಇದು ಕಣ್ಣು, ಚರ್ಮ ಮತ್ತು ಮೂಳೆಗಳಿಗೆ ಆರೋಗ್ಯಕರ.

     

    ಹುರುಳಿ:
    ಈ ಐದು ಸರಳ ಆಹಾರ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಟ್ಟು ಕಾಪಾಡುತ್ತೆ..!
    ಹಾರ್ಸ್​ಗ್ರಾಂ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಹುರುಳಿ ಪೋಷಕಾಂಶಗಳ ಆಗರ. ಇದನ್ನು ಸೇವಿಸಿದರೆ ಶರೀರದಲ್ಲಿ ಚಳಿಯನ್ನು ತಡೆಯುವ ಶಕ್ತಿ ಹೆಚ್ಚಾಗುತ್ತದೆ. ಅದಲ್ಲದೇ ಇದನ್ನು ಆಹಾರದಲ್ಲಿ ಬಳಕೆ ಮಾಡಿದರೆ ನಾವು ಬೇಗನೆ ಶಕ್ತಿಗುಂದುವುದಿಲ್ಲ. ಇದು ಚರ್ಮ ಮತ್ತು ನೆತ್ತಿಯ ಮೇಲೆ ಚಳಿಗಾಲದಲ್ಲಿ ಉತ್ತಮ ತೇವಾಂಶ ಮತ್ತು ಪೋಷಣೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

     

    ಬೆಣ್ಣೆ:

    ಈ ಐದು ಸರಳ ಆಹಾರ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಟ್ಟು ಕಾಪಾಡುತ್ತೆ..!

    ಬೆಣ್ಣೆ ಕೂಡ ಚಳಿಗಾಲದಲ್ಲಿ ಶರೀರವನ್ನು ಬೆಚ್ಚಗಿಡಲು ಸಹಾಯ ಮಾಡುತ್ತೆ. ಬೆಣ್ಣೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಶರೀರದಿಂದ ಸುಗಮವಾಗಿ ಮಲವನ್ನು ಹೊರಹಾಕುತ್ತದೆ.ಇದು ವಿಟಮಿನ್ ಡಿ ನಂತಹ ವಿಟಮಿನ್‌ಗಳನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ. ಅದಲ್ಲದೇ ಇದು ಒಳ್ಳೆಯ ಕೊಬ್ಬು ಆಗಿರುವುದರಿಂದ ಚಳಿಗಾಲದಲ್ಲಿ ಖಂಡಿತವಾಗಿಯೂ ರಕ್ಷಣೆ ನೀಡುತ್ತದೆ. ಆದ್ದರಿಂದ, ನಿಮ್ಮ ಚಳಿಗಾಲದ ತಿಂಡಿ- ತಿನಸುಗಳಲ್ಲಿ ಇದನ್ನು ಸೇರಿಸಲು ಮರೆಯಬೇಡಿ.

    ಸಜ್ಜೆ:

    ಈ ಐದು ಸರಳ ಆಹಾರ ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಟ್ಟು ಕಾಪಾಡುತ್ತೆ..!
    ಇದು ಮೂಲತಃ ರಾಜಸ್ಥಾನದಂತಹ ಪ್ರದೇಶದಲ್ಲಿ ಕಾಣಸಿಗುವ ಧಾನ್ಯ. ಇದೂ ಚಳಿಗಾಲದಲ್ಲಿ ಶರೀರವನ್ನು ಬೆಚ್ಚಗಿಡಲು ಸಹಕರಿಸುತ್ತೆ. ಇದು ಅನೇಕ ಖನಿಜಗಳು, ಫೈಬರ್​ಗಳು, ಪೋಷಕಾಂಶಗಳಿಂದ ತುಂಬಿದೆ. ಇದರ ರೊಟ್ಟಿ, ಖಿಚಡಿ, ಉಪ್ಪಿಟ್ಟು, ತಾಲಿಪಟ್ಟುಗಳನ್ನು ಮಾಡಿ ತಿನ್ನಬಹುದು. ಅವನ್ನು ಬೆಲ್ಲ, ತುಪ್ಪ, ಬೆಣ್ಣೆಗಳೊಡನೆಯೂ ಸೇವಿಸಬಹುದು.

    ಮೇಲೆ ಹೇಳಲ್ಪಟ್ಟಿರುವ ಆಹಾರ ಸಾಮಗ್ರಿಯನ್ನು ಯಾವ ರೀತಿಯಲ್ಲೂ ಬಳಸಿ ಅಡುಗೆ ಮಾಡಬಹುದು. ಒಟ್ಟಿನಲ್ಲಿ ಅವು ಆರೋಗ್ಯ ವರ್ಧಕ ಆಹಾರಗಳು ಎನ್ನುವುದರಲ್ಲಿ ಸಂಶಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts