More

    ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ? ದುಬೈಗೆ ಮರಳಿದ ಮರುಕ್ಷಣವೇ ಮಲಿಕ್​ಗೆ ಬಿಗ್​ ಶಾಕ್​!

    ನವದೆಹಲಿ: ಭಾರತೀಯ ಟೆನ್ನಿಸ್​ ತಾರೆ ಹಾಗೂ ಮೂಗುತಿ ಸುಂದರಿ ಸಾನಿಯಾ ಮಿರ್ಜಾಗೆ ಕೈ ಕೊಟ್ಟು ಬೇರೊಂದು ಮದುವೆಯಾಗುವ ಮೂಲಕ ಭಾರಿ ಸುದ್ದಿಯಾಗಿರುವ ಶೋಯಿಬ್​ ಮಲಿಕ್​ಗೆ ಇದೀಗ ಶಾಕ್​ ಒಂದು ಎದುರಾಗಿದೆ. ಬಾಂಗ್ಲಾ ಪ್ರೀಮಿಯರ್​ ಲೀಗ್​ (ಬಿಪಿಎಲ್​) ಒಪ್ಪಂದದಿಂದಲೇ ಮಲಿಕ್​ ಅವರನ್ನು ಕೈಬಿಡಲಾಗಿದೆ.

    ಶೋಯಿಬ್ ಮಲಿಕ್​ ಅವರು ಮ್ಯಾಚ್​ ಫಿಕ್ಸಿಂಗ್​ ಆರೋಪ ಎದುರಿಸುತ್ತಿದ್ದರು. ಇದೀಗ ಒಪ್ಪಂದದಿಂದಲೇ ಮಲಿಕ್​ ಪ್ರತಿನಿಧಿಸುತ್ತಿದ್ದ ಫ್ರಾಂಚೈಸಿ ಕೈಬಿಟ್ಟಿದೆ. ಈಗಾಗಲೇ ಮಲಿಕ್​ ವೈಯಕ್ತಿಕ ಕಾರಣಗಳಿಂದ ದುಬೈಗೆ ಮರಳಿದ್ದರು. ಇದರ ಬೆನ್ನಲ್ಲೇ ಅನಿರೀಕ್ಷಿತ ಆಘಾತ ಮಲಿಕ್​ಗೆ ಎದುರಾಗಿದೆ.

    ಏನಾಯಿತು?
    2024ರ ಬಿಪಿಎಲ್​ ಸೀಸನ್​ನಲ್ಲಿ ಮಲಿಕ್​ ಅವರು ಫಾರ್ಚೂನ್ ಬಾರಿಶಾಲ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಜ.22ರ ಸೋಮವಾರ ಫಾರ್ಚೂನ್​ ಬಾರಿಶಾಲ್​ ಮತ್ತು ಖುಲ್ನಾ ಟೈಗರ್ಸ್​ ತಂಡದ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಬಾರಿಶಾಲ್ ಪರ ಬೌಲಿಂಗ್ ದಾಳಿಗಿಳಿದಿದ್ದ ಮಲಿಕ್, ಕೇವಲ ಒಂದು ಓವರ್ ಬೌಲ್ ಮಾಡಿ 18 ರನ್ ನೀಡಿದ್ದರು. ಈ ಓವರ್​ನಲ್ಲಿ ಮಲಿಕ್ ಬರೋಬ್ಬರಿ 3 ನೋ ಬಾಲ್‌ಗಳನ್ನು ಎಸೆದಿದ್ದರು. ಸಾಮಾನ್ಯವಾಗಿ ವೇಗಿಗಳು ಒಂದು ಓವರ್​ನಲ್ಲಿ ಮೂರು ನೋ ಬಾಲ್ ಎಸೆದರೆ ಯಾರಿಗೂ ಅಚ್ಚರಿಯಾಗುತ್ತಿರಲಿಲ್ಲ. ಆದರೆ ಸ್ಪಿನ್​ ಬೌಲರ್​ ಒಬ್ಬರು ಸತತ ಮೂರು ನೋಬಾಲ್​ ಎಸೆದದ್ದು ನೋಡಿ ಮಲಿಕ್​ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು.​ ಇದಾದ ಬಳಿಕ ಶೋಯೆಬ್ ಮಲಿಕ್ ಇದ್ದಕ್ಕಿದ್ದಂತೆ ಪಂದ್ಯಾವಳಿಯನ್ನು ಮಧ್ಯದಲ್ಲಿ ತೊರೆದು ದುಬೈಗೆ ತೆರಳಿದ್ದರು.

    ಯಾವಾಗ ಆರೋಪಗಳು ಕೇಳಿಬಂದವೋ ಫಾರ್ಚೂನ್​ ಬಾರಿಶಾಲ್ ತಂಡದ ಮಾಲೀಕ ಮಿಜನೂರ್​ ರೆಹಮಾನ್​, ಮಲಿಕ್​ ಅವರನ್ನು ಒಪ್ಪಂದದಿಂದ ಕೈಬಿಟ್ಟಿದ್ದಾರೆ. ಫಿಕ್ಸಿಂಗ್​ ಆರೋಪದ ಸಂಶಯದ ಮೇಲೆ ಈ ಕ್ರಮ ಕೈಗೊಂಡಿರುವುದಾಗಿ ರೆಹಮಾನ್​ ತಿಳಿಸಿದ್ದಾರೆ ಎಂದು ಬಾಂಗ್ಲಾದೇಶದ ಪತ್ರಕರ್ತ ಸೈಯದ್​ ಸಮಿ ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಮಲಿಕ್​ ಕೂಡ ಈ ಪಂದ್ಯದ ನಂತರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಆಡದಿರಲು ನಿರ್ಧರಿಸಿದ್ದರು. ಅದಕ್ಕೂ ಮುಂಚೆಯೇ ಬಾರಿಶಾಲ್​ ಫ್ರಾಂಚೈಸಿ ಮಲಿಕ್​ಗೆ ಶಾಕ್​ ನೀಡಿದೆ. ಮಲಿಕ್ ವೈಯಕ್ತಿಕ ಕಾರಣಗಳಿಂದ ದುಬೈಗೆ ತೆರಳಿದ್ದು, ಉಳಿದ ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದು ಬಾರಿಸಲ್ ತಂಡ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

    ಅಂದಹಾಗೆ ಶೋಯಿಬ್ ಮಲಿಕ್ ಏಕದಿನ ಮತ್ತು ಟೆಸ್ಟ್ ಸ್ವರೂಪದಿಂದ ನಿವೃತ್ತರಾಗಿದ್ದಾರೆ. ಆದರೆ ಟಿ20 ಮಾದರಿಯಿಂದ ನಿವೃತ್ತಿಯಾಗಿಲ್ಲ.

    Malik

    ಇಷ್ಟು ದಿನ ಸಾನಿಯಾ ಮತ್ತು ಶೋಯಿಬ್​ ಮಲಿಕ್​ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿದರೂ ಕೇವಲ ವದಂತಿ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಮಲಿಕ್​ ಅವರು ದಿಢೀರನೇ ಪಾಕ್​ ನಟಿ ಸನಾ ಜಾವೇದ್​ ಜತೆ ಮದುವೆ ಆಗಿರುವ ಫೋಟೋವನ್ನು ಶೇರ್​ ಮಾಡಿಕೊಂಡ ಬೆನ್ನಲ್ಲೇ ಡಿವೋರ್ಸ್​ ವದಂತಿ ಅಧಿಕೃತ ಸ್ವರೂಪ ಪಡೆದುಕೊಂಡಿದೆ. ಸನಾ ಜಾವೇದ್​ಗೆ ಇದು ಎರಡನೇ ಮದುವೆಯಾದರೆ, ಮಲಿಕ್​ಗೆ ಮೂರನೇ ಮದುವೆ. ಇಬ್ಬರ ಮದುವೆಗೆ ಬೆರಳಣಿಕೆಯಷ್ಟೇ ಮಂದಿ ಅಭಿನಂದನೆ ಸಲ್ಲಿಸಿದರು. ಆದರೆ, ಬಹುತೇಕ ಮಂದಿ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪಾಕ್​ ಮೀಡಿಯಾಗಳು ಸಹ ಮಲಿಕ್​ ವಿರುದ್ಧವೇ ಆರೋಪಗಳ ಸುರಿಮಳೆಗೈದಿವೆ. ಗಮನಾರ್ಹ ಸಂಗತಿ ಏನೆಂದರೆ, ಮಲಿಕ್​ ಮದುವೆಗೆ ಅವರ ಕುಟುಂಬಸ್ಥರೇ ಹಾಜರಾಗಿರಲಿಲ್ಲ.

    ಡಿವೋರ್ಸ್​ ವಿಚಾರ ಶುರುವಾಗಿದ್ದು ಯಾವಾಗ?
    2022ರ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್​ ವದಂತಿ ಕತೆ ಇಂದು ಶೋಯಿಬ್​, ಸನಾ ಜಾವೇದ್​ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್​ ಬೇರೆಯಾಗಿರುವುದು ಖಚಿತವಾಗಿದೆ.

    ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

    ಶೋಯೆಬ್ ಮಲಿಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ : ತಂಡದ ಮಾಲೀಕನ ಸ್ಪಷ್ಟನೆ ಏನು?

    ಸಾನಿಯಾ ಮಿರ್ಜಾಗೆ 2ನೇ ಮದುವೆ! ಮುಂದೆ ಶೋಯಿಬ್​ ಮಲಿಕ್​ಗೆ ಕಾದಿದೆ ಭಾರಿ ಗಂಡಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts