More

    ರಾಮಾಯಣದಿಂದ ಸ್ಫೂರ್ತಿ! ಚರ್ಮ ಸುಲಿದು ಪಾದರಕ್ಷೆ ಮಾಡಿಸಿ ತಾಯಿಗೆ ಗಿಫ್ಟ್​ ಕೊಟ್ಟ ಪುತ್ರ

    ಅಮ್ಮ ಎಂದರೆ ಒಂದು ಬಾಂಧವ್ಯ, ಒಂದು ವಾತ್ಸಲ್ಯ. ಅಮ್ಮನನ್ನು ಮೀರಿದ ದೇವರಿಲ್ಲ ಎಂಬ ಮಾತಿದೆ. ತಾಯಿಯ ಪ್ರೀತಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ತಾನು ಎಲ್ಲ ಕಡೆ ಇರಲಾಗದು ಅಂತಾ ದೇವರು ತನ್ನ ಪ್ರತಿರೂಪವಾಗಿ ಅಮ್ಮನನ್ನು ಭೂಮಿಗೆ ಕಳುಹಿಸಿದನು ಎಂದು ಹಿರಿಯರು ಹೇಳುತ್ತಾರೆ. ಒಂಬತ್ತು ತಿಂಗಳು ಹೊತ್ತು, ಹೆತ್ತ ತಾಯಿ ತನ್ನ ಮಗುವಿನಲ್ಲಿ ತನ್ನ ನೋವನ್ನು ಮರೆಯುತ್ತಾಳೆ. ತನ್ನ ಮಗುವಿಗೆ ಕಷ್ಟ ಬಂದರೆ ಅವಳ ಕಣ್ಣಲ್ಲಿ ನೀರು ಬರುತ್ತದೆ. ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬೇಕೆಂದು ಬಯಸುತ್ತಾರೆ. ಬಾಲ್ಯದಿಂದಲೂ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಪಾಲಕರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಆದರೆ, ಇತ್ತೀಚೆಗೆ ಕೆಲವರು ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಇಂತಹ ಸಮಾಜದಲ್ಲಿ ತಾಯಿಗಾಗಿ ಪುತ್ರನೊಬ್ಬ ಮಾಡಿರುವ ಕೆಲಸ ಎಲ್ಲರಿಗೂ ಮಾದರಿಯಾಗುವಂತಿದೆ.

    ಮಧ್ಯಪ್ರದೇಶದ ಉಜ್ಜಯಿನಿ ಮೂಲದ ರೌನಕ್ ಗುರ್ಜರ್ ಒಂದು ಕಾಲದಲ್ಲಿ ರೌಡಿ ಶೀಟರ್ ಆಗಿದ್ದ. ಒಮ್ಮೆ ಪೊಲೀಸರಿಂದ ಗುಂಡೇಟು ಸಹ ತಿಂದಿದ್ದ. ಆದರೆ, ರಾಮಾಯಣ ಉಪದೇಶಗಳನ್ನು ಕೇಳಿ ಮನಪರಿವರ್ತನೆಗೊಂಡ ಗುರ್ಜರ್​, ತನ್ನ ರೌಡಿ ಜೀವನಕ್ಕೆ ವಿದಾಯ ಹೇಳಿದನು. ರಾಮಾಯಣದಲ್ಲಿ ಶ್ರೀರಾಮನು ತನ್ನ ತಾಯಿಗೆ ತೋರಿದ ಭಕ್ತಿಯಿಂದ ಬಹಳ ಪ್ರಭಾವಿತನಾಗಿ, ಈ ಪ್ರಪಂಚದಲ್ಲಿ ಎಂದೂ ಕೇಳಿರದ ಉಡುಗೊರೆಯನ್ನು ತನ್ನ ತಾಯಿಗೆ ನೀಡಲು ಯೋಚಿಸಿದನು. ರಾಮಾಯಣದಲ್ಲಿ ರಾಮ ಹೇಳಿರುವಂತೆ ತನ್ನ ಚರ್ಮದಿಂದ ಪಾದರಕ್ಷೆಯನ್ನು ಮಾಡಿ ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ. ರೌನಕ್ ಅವರು ಕೆಲವು ಸಮಯದಿಂದ ನಿಯಮಿತವಾಗಿ ರಾಮಾಯಣವನ್ನು ಓದುತ್ತಿದ್ದರು. ಈ ಅನುಕ್ರಮದಲ್ಲಿ ರಾಮನ ವಿನಮ್ರ, ವಿಧೇಯತೆ, ಹೆತ್ತವರ ಮೇಲಿನ ಪ್ರೀತಿ ಮತ್ತು ಗೌರವವು ರೌನಕ್​ ಮೇಲೆ ಬಹಳ ಪ್ರಭಾವ ಬೀರಿತು.

    ಈ ಬಗ್ಗೆ ಮಾತನಾಡಿರುವ ರೌನಕ್​, ನಾನು ನಿಯಮಿತವಾಗಿ ರಾಮಾಯಣವನ್ನು ಓದುತ್ತೇನೆ ಮತ್ತು ರಾಮನ ಪಾತ್ರದಿಂದ ನಾನು ಆಳವಾಗಿ ಪ್ರಭಾವಿತನಾಗಿದ್ದೇನೆ. ನನ್ನ ದೇಹದ ಚರ್ಮದಿಂದ ಪಾದರಕ್ಷೆ ಮಾಡಿಸಿ, ತೊಡಿಸಿದರು ತಾಯಿಯ ಋಣ ತೀರಿಸಲಾಗದು ಎಂಬ ರಾಮನ ಹೇಳಿಕೆಯು ನನ್ನ ಮನಸ್ಸಿನಲ್ಲಿ ಬಂದಿತು. ಇದಾದ ಬಳಿಕ ನನ್ನ ತಾಯಿಗೆ ನನ್ನ ಚರ್ಮದಿಂದ ಮಾಡಿದ ಪಾದರಕ್ಷೆಯನ್ನು ಉಡುಗೊರೆಯಾಗಿ ನೀಡಲು ನಾನು ನಿರ್ಧರಿಸಿದೆ ಎಂದು ಹೇಳಿದರು.

    ಮನೆಯಲ್ಲಿ ಯಾರಿಗೂ ತಿಳಿಯದಂತೆ ಆಸ್ಪತ್ರೆಗೆ ತೆರಳಿ ವೈದ್ಯರಿಗೆ ಮನದಾಳದ ಮಾತು ಹೇಳಿದರು. ರೌನಕ್​ ತೆಗೆದುಕೊಂಡ ನಿರ್ಧಾರ ಕಠಿಣವಾಗಿದ್ದರೂ, ತಾಯಿಯ ಮೇಲಿನ ಪ್ರೀತಿ ದೊಡ್ಡದಾಗಿದೆ ಎಂದು ಭಾವಿಸಿ ಅವರ ದೇಹದಿಂದ ಸರ್ಜರಿ ಮೂಲಕ ಸ್ವಲ್ಪ ಚರ್ಮವನ್ನು ತೆಗೆದುಹಾಕಲಾಯಿತು. ಬಳಿಕ ಚರ್ಮವನ್ನು ಚಪ್ಪಲಿ ಹೊಲಿಯುವವನ ಬಳಿ ತೆಗೆದುಕೊಂಡು ಹೋಗಿ, ಹೊಸ ಚಪ್ಪಲಿಯನ್ನು ಮಾಡಿಸಿದರು.

    ಮಾರ್ಚ್ 14 ರಿಂದ 21 ರವರೆಗೆ ತನ್ನ ಮನೆಯಲ್ಲಿ ಆಯೋಜಿಸಲಾದ ಭಾಗವತ ಕಥಾದಲ್ಲಿ ರೌನಕ್ ಅವರು ತನ್ನ ತಾಯಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ತಾಯಿಗೆ ಕೃತಜ್ಞತೆ ಸಲ್ಲಿಸಿದರು. ಇದು ಗುರು ಜಿತೇಂದ್ರ ಮಹಾರಾಜರು ಸೇರಿದಂತೆ ಭಕ್ತರ ಕಣ್ಣಲ್ಲಿ ನೀರು ತರಿಸಿತು.

    ಈ ಸಂದರ್ಭದಲ್ಲಿ ತಾಯಿ ನೀರುಳಾ ಮಾತನಾಡಿ, ಇಂಥಾ ಮಗನನ್ನು ಪಡೆದಿದ್ದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಯಾವ ಮಗನೂ ಅಷ್ಟು ದೊಡ್ಡ ತ್ಯಾಗ ಮಾಡಲಾರ. ಚರ್ಮ ಸುಲಿದು ನನಗೆ ಚಪ್ಪಲಿ ಮಾಡಿ ಪ್ರೀತಿ ತೋರಿಸಿದ್ದಾನೆ. ನನ್ನ ಮಗನಿಗೆ ಯಾವುದೇ ತೊಂದರೆ ಆಗದಂತೆ ದೇವರು ಚೆನ್ನಾಗಿ ನೋಡಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದರು.

    ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

    ಬಿಗ್​​ಬಾಸ್ ಕನ್ನಡ ಒಟಿಟಿ ಸೀಸನ್​ 1ರ ಸ್ಪರ್ಧಿ, ರೀಲ್ಸ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ ಅರೆಸ್ಟ್​!

    ಬಿಜೆಪಿ ಸರ್ಕಾರದ ಜತೆ ಸೇರಿ ಕೊಲೆಗೆ ಸಂಚು: ಶಮಿ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts