ಸಹೋದರಿಯಿಂದಲೇ ಶೋಯಿಬ್​​ ಮಲಿಕ್ ಅಸಲಿ ಮುಖ ಬಯಲು! ಸಾನಿಯಾ ಜತೆ ಡಿವೋರ್ಸ್​ಗೆ ಇದೇ ಕಾರಣ…

Sania Mirza

ದುಬೈ: ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್​​ ಮಲಿಕ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಒಂದು ವರ್ಷದಿಂದಲೂ ಹರಿದಾಡುತ್ತಲೇ ಇತ್ತು. ಆದರೆ, ಸಾನಿಯಾ ಆಗಲಿ, ಶೋಯಿಬ್​ ಆಗಲಿ ಅಧಿಕೃತವಾಗಿ ಮಾತನಾಡಿರಲಿಲ್ಲ. ಆದರೆ, ಅವರ ನಡೆ-ನುಡಿ ಮಾತ್ರ ಇಬ್ಬರ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿತ್ತು. ಇತ್ತೀಚೆಗಷ್ಟೇ ಸಾನಿಯಾ, ಮದುವೆ ಮತ್ತು ಡಿವೋರ್ಸ್​ ಬಗ್ಗೆಯೂ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಇದು ಕೂಡ ವದಂತಿ ಎಂದೇ ಹೇಳಲಾಗಿತ್ತು. ಆದರೆ ದಿಢೀರ್​ ಬೆಳವಣಿಗೆ ಎನ್ನುವಂತೆ ಪಾಕಿಸ್ತಾನದ ಖ್ಯಾತ​ ನಟಿ ಸನಾ ಜಾವೇದ್​ರನ್ನು ಮದುವೆಯಾಗುವ ಮೂಲಕ ಶೋಯಿಬ್,​ ಡಿವೋರ್ಸ್​ ವದಂತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ.

ಶೋಯಿಬ್ ಮಲಿಕ್​ಗೆ ಇದು ಮೂರನೇ ಮದುವೆಯಾದರೆ, ಸನಾ ಜಾವೆದ್​ಗೆ ಇದು ಎರಡನೇ ಮದುವೆ. ಅಚ್ಚರಿಯ ಸಂಗತಿ ಏನೆಂದರೆ, ಶೋಯಿಬ್​ ಮದುವೆಗೆ ಅವರ ಕುಟುಂಬವೇ ವಿರೋಧ ವ್ಯಕ್ತಪಡಿಸಿದೆ. ಹೆಣ್ಣಿನ ಮೇಲೆ ಮಲಿಕ್​ಗೆ ಇರುವ ಮೋಹದ ಮುಖವಾಡವನ್ನು ಸಹೋದರಿಯೇ ಮಾಧ್ಯಮಗಳ ಎದುರು ಕಳಚಿದ್ದಾರೆ. ಮಲಿಕ್​ ವಿವಾಹೇತರ ಸಂಬಂಧಗಳೇ ಸಾನಿಯಾ ಜತೆಗಿನ ವೈವಾಹಿಕ ಸಂಬಂಧ ಮುರಿದು ಬೀಳಲು ಕಾರಣ ಎಂದು ಸಹೋದರಿ ತಿಳಿಸಿದ್ದಾರೆ.

ಶೋಯಿಬ್​ ಮಲಿಕ್ ವಿವಾಹೇತರ ಸಂಬಂಧಗಳಿಂದ ಸಾನಿಯಾ ಬೇಸತ್ತಿದ್ದರು ಎಂದು ಮಲಿಕ್​ ಸಹೋದರಿ ತಿಳಿಸಿದ್ದಾರೆ.​ ಮಲಿಕ್​ ಮದುವೆಗೆ ಅವರ ಕುಟುಂಬದ ಯಾವೊಬ್ಬ ಸದಸ್ಯರು ಕೂಡ ಭಾಗಿಯಾಗಿಲ್ಲ. ಮಲಿಕ್​ ನಡೆಯಿಂದ ಕುಟುಂಬಸ್ಥರೇ ಬೇಸತ್ತಿದ್ದಾರೆ ಎಂದು ಪಾಕ್​ ಮಾಧ್ಯಮಗಳು ವರದಿ ಮಾಡಿವೆ.

ಫ್ರೆಂಡ್​ ಹೇಳಿದ ಮಾತು ನಿಜವಾಯ್ತು!
ಅಂದಹಾಗೆ ಸಾನಿಯಾ ಮತ್ತು ಶೋಹಿಬ್​ ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಡಿವೋರ್ಸ್​ ಪಡೆಯಲು ದಂಪತಿ ಮುಂದಾಗಿದ್ದಾರೆ ಎಂಬ ಸುದ್ದಿ ಒಂದು ವರ್ಷದ ಹಿಂದೆಯೇ ಹರಿದಾಡಿತ್ತು. ಇದೇ ವಿಚಾರವಾಗಿ ಸಾನಿಯಾ ಮತ್ತು ಮಲಿಕ್​ ಅವರ ಫ್ರೆಂಡ್ಸ್​ ಪ್ರತಿಕ್ರಿಯೆ ನೀಡಿದ್ದರು. ಸಾನಿಯಾರ ಫ್ರೆಂಡ್ಸ್​ ಪ್ರಕಾರ ಈಗಾಗಲೇ ಇಬ್ಬರು ಒಂದು ನಿರ್ಧಾರಕ್ಕೆ ಬಂದಿದ್ದು, ಇಬ್ಬರು ಡಿವೋರ್ಸ್​ ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಡಿವೋರ್ಸ್​ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ ಎಂದು 2022ರ ನವೆಂಬರ್​ ತಿಂಗಳಲ್ಲೇ ಈ ಮಾತನ್ನು ಆಡಿದ್ದರು. ಆದರೆ, ಈ ಬಗ್ಗೆ ಸಾನಿಯಾ-ಶೋಯಿಬ್​ ಪ್ರತಿಕ್ರಿಯೆ ನೀಡದಿದ್ದರಿಂದ ಇದೂ ಕೂಡ ವದಂತಿಯಾಗಿತ್ತು. ಆದರೆ, ಈಗ ಈ ಮಾತು ನಿಜವಾಗಿದೆ.

ಮಲಿಕ್​ ಬಗ್ಗೆಯೂ ಫ್ರೆಂಡ್ಸ್​ ಮಾತನಾಡಿದ್ದರು
ಮತ್ತೊಂದೆಡೆ ಶೋಯಿಬ್ ಮಲಿಕ್ ಅವರ ಪಾಕಿಸ್ತಾನ ಕ್ರಿಕೆಟ್ ಮ್ಯಾನೇಜ್‌ಮೆಂಟ್ ಸದಸ್ಯರು ಮತ್ತು ಫ್ರೆಂಡ್ಸ್​ ಸಹ ಇದನ್ನು ಖಚಿತಪಡಿಸಿದ್ದರು. ಇಬ್ಬರೂ ಬೇರ್ಪಟ್ಟಿದ್ದಾರೆ ಮತ್ತು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಸಾನಿಯಾ ಮಿರ್ಜಾ ದುಬೈನಲ್ಲಿ ತಂಗಿದ್ದು, ಶೋಯೆಬ್ ಮಲಿಕ್ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎಂದು ಹೇಳಿದ್ದರು.

ಇನ್​ಸ್ಟಾಗ್ರಾಂ ಬಯೋ
ಕೆಲವು ತಿಂಗಳುಗಳ ಹಿಂದೆ ಶೋಯಿಬ್​ ಮಲಿಕ್​ ಅವರ ಇನ್​ಸ್ಟಾಗ್ರಾಂ ಬಯೋದಲ್ಲಾಗಿರುವ ಬದಲಾವಣೆ ಸಹ ಡಿವೋರ್ಸ್​ ವದಂತಿಗೆ ಪುಷ್ಠಿ ನೀಡಿತು ಮತ್ತು ಡಿವೋರ್ಸ್​ ವಿಚಾರವನ್ನು ಮತ್ತೆ ಮುನ್ನೆಲೆಗೆ ತಂದಿತ್ತು. ಈ ಮೊದಲು ಬಯೋದಲ್ಲಿ ಸೂಪರ್​ವುಮ್ಯನ್​ ಸಾನಿಯಾ ಮಿರ್ಜಾರ ಪತಿ ಎಂದು ಶೋಯಿಬ್​ ಬರೆದುಕೊಂಡಿದ್ದರು. ಆದರೆ, ಅದನ್ನು ತೆಗೆದಿದ್ದರು. ಹೀಗಾಗಿ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿರುವುದು ಖಚಿತ ಎನ್ನಲಾಗಿತ್ತು.

ಡಿವೋರ್ಸ್​ ವಿಚಾರ ಶುರುವಾಗಿದ್ದ ಯಾವಾಗ?
2022ರ ನವೆಂಬರ್​ 11ರಂದು ಸಾನಿಯಾ ಮಿರ್ಜಾ ಇನ್​ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್​ ವದಂತಿ ಹರಡಲು ಆರಂಭವಾಯಿತು. ಇದರ ನಡುವೆ ಒಮ್ಮೆ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಸಾನಿಯಾ ಹಂಚಿಕೊಂಡು, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದರು. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ದುಬೈನಲ್ಲಿ ಇಜಾನ್‌ನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್​​ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲಿಂದ ಶುರುವಾದ ಡಿವೋರ್ಸ್​ ವದಂತಿ ಕತೆ ಇಂದು ಶೋಯಿಬ್​, ಸನಾ ಜಾವೇದ್​ ಜತೆ ಮದುವೆ ಆಗುವವರೆಗೂ ಬಂದು ನಿಂತಿದೆ. ಅಲ್ಲದೆ, ಸಾನಿಯಾ-ಶೋಯಿಬ್​ ಬೇರೆಯಾಗಿರುವುದು ಖಚಿತವಾಗಿದೆ.

ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್​​ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್​)

ಸಾನಿಯಾ-ಶೋಯಿಬ್​ ಡಿವೋರ್ಸ್​ಗೆ ಅಸಲಿ ಕಾರಣ ಇಲ್ಲಿದೆ! ಮಲಿಕ್​ ವಿರುದ್ಧವೇ ತಿರುಗಿಬಿದ್ದ ಪಾಕ್​ ಮಾಧ್ಯಮಗಳು

36ನೇ ವಸಂತಕ್ಕೆ ಕಾಲಿಟ್ಟ ಸಾನಿಯಾ ಮಿರ್ಜಾ: ಪತ್ನಿಯ ಹುಟ್ಟುಹಬ್ಬಕ್ಕೆ ಶೋಯಿಬ್​ ಮಾಡಿದ ಟ್ವೀಟ್​ ವೈರಲ್​!

ಮದ್ವೆ ಎಂಬುದು ಕಷ್ಟ ಡಿವೋರ್ಸ್ ಅಂದ್ರೆ​… ಸಾನಿಯಾ ಮಿರ್ಜಾ ನೋವಿನ ಮಾತು, ಮಲಿಕ್ ಮೇಲೆ ಮುನಿಸು?

Share This Article

ಜೋಳದ ಜುಟ್ಟಿನಲ್ಲಿದೆ ಆರೋಗ್ಯದ ಗುಟ್ಟು! ಈ ರೀತಿ ಸೇವಿಸಿ ನೋಡಿ ನಿಮ್ಮ ಹೊಟ್ಟೆ ಫುಲ್​ ಕ್ಲೀನ್​ ಆಗುತ್ತೆ | Corn Silk

Corn Silk : ಹವಾಮಾನಕ್ಕೆ ಅನುಗುಣವಾಗಿ ನಾವು ಕೆಲವು ಆಹಾರಗಳನ್ನು ಇಷ್ಟಪಡುತ್ತೇವೆ. ಮಳೆಗಾಲ ಮತ್ತು ಚಳಿಗಾಲದಲ್ಲಿ…

ಅಧಿಕ ಬಿಪಿ ಇರುವವರು ಯಾವ ಆಹಾರದಿಂದ ದೂರವಿರಬೇಕು ಎಂದು ನಿಮಗೆ ತಿಳಿದಿದೆಯೇ? high blood pressure

high blood pressure: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಬಿಪಿ ಸಮಸ್ಯೆಯೂ ಒಂದು. ಅಧಿಕ…

ಶಿವನ ಕೃಪೆಗೆ ಪಾತ್ರರಾಗಲು ಈ ಒಂದು ಕೆಲಸ ಮಾಡಬೇಕು! Lord Shiva Worship

Lord Shiva Worship: ಪರಮೇಶ್ವರ ಹಿಂದೂಗಳು ಹೆಚ್ಚು ಪೂಜಿಸುವ ದೇವರುಗಳಲ್ಲಿ ಒಂದಾಗಿದೆ. ಭಗವಂತನನ್ನು ಒಂದೊಂದು ಸ್ಥಳದಲ್ಲಿ…