More

    3 ವರ್ಷದ ಅಕ್ರಮ ಸಂಬಂಧಕ್ಕೆ ಅಧಿಕೃತ ಮುದ್ರೆ! ಮಲಿಕ್​ ಮೋಹದ ಬಲೆಗೆ ಸನಾ ಬಿದ್ದಿದ್ಹೇಗೆ? ಇಂಚಿಂಚೂ ಮಾಹಿತಿ ಬಯಲು

    ದುಬೈ: ಭಾರತದ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾರ ವೈವಾಹಿಕ ಜೀವನದ ಇನ್​ಸೈಡ್​ ಸ್ಟೋರಿ ಈಗ ಬಯಲಿಗೆ ಬರುತ್ತಿದೆ. ಇಷ್ಟು ದಿನ ಸಾನಿಯಾ ಮತ್ತು ಶೋಯಿಬ್​ ಮಲಿಕ್​ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡಿದರೂ ಕೇವಲ ವದಂತಿ ಎಂದೇ ಹೇಳಲಾಗಿತ್ತು. ಆದರೆ, ಮೊನ್ನೆ ಮಲಿಕ್​ ಅವರು ದಿಢೀರನೇ ಪಾಕ್​ ನಟಿ ಸನಾ ಜಾವೇದ್​ ಜತೆ ಮದುವೆ ಆಗಿರುವ ಫೋಟೋವನ್ನು ಶೇರ್​ ಮಾಡಿಕೊಂಡ ಬೆನ್ನಲ್ಲೇ ಡಿವೋರ್ಸ್​ ವದಂತಿ ನಿಜವಾಯಿತು.

    ಇನ್ನು ಸನಾ ಜಾವೇದ್​ಗೆ ಇದು ಎರಡನೇ ಮದುವೆಯಾದರೆ, ಮಲಿಕ್​ಗೆ ಮೂರನೇ ಮದುವೆ. ಸನಾ ಜಾವೇದ್​ ಈ ಹಿಂದೆ ಪಾಕ್​ ಸಿಂಗ್​ ಉಮೈರ್​ ಜಾಸ್ವಾಲ್​ ಎಂಬುವರನ್ನು ಮದುವೆಯಾದರು. ಮದುವೆ ಆಗಿದ್ದರೂ ಸುಮಾರು 3 ವರ್ಷಗಳ ಕಾಲ ಸನಾ, ಮಲಿಕ್​ ಜತೆ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಪಾಕಿಸ್ತಾನಿ ಪತ್ರಕರ್ತ ಮತ್ತು ಸಾಮಾ ಟಿವಿಯ ಬ್ಯೂರೋ ಮುಖ್ಯಸ್ಥ ನಯೀಮ್ ಹನೀಫ್ ಅವರು ಮಾತನಾಡಿದ್ದಾರೆ. 3-4 ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಸನಾ ಮತ್ತು ಶೋಯಿಬ್​ ಪರಿಚಯವಾಯಿತು ಎಂದಿದ್ದಾರೆ.

    ಸನಾ ಜಾವೇದ್ ಮತ್ತು ಶೋಯಿಬ್ ಮಲಿಕ್ ಕಳೆದ ಮೂರು ವರ್ಷಗಳ ಹಿಂದೆಯೇ ಭೇಟಿಯಾದರು. ಆ ಸಮಯದಲ್ಲಿ, ಸನಾ ಜಾವೇದ್ ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರು. ಸನಾ ಜೀತೋ ಪಾಕಿಸ್ತಾನ ಕಾರ್ಯಕ್ರಮದಲ್ಲಿ ಶೋಯಿಬ್ ಮಲಿಕ್‌ನನ್ನು ಭೇಟಿಯಾದಳು. ಈ ಕಾರ್ಯಕ್ರಮದಲ್ಲಿ ನಿರಂತರವಾಗಿ ಇಬ್ಬರು ಭೇಟಿಯಾದಾಗ ಇಬ್ಬರ ನಡುವೆ ಆಳವಾದ ಸ್ನೇಹ ಆರಂಭವಾಯಿತು. ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಸನಾ ಜಾವೇದ್ ಅವರನ್ನು ಅತಿಥಿಯಾಗಿ ಕರೆದರೆ ಮಾತ್ರ ಕಾರ್ಯಕ್ರಮಗಳಿಗೆ ಬರುತ್ತೇನೆ ಎಂದು ಮಲಿಕ್​ ಷರತ್ತುಗಳನ್ನು ಹಾಕುತ್ತಿದ್ದರು. ಸನಾ ಜಾವೇದ್ ಈಗಾಗಲೇ ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದರಿಂದ ಈ ವಿಚಾರ ಹೆಚ್ಚು ಗಮನಕ್ಕೆ ಬರಲಿಲ್ಲ. ಅಲ್ಲದೆ, ಜನರು ನಟಿ ಆಯೇಷ ಓಮರ್​ ಬಗ್ಗೆ ಚಿಂತಿಸುತ್ತಿದ್ದರು. ಮಲಿಕ್​ ಜತೆ ಆಕೆಯ ಹೆಸರು ಕೂಡ ತಳುಕು ಹಾಕಿಕೊಂಡಿತ್ತು ಎಂದು ನಯೀಮ್ ಹನೀಫ್ ಹೇಳಿದ್ದಾರೆ.

    ಮಾತು ಮುಂದುವರಿಸಿದ ಹನೀಫ್​, ಶೋಯಿಬ್ ಮಲಿಕ್ ಅವರ ವಿವಾಹೇತರ ಸಂಬಂಧದ ಬಗ್ಗೆ ಸಾನಿಯಾ ಮಿರ್ಜಾ ಆರಂಭಿಕ ಹಂತದಲ್ಲೇ ತಿಳಿದಿದ್ದರು. ನಂತರ ಸಾನಿಯಾ, ಮಲಿಕ್​ ಕುಟುಂಬವನ್ನು ಸಂಪರ್ಕಿಸಿ ಎಲ್ಲವನ್ನೂ ಹೇಳಿದ್ದರು. ಬಳಿಕ ದುಬೈ ಮನೆಯಲ್ಲಿ ಇಬ್ಬರ ಮಧ್ಯಸ್ಥಿಕೆ ನಡೆಸಲಾಯಿತು. ಮಲಿಕ್​ ಕುಟುಂಬವು ಸಾನಿಯಾ ಪರವಾಗಿ ನಿಂತಾಗ, ಕೋಪಗೊಂಡ ಶೋಯಿಬ್ ತಮ್ಮ ಸಂಬಂಧಕ್ಕೆ ಮತ್ತೊಂದು ಅವಕಾಶವನ್ನು ನೀಡಲು ಬಯಸಲಿಲ್ಲ ಎಂದು ಹನೀಫ್​ ತಿಳಿಸಿದ್ದಾರೆ.

    ಸುಮಾರು 2-3 ತಿಂಗಳ ಹಿಂದೆ ಸನಾ ಜಾವೇದ್ ತನ್ನ ಪತಿ ಉಮೈರ್ ಜಸ್ವಾಲ್‌ಗೂ ವಿಚ್ಛೇದನ ಬಯಸಿರುವುದಾಗಿ ತಿಳಿಸಿದ್ದಳು. ದಿಢೀರ್​ ಆಗಿ ಡಿವೋರ್ಸ್​ ಕೇಳಿದ್ದರಿಂದ ಪಾಕಿಸ್ತಾನದ ಗಾಯಕ-ಗೀತರಚನೆಕಾರನಿಗೆ ಒಂದು ಕ್ಷಣ ಶಾಕ್​ ಆಯಿತು. ಸಹಜವಾಗಿ, ಆಕೆಯ ಪ್ರಕರಣದಲ್ಲಿ ಯಾವುದೇ ಊಹಾಪೋಹಗಳಿಗೆ ಉತ್ತೇಜನ ನೀಡಲು ಯಾವುದೇ ಮಾಧ್ಯಮ ವರದಿಗಳಿಲ್ಲ. ಮಾಧ್ಯಮಗಳು ಶೋಯಿಬ್ ಹಾಗೂ ಆಯೆಶಾ ಒಮರ್ ಜೊತೆಗಿನ ಪ್ರಣಯದ ವದಂತಿಗಳನ್ನು ವರದಿ ಮಾಡಿದವು. ಆದರೆ, ಸದ್ದಿಲ್ಲದೆ, ಸನಾ ಮತ್ತು ಮಲಿಕ್​ ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೆ ದೂಡಿದರು ಎಂದು ಹನೀಫ್​ ತಿಳಿಸಿದ್ದಾರೆ.

    ಫ್ರೆಂಡ್​ ಹೇಳಿದ ಮಾತು ನಿಜವಾಯ್ತು!
    ಅಂದಹಾಗೆ ಸಾನಿಯಾ ಮತ್ತು ಶೋಹಿಬ್​ ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಡಿವೋರ್ಸ್​ ಪಡೆಯಲು ದಂಪತಿ ಮುಂದಾಗಿದ್ದಾರೆ ಎಂಬ ಸುದ್ದಿ ಒಂದು ವರ್ಷದ ಹಿಂದೆಯೇ ಹರಿದಾಡಿತ್ತು. ಇದೇ ವಿಚಾರವಾಗಿ ಸಾನಿಯಾ ಮತ್ತು ಮಲಿಕ್​ ಅವರ ಫ್ರೆಂಡ್ಸ್​ ಪ್ರತಿಕ್ರಿಯೆ ನೀಡಿದ್ದರು. ಸಾನಿಯಾರ ಫ್ರೆಂಡ್ಸ್​ ಪ್ರಕಾರ ಈಗಾಗಲೇ ಇಬ್ಬರು ಒಂದು ನಿರ್ಧಾರಕ್ಕೆ ಬಂದಿದ್ದು, ಇಬ್ಬರು ಡಿವೋರ್ಸ್​ ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಡಿವೋರ್ಸ್​ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ ಎಂದು 2022ರ ನವೆಂಬರ್​ ತಿಂಗಳಲ್ಲೇ ಈ ಮಾತನ್ನು ಆಡಿದ್ದರು. ಆದರೆ, ಈ ಬಗ್ಗೆ ಸಾನಿಯಾ-ಶೋಯಿಬ್​ ಪ್ರತಿಕ್ರಿಯೆ ನೀಡದಿದ್ದರಿಂದ ಇದೂ ಕೂಡ ವದಂತಿಯಾಗಿತ್ತು. ಆದರೆ, ಈಗ ಈ ಮಾತು ನಿಜವಾಗಿದೆ.

    ಮಲಿಕ್​ ಬಗ್ಗೆಯೂ ಫ್ರೆಂಡ್ಸ್​ ಮಾತನಾಡಿದ್ದರು
    ಮತ್ತೊಂದೆಡೆ ಶೋಯಿಬ್ ಮಲಿಕ್ ಅವರ ಪಾಕಿಸ್ತಾನ ಕ್ರಿಕೆಟ್ ಮ್ಯಾನೇಜ್‌ಮೆಂಟ್ ಸದಸ್ಯರು ಮತ್ತು ಫ್ರೆಂಡ್ಸ್​ ಸಹ ಇದನ್ನು ಖಚಿತಪಡಿಸಿದ್ದರು. ಇಬ್ಬರೂ ಬೇರ್ಪಟ್ಟಿದ್ದಾರೆ ಮತ್ತು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಸಾನಿಯಾ ಮಿರ್ಜಾ ದುಬೈನಲ್ಲಿ ತಂಗಿದ್ದು, ಶೋಯೆಬ್ ಮಲಿಕ್ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದರು.

    ಇನ್​ಸ್ಟಾಗ್ರಾಂ ಬಯೋ
    ಕೆಲವು ತಿಂಗಳುಗಳ ಹಿಂದೆ ಶೋಯಿಬ್​ ಮಲಿಕ್​ ಅವರ ಇನ್​ಸ್ಟಾಗ್ರಾಂ ಬಯೋದಲ್ಲಾಗಿರುವ ಬದಲಾವಣೆ ಸಹ ಡಿವೋರ್ಸ್​ ವದಂತಿಗೆ ಪುಷ್ಠಿ ನೀಡಿತು ಮತ್ತು ಡಿವೋರ್ಸ್​ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿತ್ತು. ಈ ಮೊದಲು ಬಯೋದಲ್ಲಿ ಸೂಪರ್​ವುಮ್ಯನ್​ ಸಾನಿಯಾ ಮಿರ್ಜಾರ ಪತಿ ಎಂದು ಶೋಯಿಬ್​ ಬರೆದುಕೊಂಡಿದ್ದರು. ಆದರೆ, ಅದನ್ನು ತೆಗೆದಿದ್ದರು. ಹೀಗಾಗಿ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿರುವುದು ಖಚಿತ ಎನ್ನಲಾಗಿತ್ತು.

    ಡಿವೋರ್ಸ್​ ವಿಚಾರ ಶುರುವಾಗಿದ್ದ ಯಾವಾಗ?
    2022ರ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್​ ವದಂತಿ ಕತೆ ಇಂದು ಶೋಯಿಬ್​, ಸನಾ ಜಾವೇದ್​ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್​ ಬೇರೆಯಾಗಿರುವುದು ಖಚಿತವಾಗಿದೆ.

    ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

    ಸಹೋದರಿಯಿಂದಲೇ ಶೋಯಿಬ್​​ ಮಲಿಕ್ ಅಸಲಿ ಮುಖ ಬಯಲು! ಸಾನಿಯಾ ಜತೆ ಡಿವೋರ್ಸ್​ಗೆ ಇದೇ ಕಾರಣ…

    ಮೂಗುತಿ ಸುಂದರಿ ಸಾನಿಯಾ ಮಾಜಿ ಪತಿ ಶೋಯೆಬ್ ಮಲಿಕ್ ಮೊದಲ ಮದುವೆ ನಡೆದಿದ್ದು ಫೋನ್​ನಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts