More

    ಉತ್ತರಪ್ರದೇಶದಲ್ಲಿ ಹಿಂದು ಧರ್ಮಕ್ಕೆ ಮರಳಿದ 80 ಮುಸಲ್ಮಾನರು..!

    ಮುಜಫ್ಫರ್​ನಗರ್​: ಧಾರ್ವಿುಕ ಸ್ವಾತಂತ್ರ್ಯದ ಹಕ್ಕು ಇತರೆ ನಾಗರಿಕರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ. ವಂಚನೆ, ಒತ್ತಾಯ ಅಥವಾ ಆಮಿಷದ ಮೂಲಕ ವ್ಯಕ್ತಿಯನ್ನು ಮತ್ತೊಂದು ಧರ್ಮಕ್ಕೆ ಪರಿವರ್ತಿಸುವ ಕೆಲಸ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು.

    ಈಗ ಒತ್ತಾಯದ ಮೇಲೋ, ಆಮಿಷಕ್ಕೆ ಬಲಿಯಾಗಿಯೋ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದವರನ್ನು ಈಗ ಮತ್ತೆ ಮಾತೃ ಧರ್ಮಕ್ಕೆ ಕರೆತರಲಾಗಿದೆ. ಉತ್ತರಪ್ರದೇಶದ ಮುಜಫ್ಫರ್​ನಗರದಲ್ಲಿ ಒಟ್ಟು 80 ಜನ ಮುಸಲ್ಮಾನರನ್ನು ಘರ್ ​ವಾಪಸಿ ಮೂಲಕ ಮಾತೃ ಧರ್ಮಕ್ಕೆ ಕರೆತರಲಾಗಿದೆ.

    ಈ ಬಗ್ಗೆ ಶಿವಮ್ ದೀಕ್ಷಿತ್​ ಟ್ವೀಟ್​ ಮಾಡಿದ್ದು ‘ಘರ್​ ವಾಪಸಿ!
    ರಾಮ್​ಪುರದ 80 ಮುಸ್ಲಿಮರು ಈಗ ಇಸ್ಲಾಂ ತೊರೆದು ಸನಾತನ ಧರ್ಮವನ್ನು ಅಪ್ಪಿಕೊಂಡಿದ್ದಾರೆ. ಮನೆಗೆ ಮರಳಿದ ನಂತರ, ಅಜಮ್ ಖಾನ್ 12 ವರ್ಷಗಳ ಹಿಂದೆ ಬಲವಂತವಾಗಿ ಮತಾಂತರ ಆಗಿದ್ದರು ಎನ್ನಲಾಗಿತ್ತು. ಮುಜಾಫರ್‌ನಗರದ ಯೋಗ ಸಾಧನಾ ಆಶ್ರಮದಲ್ಲಿ ನಡೆದ ಶುದ್ಧೀಕರಣ ಕಾರ್ಯಕ್ರಮದಲ್ಲಿ ಆಚಾರ್ಯ ಯಶವೀರ್, ಅಜಮ್​ ಖಾನ್​ರನ್ನು ಮತ್ತೆ ಮಾತೃಧರ್ಮಕ್ಕೆ ಮರಳುವಂತೆ ಮಾಡಿದ್ದಾರೆ’ ಎಂದು ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts