More

    ಕೊಪ್ಪಳದಲ್ಲಿ ಮಾತೃ ಧರ್ಮಕ್ಕೆ ಮರಳಿದ ಕ್ರೈಸ್ತ ಕುಟುಂಬ…

    ಕೊಪ್ಪಳ: ಇತ್ತೀಚೆಗೆ ದೇಶಾದ್ಯಂತ ಘರ್​ ವಾಪ್ಸಿ ಕೆಲಸ ಭರದಿಂದ ಸಾಗುತ್ತಿದ್ದು ಅನೇಕ ವರ್ಷಗಳಿಂದ ಹಿಂದು ಧರ್ಮದಿಂದ ಹೊರಹೋಗಿದ್ದ ಕುಟುಂಬಗಳನ್ನು ಮತ್ತೆ ಕರೆತರುವ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ 80 ಮುಸ್ಲಿಂ ಕುಟುಂಬಗಳನ್ನು ಮತ್ತೆ ಮಾತೃ ಧರ್ಮಕ್ಕೆ ಕರೆತಂದದ್ದು ಸುದ್ದಿಯಾಗಿತ್ತು. ಅದೇ ರೀತಿ ಈಗ, ಕೊಪ್ಪಳದಲ್ಲೂ ಅನೇಕ ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ ಕುಟುಂಬವನ್ನು ಹಿಂದು ಧರ್ಮಕ್ಕೆ ಘರ್​ ವಾಪಸಿ ಮಾಡಲಾಗಿದೆ.

    ದೇಶದಲ್ಲಿ ಮತಾಂತರ ವಿರೋಧಿ ಕಾನೂನಿನ ಚರ್ಚೆ ಆಗುತ್ತಿರುವಾಗಲೇ ಅನೇಕರನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ಯಾವುದೇ ರೀತಿಯ ಆಮಿಷ, ಬೆದರಿಕೆ, ಮೋಸದ ಮೂಲಕ ಮತಾಂತರ ಮಾಡಬಾರದು ಎಂದು ಈಗಾಗಲೇ ನ್ಯಾಯಾಲಯ ಹೇಳಿದ್ದರೂ ಮತಾಂತರ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿದೆ. ಆದರೆ ಇದೇ ವೇಳೆಗೆ ಹಲವು ವರ್ಷಗಳ ಹಿಂದೆ ಮತಾಂತರವಾಗಿದ್ದವರನ್ನು ಘರ್​ ವಾಪ್ಸಿ ಮಾಡುವ ಕೆಲಸವೂ ಜೊತೆಯಲ್ಲೇ ಸಾಗಿದೆ.

    ಹಲವು ವರ್ಷಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಹಿಂದೂ ಕುಟುಂಬವನ್ನು ಮತ್ತೆ ಮತೃ ಧರ್ಮಕ್ಕೆ ಕರೆತಂದ ಕೆಲಸ ಕೊಪ್ಪಳದಲ್ಲಿ ನಡೆದಿದೆ ಕಾರಟಗಿಯ ಶ್ರೀರಾಮನಗರದ ಶಂಕರ್, ಅವರ ಪತ್ನಿ ಜಂಬಕ್ಕ ಸೇರಿ ಇಡಿ ಕುಟುಂಬವನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲಾಗಿದೆ.

    ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಹಿಂದು ಧರ್ಮಕ್ಕೆ ಮರಳಿದ 80 ಮುಸಲ್ಮಾನರು..!

    ಕಾರಟಗಿಯ ಶ್ರೀರಾಮ ನಗರದ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಘರ್ ವಾಪಸ್ಸಿ ಕಾರ್ಯ ನಡೆದಿದ್ದು ಕಾರಟಗಿಯ ಮರುಳಸಿದ್ದೆಶ್ವರ ಸ್ವಾಮಿಜಿ ಹಾಗೂ ಹಿಂದೂ ಜಾಗರಣಾ ವೇದಿಕೆಯ ಮುಖಂಡತ್ವದಲ್ಲಿ ಹಿಂದೂ ಧರ್ಮಕ್ಕೆ ಕುಟುಂಬ ಮರಳಿದೆ. ಹಿಂದೆ ಈ ಕುಟುಂಬ ಬುಡುಗಜಂಗಮ ಸಮುದಾಯಕ್ಕೆ ಸೇರಿತ್ತು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts