ದುಬೈ: ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಮಲಿಕ್ (Shoib Malik) ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಸಾನಿಯಾ ಆಗಲಿ ಅಥವಾ ಶೋಯಿಬ್ ಆಗಲಿ ತುಟಿ ಬಿಚ್ಚದಿರುವುದು ಡಿವೋರ್ಸ್ ವದಂತಿ ಇನ್ನಷ್ಟು ರೆಕ್ಕೆ-ಪುಕ್ಕ ಬಂದಿತ್ತು. ಇದೀಗ ಶೋಯಿಬ್ ಮಾಡಿರುವ ಟ್ವೀಟ್ ರಕ್ಕೆ-ಪುಕ್ಕ ಕತ್ತರಿಸಿದಂತಿದೆ.
ಹೌದು, ಇಂದು ಸಾನಿಯಾ ಮಿರ್ಜಾ ಅವರು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶೋಯಿಬ್ ಅವರು ಸಾನಿಯಾಗೆ ಶುಭ ಕೋರುವ ಮೂಲಕ ವಂದತಿಗಳಿಗೆ ತೆರೆಎಳೆದಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಸಾನಿಯಾ ಮಿರ್ಜಾ. ಆರೋಗ್ಯ ಮತ್ತು ಸಂತೋಷಕರ ಜೀವನ ನಿಮ್ಮದಾಗಲಿ ಎಂದು ಪ್ರಾರ್ಥಿಸುತ್ತೇನೆ. ಈ ದಿನವನ್ನು ಪೂರ್ಣವಾಗಿ ಆನಂದಿಸಿ ಎಂದು ಶೋಯಿಬ್ ಟ್ವೀಟ್ ಮಾಡಿದ್ದಾರೆ.
Happy Birthday to you @MirzaSania Wishing you a very healthy & happy life! Enjoy the day to the fullest… pic.twitter.com/ZdCGnDGLOT
— Shoaib Malik 🇵🇰 (@realshoaibmalik) November 14, 2022
ಡಿವೋರ್ಸ್ ವದಂತಿಯ ನಡುವೆ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸ್ಟಾರ್ ದಂಪತಿಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬ ಸಂದೇಶ ರವಾನೆಯಾಗಿದೆ. ಆದರೂ ಡಿವೋರ್ಸ್ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿದ್ದರೂ ಇಬ್ಬರಲ್ಲಿ ಒಬ್ಬರಾದರೂ ಯಾವುದೇ ಪ್ರತ್ರಿಕ್ರಿಯೆ ನೀಡದಿರುವುದು ಸಹ ಅನುಮಾನಕ್ಕೆ ಕಾರಣವಾಗಿದೆ. ಅದೇನೆ ಇರಲಿ ಇದೀಗ ಶೋಯಿಬ್ ಶುಭ ಕೋರಿರುವುದು ಅಭಿಮಾನಿಗಳಿಗೆ ಖುಷಿಯಾಗಿದೆ.
ಎರಡು ದಿನದ ಹಿಂದಷ್ಟೇ ಸಾನಿಯಾ ಮಿರ್ಜಾ ಮತ್ತು ಶೋಯಿಬ್ ಮಲಿಕ್ ಒಟ್ಟಿಗೆ ಶೋ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಇಬ್ಬರು “ದಿ ಮಿರ್ಜಾ-ಮಲಿಕ್ ಶೋ” ನಡೆಸಿಕೊಡಲಿದ್ದಾರೆ. ಶೀಘ್ರವೇ ಇದು ಉರ್ದುಫ್ಲಿಕ್ಸ್ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ವಿಚಾರವನ್ನು ಉರ್ದುಫ್ಲಿಕ್ಸ್ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ. ಡಿವೋರ್ಸ್ ವದಂತಿ ಹರಿದಾಡುತ್ತಿರುವಾಗಲೇ ಇಬ್ಬರು ಜೊತೆಯಾಗಿ ಶೋ ಒಂದನ್ನು ನಡೆಸಿಕೊಡುತ್ತಾರೆ ಎಂಬ ಸುದ್ದಿ ಎಲ್ಲರ ಊಹೆಯನ್ನು ತಲೆಕೆಳಗಾಗಿಸಿದೆ. ಇನ್ನೇನು ಇಬ್ಬರು ಡಿವೋರ್ಸ್ ಪಡೆಯಲಿದ್ದಾರೆ ಎಂದು ಭಾವಿಸಲಾಗಿತ್ತು. ಸ್ಟಾರ್ ದಂಪತಿಯ ವರ್ತನೆಯು ಸಹ ಇದಕ್ಕೆ ಪುಷ್ಠಿ ನೀಡುವಂತಿದೆ.ಆದರೆ, ಇದೀಗ ಉರ್ದುಫ್ಲಿಕ್ಸ್ ಹರಿಬಿಟ್ಟಿರುವ ಒಂದೇ ಒಂದು ಪೋಸ್ಟ್ ಎಲ್ಲ ವದಂತಿಗಳಿಗೆ ಬ್ರೇಕ್ ಹಾಕಿದಂತಿದೆ. ಈವರೆಗೂ ಸಾನಿಯಾ ಆಗಲಿ ಅಥವಾ ಶೋಯಿಬ್ ಆಗಲಿ ಪ್ರತಿಕ್ರಿಯೆ ನೀಡಿಲ್ಲ. ಶೋ ಆರಂಭವಾದಾಗ ಈ ಬಗ್ಗೆ ಏನು ಮಾತನಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಬ್ರೇಕಪ್ ಸುದ್ದಿ ಹರಡಲು ಕಾರಣವೇನು?
ಇತ್ತೀಚೆಗೆ Sania Mirza ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್ (Breakup) ವದಂತಿ ಹರಡಲು ಆರಂಭವಾಗಿದೆ. ಕಳೆದ ಶುಕ್ರವಾರ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿರುವ ಸಾನಿಯಾ, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದಾರೆ. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ಇತ್ತೀಚೆಗಷ್ಟೇ ದುಬೈನಲ್ಲಿ ಇಜಾನ್‌ನ (Izan Mirza Malik) ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿದೆ.
ಮತ್ತೊಂದೆಡೆ ಶೋಯಿಬ್ ಅವರ ಪಾಕಿಸ್ತಾನ ಕ್ರಿಕೆಟ್ ಮ್ಯಾನೇಜ್‌ಮೆಂಟ್ ಸದಸ್ಯರೂ ಇದನ್ನು ಖಚಿತಪಡಿಸಿದ್ದಾರೆ. ಇಬ್ಬರೂ ಬೇರ್ಪಟ್ಟಿದ್ದಾರೆ ಮತ್ತು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಪಾಕಿಸ್ತಾನಿ ಕ್ರಿಕೆಟ್ ಸದಸ್ಯರು ಬಹಿರಂಗಪಡಿಸಿದ್ದಾರೆ. ಸದ್ಯ ಸಾನಿಯಾ ಮಿರ್ಜಾ ದುಬೈನಲ್ಲಿ ತಂಗಿದ್ದು, ಶೋಯಿಬ್ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಮಗನ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ದುಬೈನಲ್ಲಿ ಸಾನಿಯಾರನ್ನು ಭೇಟಿಯಾದರು.
ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್)
ಶೀಘ್ರದಲ್ಲೇ ಸಾನಿಯಾ-ಶೋಯಿಬ್… ಡಿವೋರ್ಸ್ ವದಂತಿಗೆ ಸ್ಫೋಟಕ ತಿರುವು ಕೊಟ್ಟ ಉರ್ದುಫ್ಲಿಕ್ಸ್!
ಶೋಯಿಬ್ ಮೊದಲ ಪತ್ನಿಯು ಸಹ ಭಾರತೀಯಳೇ! ಆಯೇಶಾ ಬಳಿಕ ಇದೀಗ ಸಾನಿಯಾ ಸರದಿ
ಸಾನಿಯಾ-ಶೋಯಿಬ್ ಮಧ್ಯೆ ಆಯೇಶಾ? ಡಿವೋರ್ಸ್ ವದಂತಿಗೆ ಸ್ಫೋಟಕ ತಿರುವು ಕೊಟ್ಟ ಪಾಕ್ ಮಾಧ್ಯಮಗಳು!
ಸಾನಿಯಾ ಮಿರ್ಜಾ-ಶೋಯಿಬ್ ಮಲಿಕ್ ಡಿವೋರ್ಸ್ ವದಂತಿ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಾನಿಯಾ ಫ್ರೆಂಡ್!