More

    ಬಿಗ್​​ಬಾಸ್ ಕನ್ನಡ ಒಟಿಟಿ ಸೀಸನ್​ 1ರ ಸ್ಪರ್ಧಿ, ರೀಲ್ಸ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡ ಅರೆಸ್ಟ್​!

    ಬೆಂಗಳೂರು: ಪುಟ್ಟ ಹುಡುಗಿಯನ್ನು ದತ್ತು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್​ಬಾಸ್ ಕನ್ನಡ ಒಟಿಟಿ ಸೀಸನ್​ 1ರ ಸ್ಪರ್ಧಿ ಹಾಗೂ ರೀಲ್ಸ್​ ಸ್ಟಾರ್​ ಸೋನು ಶ್ರೀನಿವಾಸ್​ ಗೌಡಳನ್ನು ನಗರದ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ಇಂದು (ಮಾರ್ಚ್​ 22) ವರದಿಯಾಗಿದೆ.

    ಪುಟ್ಟ ಬಾಲಕಿಯನ್ನು ಅನಧಿಕೃತವಾಗಿ ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲಾಗಿದೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಬ್ಯಾಡರಹಳ್ಳಿ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಸೋನು ಶ್ರೀನಿವಾಸ್​ ಗೌಡಳನ್ನು ಬಂಧಿಸಿದ್ದಾರೆ. ಸೋನು ವಿರುದ್ಧ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಬಳಿಕ ಜೆ.ಜೆ.ಆ್ಯಕ್ಟ್ ಅಡಿ ಸೋನು ವಿರುದ್ಧ ಎಫ್​ಐಆರ್ ದಾಖಲಾಗಿತ್ತು.

    ಈ ಬಗ್ಗೆ ಅಧಿಕಾರಿ ಗೀತಾ ಮಾತನಾಡಿದ್ದು, ದತ್ತು ಪಡೆಯುವಾಗ ರೂಲ್ಸ್​ ಫಾಲೋ ಮಾಡಬೇಕು. ಪಾಲಕರಿಂದ ನೇರವಾಗಿ ಮಗುವನ್ನು ದತ್ತು ಪಡೆಯಲು ಆಗುವುದಿಲ್ಲ. ಕೆಲವೊಂದು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗಿದೆ. ಆದರೆ, ಸೋನು ಶ್ರೀನಿವಾಸ ಗೌಡ ಯಾವುದನ್ನು ಅನುಸರಿಸಿಲ್ಲ ಎಂದು ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸೋನು ಶ್ರೀನಿವಾಸ್​ ಗೌಡ, ಕೆಲ ತಿಂಗಳುಗಳ ಹಿಂದಷ್ಟೇ ಬಡ ಬಾಲಕಿಯನ್ನು ದತ್ತು ಪಡೆದಿರುವ ಬಗ್ಗೆ ವಿಡಿಯೋ ಮೂಲಕ ತಿಳಿಸಿದ್ದರು. ನಮ್ಮ ಅಪಾರ್ಟ್​ಮೆಂಟ್​ ಕೆಳಗೆ ನಾಯಿಗೆ ಬಿಸ್ಕೆಟ್​ ಹಾಕುವಾಗ ಈಕೆ ಸಿಕ್ಕಳು. ಅವಳಿಗೆ ಚಾಕೋಲೆಟ್​ ಕೊಡಿಸಿ, ಶಾಂಪಿಗ್​ಗೆ ಕರೆದುಕೊಂಡು ಹೋದೆ. ನಮ್ಮ ಮನೆ ನೋಡಬೇಕು ಎಂದು ಆಸೆಪಟ್ಟಳು. ಮನೆಯನ್ನು ತೋರಿಸಿದೆ. ಇದಾದ ಬಳಿಕ ಅವಳು ನನ್ನನ್ನು ತುಂಬಾ ಇಷ್ಟಪಟ್ಟಳು. ಆಕೆಯ ತಾಯಿ ಊರಿಗೆ ಕರೆದೊಯ್ದಾಗ ಆಕೆಗೆ ಜ್ವರ ಬಂದಿತ್ತು. ಈ ವಿಚಾರವನ್ನು ಆಕೆಯ ತಾಯಿ ನನಗೆ ತಿಳಿಸಿದರು. ನನ್ನನ್ನು ತುಂಬಾ ಹಚ್ಚಿಕೊಂಡಿದ್ದರಿಂದ ಆಕೆಗೆ ಜ್ವರ ಬಂದಿತ್ತು. ಬಳಿಕ ನಾನೇ ಹೋಗಿ ಕರೆದುಕೊಂಡು ಬಂದೆ. ದತ್ತು ತೆಗೆದುಕೊಳ್ಳುವ ಬಗ್ಗೆ ಅವರ ತಂದೆ-ತಾಯಿ ಜತೆ ಮಾತನಾಡಿದ್ದೇನೆ. ದತ್ತು ತೆಗೆದುಕೊಳ್ಳಲು ಕಾನೂನಿನ ಪ್ರಕಾರ ಸಮಯ ತೆಗೆದುಕೊಳ್ಳುತ್ತದೆ ಎಂದು ಈ ಹಿಂದೆ ಸೋನು ಶ್ರೀನಿವಾಸ ಗೌಡ ಹೇಳಿದ್ದಳು.

    ಅಂದಹಾಗೆ ಸೋನು ಶ್ರೀನಿವಾಸ್​ ಗೌಡ ಬಾಲಕಿಯನ್ನು ದತ್ತು ಪಡೆದುಕೊಂಡ ವಿಚಾರ ಸಾಕಷ್ಟು ಟ್ರೋಲ್​ ಕೂಡ ಆಗಿತ್ತು. ಅನುಕಂಪ ಗಿಟ್ಟಿಸಲು ದತ್ತು ಪಡೆದಿದ್ದಾಳೆ. ತನ್ನ ವಿರುದ್ಧ ಜನರಿಗೆ ಇರುವ ಕೆಟ್ಟ ಅಭಿಪ್ರಾಯವನ್ನು ತೊಡೆದುಹಾಕಲು ದತ್ತು ಪಡೆದಿರುವ ನಾಟಕ ಆಡುತ್ತಿದ್ದಾಳೆ ಎಂದು ನೆಟ್ಟಿಗರು ಸೋನು ಶ್ರೀನಿವಾಸ ಗೌಡಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

    ನೆಟ್ಟಿಗರು ಏನೇ ಅಂದರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸೋನು ಶ್ರೀನಿವಾಸ ಗೌಡ, 7 ರಿಂದ 8 ವರ್ಷದ ಪುಟ್ಟ ಬಾಲಕಿಯನ್ನು ತನ್ನ ಜತೆಯಲ್ಲೇ ಇರಿಸಿಕೊಂಡಿದ್ದಳು. ಬಾಲಕಿಯೊಂದಿಗೆ ಶಾಪಿಂಗ್​ ಹಾಗೂ ರೀಲ್ಸ್​ ಮಾಡುವ ವಿಡಿಯೋ ಪೋಸ್ಟ್​ ಮಾಡುತ್ತಿದ್ದಳು. ಆಕೆಗೆ ಆಕೈರೆ ಮಾಡುವ ವಿಡಿಯೋ ಸಹ ಹಂಚಿಕೊಳ್ಳುತ್ತಿದ್ದಳು. ಇದರಿಂದ ಕೆಲವರ ಅಭಿಪ್ರಾಯವೂ ಸಹ ಬದಲಾಗಿತ್ತು. ಕಳೆದ ಮೂರು ತಿಂಗಳಿಂದ ನನಗೆ ಪಾಸಿಟಿವ್​ ಕಾಮೆಂಟ್​​ಗಳು ಹೆಚ್ಚಾಗಿ ಬರುತ್ತಿವೆ. ಬಹುಶಃ ಈಕೆಯನ್ನು ದತ್ತು ಪಡೆದುಕೊಂಡಿದ್ದಕ್ಕೆ ಇರಬಹುದು ಎಂದು ಸೋನು ಶ್ರೀನಿವಾಸ್​ ಗೌಡ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಳು.

    ಇವರೇ ನೋಡಿ ಭಾರತೀಯ ಚಿತ್ರರಂಗದಲ್ಲಿ 1 ಕೋಟಿ ರೂ. ಸಂಭಾವನೆ ಪಡೆದ ಮೊದಲ ನಟಿ!

    ಏಳು ತಿಂಗಳ ಗರ್ಭಿಣಿ ಮಾಡೋ ಕೆಲಸನಾ ಇದು? ನಟಿ ಅಮಲಾ ಪೌಲ್​ಗೆ ನೆಟ್ಟಿಗರ ತರಾಟೆ

    ಅಂಬಿಕಾ ಟು ಪ್ರಿಯಾ ಭವಾನಿ ಶಂಕರ್​… ಏನಿದು ಫಾರ್ಮ್​ಹೌಸ್​ ರಹಸ್ಯ? ಸಂಚಲನ ಸೃಷ್ಟಿಸಿದ ನಟನ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts