More

    ಕೇಸರಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ ಈಗ ವಿವಾದದ ಸುಳಿಯಲ್ಲಿ..!

    ಮುಂಬೈ: ಶಾರುಖ್​ ಖಾನ್​ ನಟನೆಯ ಪಠಾನ್​ ಸಿನಿಮಾ ಅನೇಕ ಸಂಗತಿಗಳಿಗೆ ಸುದ್ದಿಯಲ್ಲಿದೆ. ಈಗ ಆ ಪಟ್ಟಿಗೆ ಮತ್ತೊಂದು ಸೇರ್ಪಡೆ ಆಗಿದ್ದು ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ತೊಟ್ಟದ್ದು ವಿವಾದಕ್ಕೆ ಕಾರಣವಾಗಿದೆ.

    ಯಶ್​ ರಾಜ್​ ಫಿಲಮ್ಸ್​​​​ ಸ್ಪೈ-ವರ್ಸ್​, ಅಂದರೆ ಗೂಢಚಾರಿಗಳ ಹೊಸ ಜಗತ್ತನ್ನೇ ತಯಾರಿಸುತ್ತಿದ್ದೆ. ಅದರ ಭಾಗವಾಗಿ ಶಾರುಖ್​ ಖಾನ್​ ನಟನೆಯ ಪಠಾಣ್​ ಚಿತ್ರದ ಬೇಷರಮ್​ ಹಾಡು ಬಿಡುಗಡೆಯಾಗಿದೆ. ಅದರಲ್ಲಿ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಮೈಮಾಟ ತೋರಿಸಿದ್ದಾರೆ.

    ಇಡೀ ಹಾಡಿನಲ್ಲಿ ಕೇಸರಿ ಬಿಕಿನಿ ತೊಟ್ಟು ದೀಪಿಕಾ ಪಡುಕೋಣೆ ಮೈಮಾಟ ತೋರಿಸಿದ್ದಾರೆ. ಈ ಹಾಡನ್ನು ಅಸಭ್ಯ ಹಾಗೂ ಅಶ್ಲೀಲವಾಗಿದೆ ಎನ್ನುಚವ ಟೀಕೆ ಶುರುವಾಗಿದೆ. ಹೀಗಾಗಿ ಈಗ ಪಠಾಣ್ ಚಿತ್ರವನ್ನು ನಿಷೇಧಿಸಬೇಕು ಎನ್ನುವ ಕೂಗು ಕೂಡ ಎದ್ದಿದೆ. ಈಗ ಟ್ವಿಟರ್​ನಲ್ಲಿ ‘Boycott Pathaan’ ಎನ್ನುವ ಹ್ಯಾಶ್​ಟ್ಯಾಗ್​ ಕೂಡ ಟ್ರೆಂಡಿಂಗ್​ನಲ್ಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts