More

  AUDIO VIRAL |’ಜನಾರ್ದನ ರೆಡ್ಡಿ ಬಿಜೆಪಿಗೆ ಬಂದ್ರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದು’ ಎಂದು ಬೆಂಬಲಿಗನ ಕ್ಲಾಸ್​..!

  ಬಳ್ಳಾರಿ: ರಾಜಕೀಯದಲ್ಲಿ ಪ್ರತಿಯೊಬ್ಬ ನಾಯಕನಿಗೂ ತನ್ನದೇ ಆದ ಮಹತ್ವ ಇದೆ. ಯಾರೂ ಯಾರನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಮಯ ಸಂದರ್ಭ ಬಂದಾಗ ಪ್ರತಿಯೊಬ್ಬರಿಗೂ ಮಹತ್ವ ಬಂದೇ ಬರುತ್ತೆ. ಬಿಜೆಪಿ ಜನಾರ್ದನ ರೆಡ್ಡಿಯನ್ನ ಕಡೆಗಣಿಸುತ್ತಿದೆ ಎನ್ನುವ ಸುದ್ದಿ ಇತ್ತೀಚೆಗೆ ಎಲ್ಲೆಡೆ ಹರಿದಾಡುತ್ತಿದೆ. ಜನಾರ್ದನ ರೆಡ್ಡಿ ಸ್ವಂತ ಪಕ್ಷ ಕಡ್ಡುತ್ತಾರೆ ಎನ್ನುವ ಗುಲ್ಲು ಎದ್ದ ಮೇಲಂತೂ ಈ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿತ್ತು.

  ಇದೀಗ ಕಾರ್ಯಕ್ರಮ ಒಂದಕ್ಕೆ ಆಹ್ವಾನ ಮಾಡಲು ಬಿಜೆಪಿ ಕಾಲ್​ಸೆಂಟರ್​ನಿಂದ ಸಿಬ್ಬಂದಿ, ರೆಡ್ಡಿ ಬೆಂಬಲಿಗ ಒಬ್ಬರಿಗೆ ಕರೆ ಮಾಡಿದ್ದರು. ಆಗ ಬೆಂಬಲಿಗ ಸಿಬ್ಬಂದಿಗೆ ಸಖತ್​ ಆಗಿ ಕ್ಲಾಸ್​ ತೆಗೆದುಕೊಂಡಿದ್ದರು.

  ಡಿ.18 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಆಹ್ವಾನಕ್ಕೆ ಆಹ್ವಾನ ಮಾಡಲು ಮಲ್ಲಿಕಾರ್ಜುನ ಎನ್ನುವ ಕಾರ್ಯಕರ್ತರಿಗೆ ಕರೆ ಸಿಬ್ಬಂದಿ ಮಾಡಿದ್ದರು. ಈ ಸಂದರ್ಭ ಸಭೆಯಲ್ಲಿ ಯಾರೆಲ್ಲ ಅತಿಥಿಗಳು ಇರ್ತಾರೆ ಎಂದು ಬೆಂಬಲಿಗ ಕೇಳಿದ್ದಾರೆ. ಈ ಸಂದರ್ಭ, ರಾಜ್ಯ ಬಿಜೆಪಿ ನಾಯಕರ ಹೆಸರನ್ನು ಸಿಬ್ಬಂದಿ ಹೇಳಿದ್ದರು. ಆ ಪಟ್ಟಿಯಲ್ಲಿ ಜನಾರ್ದನ ರೆಡ್ಡಿ ಹೆಸರಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಇವರು ಸಿಡಿದೆದ್ದಿದ್ದಾರೆ.

  ‘ಬಿಜೆಪಿಯ ಹಿರಿಯ ನಾಯಕರು, ಸರ್ಕಾರದ ಸಚಿವರ ಹೆಸರೆಲ್ಲಾ ಇದೆ. ಬಿಜೆಪಿ ಗೆಲ್ಲಿಸಲು ಕಸರತ್ತು ಮಾಡುತ್ತಿರೋ ಜನಾರ್ದನ ರೆಡ್ಡಿ ಹೆಸರು ಯಾಕಿಲ್ಲ ಎಂದು ಈತ ಕ್ಲಾಸ್​ ತೆಗೆದುಕೊಳ್ಳಲು ಶುರು ಮಾಡಿದ್ದಾನೆ.

  ‘ಜನಾರ್ದನ ರೆಡ್ಡಿ ಬಿಜೆಪಿಗೆ ಬಂದ್ರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಗುತ್ತೆ. ಜನಾರ್ದನ ರೆಡ್ಡಿ ಪಕ್ಷದಲ್ಲಿ ಇಲ್ಲವಾದ್ರೆ ನಾವು ಬಿಜೆಪಿ ಬೆಂಬಲ ನೀಡೋದಿಲ್ಲ. ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಇರ್ಬೇಕು ಅಂದ್ರೆ ಕಾರ್ಯಕ್ರಮಗಳಲ್ಲಿ ಸ್ಥಾನ ಕೊಡಬೇಕು. ಇಲ್ಲಾಂದ್ರೆ ಜನಾರ್ದನ ರೆಡ್ಡಿ ಪಕ್ಷಕ್ಕೆ ನಾವು ಹೋಗ್ತಿವಿ. ನೀವೇ ಬಿಜೆಪಿ ಪಕ್ಷದ ವರಿಷ್ಠರಿಗೆ ತಿಳಿಸಿ. ಬಿಜೆಪಿ ಅಧಿಕಾರಕ್ಕೆ ತರೋಕೆ ಜನಾರ್ದನ ಕಸರತ್ತು ಮಾಡ್ತಿದ್ದಾರೆ. ನಿಮ್ಮ ಬಿಜೆಪಿ ಯಾಕೆ ಜನಾರ್ದನ ರೆಡ್ಡಿ ಕಡಗಣನೆ ಮಾಡ್ತಿದೆ’ ಎಂದು ಸಿಬ್ಬಂದಿಗೆ ರೆಡ್ಡಿ ಬೆಂಬಲಿಗ ಕ್ಲಾಸ್ ತೆಗೆದುಕೊಂಡಿದ್ದಾನೆ. ಇದೀಗ ರೆಡ್ಡಿ ಬೆಂಬಲಿಗ ಸಿಬ್ಬಂದಿ ಕ್ಲಾಸ್ ತೆಗೆದುಕೊಂಡ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts