More

    ಸಾನಿಯಾ ಮಿರ್ಜಾಗೆ 2ನೇ ಮದುವೆ! ಮುಂದೆ ಶೋಯಿಬ್​ ಮಲಿಕ್​ಗೆ ಕಾದಿದೆ ಭಾರಿ ಗಂಡಾಂತರ

    ದುಬೈ: ಭಾರತದ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾರ ವೈವಾಹಿಕ ಜೀವನದ ಇನ್​ಸೈಡ್​ ಸ್ಟೋರಿ ಈಗ ಬಯಲಾಗಿದೆ. ಇಷ್ಟು ದಿನ ಸಾನಿಯಾ ಮತ್ತು ಶೋಯಿಬ್​ ಮಲಿಕ್​ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿದರೂ ಕೇವಲ ವದಂತಿ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಮಲಿಕ್​ ಅವರು ದಿಢೀರನೇ ಪಾಕ್​ ನಟಿ ಸನಾ ಜಾವೇದ್​ ಜತೆ ಮದುವೆ ಆಗಿರುವ ಫೋಟೋವನ್ನು ಶೇರ್​ ಮಾಡಿಕೊಂಡ ಬೆನ್ನಲ್ಲೇ ಡಿವೋರ್ಸ್​ ವದಂತಿ ಅಧಿಕೃತ ಸ್ವರೂಪ ಪಡೆದುಕೊಂಡಿತು.

    ಸನಾ ಜಾವೇದ್​ಗೆ ಇದು ಎರಡನೇ ಮದುವೆಯಾದರೆ, ಮಲಿಕ್​ಗೆ ಮೂರನೇ ಮದುವೆ. ಇಬ್ಬರ ಮದುವೆಗೆ ಬೆರಳಣಿಕೆಯಷ್ಟೇ ಮಂದಿ ಅಭಿನಂದನೆ ಸಲ್ಲಿಸಿದರು. ಆದರೆ, ಬಹುತೇಕ ಮಂದಿ ಇಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಪಾಕ್​ ಮೀಡಿಯಾಗಳು ಸಹ ಮಲಿಕ್​ ವಿರುದ್ಧವೇ ಆರೋಪಗಳ ಸುರಿಮಳೆಗೈದಿವೆ. ಗಮನಾರ್ಹ ಸಂಗತಿ ಏನೆಂದರೆ, ಮಲಿಕ್​ ಮದುವೆಗೆ ಅವರ ಕುಟುಂಬಸ್ಥರೇ ಹಾಜರಾಗಿರಲಿಲ್ಲ.

    ಮಲಿಕ್​ ಕುಟುಂಬ, ಪಾಕ್​ ಮಾಧ್ಯಮಗಳು ಸಾನಿಯಾ ಮಿರ್ಜಾಗೆ ಬೆಂಬಲ ವ್ಯಕ್ತಪಡಿಸಿವೆ. ಸದ್ಯ ಸಾನಿಯಾ ಜೀವನದಲ್ಲಿ ಇದೊಂದು ಸವಾಲಿನ ಸಮಯವಾಗಿದೆ. ಆದರೆ, ಈ ಸವಾಲು ಹೀಗೆ ಇರಲಿದೆಯಾ? ಸಾನಿಯಾ ಭವಿಷ್ಯವು ಹೇಗಿರಲಿದೆ? ಈ ಕುರಿತಾದ ಒಂದು ಭವಿಷ್ಯವಾಣಿ ಇಲ್ಲಿದೆ.

    2022ಕ್ಕೆ ಒಮ್ಮೆ ಹಿಂತಿರುಗಿ ನೋಡುವುದಾದರೆ, ಖ್ಯಾತ ಜ್ಯೋತಿಷಿ ಪಂಡಿತ್​ ಜಗನ್ನಾಥ್​ ಗುರೂಜಿ, ಆಗಲೇ ಮಲಿಕ್​ ಮತ್ತು ಸಾನಿಯಾ ಡಿವೋರ್ಸ್​ ಬಗ್ಗೆ ಭವಿಷ್ಯ ನುಡಿದಿದ್ದರು. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಇಬ್ಬರ ಸಂಬಂಧ ಮುರಿದು ಬೀಳಲಿದೆ ಎಂದಿದ್ದರು. ಈ ಹಿಂದೆ ಪಾಕ್​ ನಟಿ ಆಯೇಷಾ ಓಮರ್​ ಜತೆ ಮಲಿಕ್​ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರು ಮದುವೆ ಆಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಸನಾ ಜಾವೇದ್​ ಅವರನ್ನು ವರಿಸುವ ಮೂಲಕ ಮಲಿಕ್​ ಶಾಕ್​ ನೀಡಿದ್ದಾರೆ. ಆದರೆ, ಜಗನ್ನಾಥ್​ ಗುರೂಜಿ ನುಡಿದ ಭವಿಷ್ಯ ನಿಜವಾಗಿದೆ, ಸನಾ ಜಾವೇದ್​ ಹಸ್ತಕ್ಷೇಪದಿಂದ ಮಲಿಕ್​-ಸಾನಿಯಾ ಸಂಬಂಧದಲ್ಲಿ ಬಿರುಕು ಮೂಡಿದೆ.

    ಮಲಿಕ್​​​ ಜತೆ ಡಿವೋರ್ಸ್​ ಆಗಿದ್ದರೂ ಕೂಡ ಈ ಕಷ್ಟದ ಸಮಯ ಕೆಲವು ದಿನಗಳವರೆಗೆ ಮಾತ್ರ ಇರಲಿದ್ದು, ಭವಿಷ್ಯದಲ್ಲಿ ಸಾನಿಯಾಗೆ ಒಳ್ಳೆಯದಾಗಲಿದೆ ಎಂದು ಜಗನ್ನಾಥ್​ ಗುರೂಜಿ ಭವಿಷ್ಯ ನುಡಿದಿದ್ದಾರೆ. ಸಾನಿಯಾರ ಜಾತಕ ಫಲದಲ್ಲಿ ಸೂರ್ಯ ಮತ್ತು ಶನಿಯ ಜೋಡಣೆಯು ಮುಂದಿನ ದಿನಗಳಲ್ಲಿ ಅವರಿಗೆ ಉಜ್ವಲ ಭವಿಷ್ಯ ಇರುವುದನ್ನು ಸೂಚಿಸುತ್ತದೆ. ಆದಾಗ್ಯೂ ಶುಕ್ರನ ಸ್ಥಿತಿ ಅಸ್ಥಿರವಾಗಿದ್ದು, ಪ್ರಸ್ತುತ ದಿನಗಳಲ್ಲಿ ಸಾನಿಯಾರ ಮಾನಸಿಕ ಯೋಗಕ್ಷೇಮದ ಮೇಲೆಯೂ ಪರಿಣಾಮ ಬೀರುವ ಸಂಭಾವ್ಯ ಸಮಸ್ಯೆಗಳನ್ನು ಸೂಚಿಸುತ್ತದೆ ಮತ್ತು ಸ್ವಲ್ಪ ಆತಂಕವನ್ನು ಉಂಟುಮಾಡಲಿದೆ.

    ಸಾನಿಯಾ ಮೇಲೆ ಸೂರ್ಯ ಮತ್ತು ಶನಿಯು ಪ್ರಭಾವ ಒಳ್ಳೆಯ ರೀತಿಯಲ್ಲಿ ಇರುವುದರಿಂದ ಎಲ್ಲ ಋಣಾತ್ಮಕ​ ಸವಾಲುಗಳನ್ನು ಮೆಟ್ಟಿ ನಿಂತು ಪುಳಿದೇಳಲಿದ್ದಾರೆ. ಆತ್ಮವಿಶ್ವಾಸದೊಂದಿಗೆ ಧನಾತ್ಮಕ ದೃಷ್ಟಿಕೋನವನ್ನು ನಿರ್ವಹಣೆ ಮಾಡಲಿದ್ದಾರೆ. ವೃತ್ತಿಪರವಾಗಿ, ಮುಂಬರುವ ವರ್ಷಗಳಲ್ಲಿ ಏಳಿಗೆಯನ್ನು ಮುಂದುವರೆಸುವ ನಿರೀಕ್ಷೆಯಿದೆ. ವೈಯಕ್ತಿಕ ಜೀವನ ವಿಚಾರದಲ್ಲಿ ಮುಂದಿನ 2-3 ವರ್ಷಗಳಲ್ಲಿ ಸ್ಥಿರತೆಯನ್ನು ನಿರೀಕ್ಷಿಸಬಹುದಾಗಿದೆ.

    ಪಂಡಿತ್ ಜಗನ್ನಾಥ್ ಗುರೂಜಿ ಅವರ ಪ್ರಕಾರ ಸಾನಿಯಾರ ಪ್ರೇಮ ಜೀವನದಲ್ಲಿ ಪ್ರಸ್ತುತ ಹಂತವು ಸೂಕ್ತವಲ್ಲದಿದ್ದರೂ, ಮುಂದಿನ 2-3 ವರ್ಷಗಳಲ್ಲಿ ಶುಕ್ರನ ಸೂಕ್ತ ಸ್ಥಿತಿಯು ಧನಾತ್ಮಕ ಬದಲಾವಣೆಯನ್ನು ತರಲಿದೆ. ಇದೇ ಸಮಯದಲ್ಲಿ ಎರಡನೇ ಮದುವೆ ಮಾಡಿಕೊಳ್ಳುವ ತೀರ್ಮಾನವನ್ನು ಮಾಡುವ ಸಾಧ್ಯತೆ ಇದೆ. ಇದೆಲ್ಲವೂ ಕಾರ್ಯರೂಪಕ್ಕೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ.

    ಸನಾ-ಮಲಿಕ್​ ಸಂಬಂಧವೂ ಮುರಿದು ಬೀಳಲಿದೆ
    ಸನಾ ಮತ್ತು ಮಲಿಕ್​ ಜಾತಕಫಲವನ್ನು ನೋಡಿದರೆ, ಶನಿ ಮತ್ತು ಶುಕ್ರನ ಸ್ಥಾನ ದುರ್ಬಲವಾಗಿರುವುದರಿಂದ ಮುಂಬರುವ ದಿನಗಳಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನವವಿವಾಹಿತರು ತಮ್ಮ ದಾಂಪತ್ಯವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕೆಂಬುದನ್ನು ಇದು ಸೂಚಿಸುತ್ತದೆ. ಜಾತಕದಲ್ಲಿ ಮಂಗಳ ಸ್ಥಾನವನ್ನು ಪರಿಶೀಲಿಸಿದಾಗ, ಶೋಯಿಬ್ ಮತ್ತು ಸನಾ ಇಬ್ಬರೂ ಅತಿಯಾಗಿ ಯೋಚಿಸುತ್ತಾರೆ ಎಂಬ ಸುಳಿವು ಇದೆ. ಇದು ಮುಂದಿನ 3-5 ವರ್ಷಗಳಲ್ಲಿ ಅವರ ಸಂಬಂಧದಲ್ಲಿ ಅಸ್ಥಿರತೆಗೆ ಕಾರಣವಾಗಬಹುದು ಎಂದು ಪಂಡಿತ್​ ಜಗನ್ನಾಥ್​ ಗುರೂಜಿ ತಿಳಿಸಿದ್ದಾರೆ.

    ಇನ್ನೂ ವೃತ್ತಿ ಜೀವನದ ವಿಚಾರಕ್ಕೆ ಬಂದರೆ, ಶೋಯಿಬ್ ಮಲಿಕ್ ಸರಾಸರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಆದರೆ, ಸನಾ ಜಾವೇದ್ ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು ಹಾಗೂ ಉತ್ತಮ ಅವಕಾಶಗಳನ್ನು ಪಡೆಯಬಹುದು. ಆದಾಗ್ಯೂ, ಈ ಕ್ಷಣದಲ್ಲಿ ಅವರಿಬ್ಬರಿಗೂ ಭವಿಷ್ಯವು ಉತ್ತಮವಾಗಿ ತೋರುತ್ತಿಲ್ಲ ಎಂದು ಗುರೂಜಿ ಹೇಳಿದ್ದಾರೆ.

    ಡಿವೋರ್ಸ್​ ವಿಚಾರ ಶುರುವಾಗಿದ್ದ ಯಾವಾಗ?
    2022ರ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್​ ವದಂತಿ ಕತೆ ಇಂದು ಶೋಯಿಬ್​, ಸನಾ ಜಾವೇದ್​ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್​ ಬೇರೆಯಾಗಿರುವುದು ಖಚಿತವಾಗಿದೆ.

    ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

    3 ವರ್ಷದ ಅಕ್ರಮ ಸಂಬಂಧಕ್ಕೆ ಅಧಿಕೃತ ಮುದ್ರೆ! ಮಲಿಕ್​ ಮೋಹದ ಬಲೆಗೆ ಸನಾ ಬಿದ್ದಿದ್ಹೇಗೆ? ಇಂಚಿಂಚೂ ಮಾಹಿತಿ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts