More

    ಇನ್ನೆರಡು ದಿನಗಳಲ್ಲಿ ಧನುರ್​ ಮಾಸ ಶುರು; ಈ ತಿಂಗಳಲ್ಲಿ ಏನೇನು ಮಾಡಬಾರದು? ಇಲ್ಲಿದೆ ಸಂಪೂರ್ಣ ಮಾಹಿತಿ…

    ಬೆಂಗಳೂರು: ಧನುರ್ಮಾಸ ಎಂದರೆ ಭಕ್ತಿಯ ತಿಂಗಳು ಎಂದೇ ಕರೆಯಲಾಗುತ್ತದೆ. ಇದನ್ನು ಜೋತಿಷ್ಯದಲ್ಲಿ ಶೂನ್ಯ ತಿಂಗಳು ಎಂದೂ ಕರೆಯಲಾಗುತ್ತದೆ. ಸೂರ್ಯ ಧನುರ್​ ರಾಶಿಯಿಂದ ಮಕರ ರಾಶಿಗಗೆ ಸಂಕ್ರಮಣ ಮಾಡಿದಾಗ ಧನುರ್​ ಮಾಸ ಶುರು ಆಗುತ್ತದೆ. ಇದನ್ನು ಧನುರ್​ ಸಂಕ್ರಾಂತಿ ಎಂದೂ ಕರೆಯಲಾಗುತ್ತದೆ. ಸಾಧಾರಣವಾಗಿ ಸೂರ್ಯ ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಈ ತಿಂಗಳಲ್ಲಿ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಈ ವರ್ಷ ಡಿಸೆಂಬರ್ 16ರಿಂದ ಧನುರ್ ಮಾಸ ಪ್ರಾರಂಭವಾಗಲಿದೆ.

    ಈ ಧನುರ್ಮಾಸದ ಮಹತ್ವವನ್ನು ಪಂಚರಾತ್ರ ಆಗಮದ ಧನುರ್ಮಾಸಂ ಮಾಹಾತ್ಮ್ಯ, ಆಗ್ನೇಯ ಪುರಾಣ ಮತ್ತು ಸ್ಮೃತಿ ಮುಕ್ತಾವಳಿ ಎನ್ನುವ ಕೃತಿಗಳಲ್ಲಿ ಉಲ್ಲೇಖಿಸಲಾಗಿದೆ.

    ಶಾಸ್ತ್ರಗಳ ಪ್ರಕಾರ ಧನುರ್ಮಾಸದಲ್ಲಿ ಮನುಷ್ಯರು ಕೂಡ ಬ್ರಹ್ಮ ಮುಹೂರ್ತದಲ್ಲಿ ಎದ್ದು ಭಗವಂತನಿಗೆ ಪೂಜೆ ಮಾಡಬೇಕು. ಇಲ್ಲವಾದರೆ ಜನರು 7 ಜನ್ಮಗಳ ಕಾಲ ಕುಷ್ಠರೋಗ ಮತ್ತು ಕಡು ಬಡತನದಿಂದ ಕಷ್ಟಪಡುತ್ತಾರೆ ಎನ್ನಲಾಗಿದೆ. ಈ ನಿಯಮಗಳನ್ನು ಅನುಸರಿಸುವವರಿಗೆ ಆರೋಗ್ಯ, ಸಂಪತ್ತು, ಸಂತೋಷಗಳು ಎಲ್ಲಾ ಏಳು ಜನ್ಮಗಳಲ್ಲಿ ಧರ್ಮನಿಷ್ಠ ವೈಷ್ಣವರಾಗುವ ಅದೃಷ್ಟ ಸಿಗುತ್ತದೆ ಎನ್ನುವುದು ಅನೇಕರ ನಂಬಿಕೆ.

    ಎಲ್ಲಿಂದ ಎಲ್ಲಿಯವರೆಗೆ ಇರುತ್ತೆ ಈ ಧನುರ್ ಮಾಸ ?

    ಹಿಂದೂ ಪಂಚಾಂಗ ಮತ್ತು ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಡಿಸೆಂಬರ್ 16 ರಂದು ಧನುರಾಶಿಗೆ ಸೂರ್ಯ ಪ್ರವೇಶಿಸಲಿದ್ದು ಇದರೊಂದಿಗೆ ಧನುರ್ ಮಾಸ ಪ್ರಾರಂಭವಾಗುತ್ತದೆ. ಜನವರಿ 14ರ ತಡರಾತ್ರಿ, ಸೂರ್ಯ ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆ ಸಂದರ್ಭವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಇದು ಅಯ್ಯಪ್ಪ ಭಕ್ತರಿಗೆ ವಿಶೇಷವಾದ ದಿನ. ಪಂಚಾಂಗಗಳ ಪ್ರಕಾರ, ಸೂರ್ಯ ಜನವರಿ 15 ರಂದು ಮಕರರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯ ಮಕರ ರಾಶಿ ಪ್ರವೇಶಿಸುತ್ತಿದ್ದಂತೆಯೇ ಧನುರ್ ಮಾಸ ಕೊನಯಾಗಿ ಮತ್ತೆ ಶುಭ ಕಾರ್ಯಗಳನ್ನು ನಡೆಸುವುದು ಸಾಧ್ಯವಾಗುತ್ತದೆ.

    ಧನುರ್ ಮಾಸದಲ್ಲಿ ಯಾವ ಕೆಲಸಗಳನ್ನು ಮಾಡುವಂತಿಲ್ಲ?
    ‘ಧನುರ್ ಮಾಸವು ಅತ್ಯಂತ ಪವಿತ್ರವಾದ್ದು. ಹೀಗಾಗಿ ಈ ಮಾಸದಲ್ಲಿ ಬೆಳ್ಳುಳ್ಳಿ-ಈರುಳ್ಳಿ ಬಳಸಬಾರದು ಎಂದು ಹೇಳಲಾಗುತ್ತದೆ. ಅದಲ್ಲದೆ, ಮಾಂಸಾಹಾರ ಮತ್ತು ಮದ್ಯವನ್ನು ಈ ತಿಂಗಳಲ್ಲಿ ಸೇವಿಸಬಾರದು.

    ಧನುರ್ ಮಾಸ ಪೂಜೆಗಾಗಿ ಮೀಸಲಿರುವ ತಿಂಗಳು. ಈ ಮಾಸದಲ್ಲಿ ಮದುವೆ, ಕ್ಷೌರ, ಗೃಹಪ್ರವೇಶ, ಹೊಸ ಕೆಲಸ ಆರಂಭಿಸುವುದು ಮುಂತಾದ ಶುಭ ಕಾರ್ಯಗಳನ್ನು ಮಾಡಬಾರದು. ಈ ಮಾಸದಲ್ಲಿ ಮಾಡುವ ಶುಭ ಕಾರ್ಯಗಳು ಕೂಡಾ ಅಶುಭ ಫಲ ನೀಡುತ್ತವೆ ಎನ್ನುವುದು ನಂಬಿಕೆ.

    ತಾಮ್ರದ ಪಾತ್ರೆಯಲ್ಲಿ ಇಟ್ಟಿರುವ ಆಹಾರ ಅಥವಾ ನೀರನ್ನು ಧನುರ್ ಮಾಸದಲ್ಲಿ ಸೇವಿಸಬಾರದು. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

    ಧನುರ್ ಮಾಸದಲ್ಲಿ ಹೊಸ ಮನೆಯನ್ನು ಖರೀದಿಸುವುದು ಅಥವಾ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುವುದನ್ನು ಸಹ ಮಾಡಬಾರದು. ಈ ಸಮಯದಲ್ಲಿ ಖರೀದಿಸಿದ ಅಥವಾ ನಿರ್ಮಿಸಿದ ಮನೆಯಲ್ಲಿ ವಾಸಿಸಿದರೆ ಜೀವನದಲ್ಲಿ ಕಷ್ಟ ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ಮನೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವುದಿಲ್ಲ ಎಂದು ಹೇಳಲಾಗುತ್ತದೆ.

    ಧನುರ್ ಮಾಸದಲ್ಲಿ ಕಾರು, ಆಭರಣ ಇತ್ಯಾದಿ ದುಬಾರಿ ವಸ್ತುಗಳನ್ನು ಖರೀದಿಸಬಾರದು. ಒಂದು ವೇಳೆ ಈ ಮಾಸದಲ್ಲಿ ಈ ದುಬಾರಿ ವಸ್ತುಗಳನ್ನು ಖರೀದಿಸಿದರೆ ಮೇಲಿಂದ ಮೇಲೆ ಅವುಗಳ ಮೇಲೆ ಮತ್ತೆ ಮತ್ತೆ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts