ನವದೆಹಲಿ: ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಿಬ್ ಮಲಿಕ್ (Shoib Malik) ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೆಲ ದಿನದಿಂದ ಹರಿದಾಡುತ್ತಿದೆ. ಇದು ವದಂತಿಯೋ? ಅಥವಾ ನಿಜವೋ? ಎಂಬುದು ಈವರೆಗೂ ಸಾಬೀತಾಗಿಲ್ಲ. ಈ ಕ್ಷಣದವರೆಗೂ ಸಾನಿಯಾ ಆಗಲಿ ಅಥವಾ ಶೋಯಿಬ್ ಆಗಲಿ ಪ್ರತಿಕ್ರಿಯೆ ನೀಡದಿರುವುದು ಸ್ಟಾರ್ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಗಟ್ಟಿಯಾಗಿದೆ. ಅಲ್ಲದೆ, ಇಬ್ಬರ ಡಿವೋರ್ಸ್ ಕಾನೂನು ಪ್ರಕ್ರಿಯೆ ಮುಗಿದಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಡಿವೋರ್ಸ್ ಸುದ್ದಿಯ ನಡುವೆ ಶೋಯಿಬ್ ಅವರ ಮೊದಲ ಮದುವೆ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಸಾನಿಯಾರನ್ನು ಮದುವೆ ಆಗುವ ಮುನ್ನ ಶೋಯಿಬ್ ಭಾರತೀಯ ಮೂಲದ ಆಯೇಶಾ ಸಿದ್ದಿಖಿಯನ್ನು ವರಿಸಿದ್ದರು. ಈಕೆಯ ಜೊತೆಯು ಡಿವೋರ್ಸ್ ಪಡೆದುಕೊಂಡಿದ್ದಾರೆ ಎಂಬ ವಿಚಾರ ಇದೀಗ ಬಯಲಾಗಿದೆ.
ಆಯೇಶಾಳ ಮೂಲ ಹೆಸರು ಮಹಾ ಸಿದ್ದಿಖಿ. ಈಕೆ ವೃತ್ತಿಯಲ್ಲಿ ಓರ್ವ ಶಿಕ್ಷಕಿಯಾಗಿದ್ದು, ಹೈದರಬಾದ್ ಮೂಲದವಳು. ಆಯೇಶಾಳನ್ನು ಮದುವೆಯಾಗಿದ್ದ ಶೋಯಿಬ್ ಮೊದಲ ಪತ್ನಿಗೆ ಡಿವೋರ್ಸ್ ನೀಡದೇ ಸಾನಿಯಾ ಜೊತೆ ಎರಡನೇ ಮದುವೆ ಆಗುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆಯೇಶಾ ಮತ್ತು ಶೋಯಿಬ್ 2002 ರಲ್ಲಿ ವಿವಾಹವಾದರಂತೆ. ಈ ಕುರಿತು ವಿಡಿಯೋ ಪುರಾವೆ ಹಂಚಿಕೊಂಡ ಬಳಿಕ ಆಯೇಶಾ ಶೋಯಿಬ್ ವಿರುದ್ಧ ತನಗೆ ಮೋಸ ಮಾಡಿದ್ದಕ್ಕಾಗಿ ಪೊಲೀಸ್ ದೂರು ನೀಡಿದ್ದರು ಎಂದು ಹೇಳಲಾಗಿದೆ.
ಮೊದಲು ಶೋಯಿಬ್ ಮಲಿಕ್‌ನಿಂದ ವಿಚ್ಛೇದನ ಪಡೆಯಲು ಬಯಸಿರುವುದಾಗಿ ತಿಳಿಸಿದ ಆಯೇಶಾ, ನಂತರದಲ್ಲಿ 15 ಕೋಟಿ ರೂಪಾಯಿ ಜೀವನಾಂಶವನ್ನು ಪಡೆದಿದ್ದಾಗಿ ಬಹಿರಂಗಪಡಿಸಿದಳು. ಆರಂಭದಿಂದಲೂ ಮೊದಲ ಮದುವೆ ಮಾಹಿತಿ ನಿರಾಕರಿಸುತ್ತಿದ್ದ ಶೋಯಿಬ್, 2010ರ ಏಪ್ರಿಲ್ನಲ್ಲಿ ಸಾನಿಯಾರನ್ನು ಮದುವೆ ಆಗುವುದಕ್ಕೂ ಮುನ್ನ ಆಯೇಶಾರಿಂದ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡಿದ್ದರು. 10 ರಿಂದ 15 ಜನ ಸೇರಿ ಸಂಧಾನ ಮೂಲಕ ಡಿವೋರ್ಸ್ ಪ್ರಕರಣವನ್ನು ಇತ್ಯರ್ಥಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಸಾನಿಯಾರಿಂದಲೇ ಡಿವೋರ್ಸ್ ಪಡೆಯಲು ಶೋಯಿಬ್ ಮುಂದಾಗಿದ್ದಾರೆ.
ಬ್ರೇಕಪ್ ಸುದ್ದಿ ಹರಡಲು ಕಾರಣವೇನು?
ಇತ್ತೀಚೆಗೆ Sania Mirza ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ “ಕಠಿಣ ದಿನಗಳು ಮತ್ತು ಒಡೆದ ಹೃದಯಗಳು” ಎಂದು ಬರೆದುಕೊಂಡಿದ್ದರು. ಅಲ್ಲಿಂದಾಚೆಗೆ ಇಬ್ಬರ ಬ್ರೇಕಪ್ (Breakup) ವದಂತಿ ಹರಡಲು ಆರಂಭವಾಗಿದೆ. ಕಳೆದ ಶುಕ್ರವಾರ ಇಝಾನ್ ಜೊತೆಗಿನ ಮುದ್ದಾದ ಫೋಟೋವನ್ನು ಹಂಚಿಕೊಂಡಿರುವ ಸಾನಿಯಾ, ಕಠಿಣ ದಿನಗಳಲ್ಲಿ ನನ್ನನ್ನು ಪಡೆಯುವ ಕ್ಷಣಗಳು ಎಂದು ಬರೆದಿದ್ದಾರೆ. ಇಷ್ಟೇ ಅಲ್ಲದೆ, ಶೋಯಿಬ್ ಮತ್ತು ಸಾನಿಯಾ ಇತ್ತೀಚೆಗಷ್ಟೇ ದುಬೈನಲ್ಲಿ ಇಜಾನ್‌ನ (Izan Mirza Malik) ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದರು. ಬರ್ತಡೇ ಪಾರ್ಟಿಯ ಅನೇಕ ಫೋಟೋಗಳನ್ನು ಶೋಯಿಬ್ ಹಂಚಿಕೊಂಡರೆ, ಸಾನಿಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಯಾವುದನ್ನೂ ಹಂಚಿಕೊಂಡಿಲ್ಲ ಇದು ಅನುಮಾನಗಳಿಗೆ ಕಾರಣವಾಗಿದೆ.
ಮತ್ತೊಂದೆಡೆ ಶೋಯಿಬ್ ಅವರ ಪಾಕಿಸ್ತಾನ ಕ್ರಿಕೆಟ್ ಮ್ಯಾನೇಜ್‌ಮೆಂಟ್ ಸದಸ್ಯರೂ ಇದನ್ನು ಖಚಿತಪಡಿಸಿದ್ದಾರೆ. ಇಬ್ಬರೂ ಬೇರ್ಪಟ್ಟಿದ್ದಾರೆ ಮತ್ತು ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಪಾಕಿಸ್ತಾನಿ ಕ್ರಿಕೆಟ್ ಸದಸ್ಯರು ಬಹಿರಂಗಪಡಿಸಿದ್ದಾರೆ. ಸದ್ಯ ಸಾನಿಯಾ ಮಿರ್ಜಾ ದುಬೈನಲ್ಲಿ ತಂಗಿದ್ದು, ಶೋಯಿಬ್ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಮಗನ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ದುಬೈನಲ್ಲಿ ಸಾನಿಯಾರನ್ನು ಭೇಟಿಯಾದರು.
ಅಂದಹಾಗೆ ಸಾನಿಯಾ ಮಿರ್ಜಾ (Sania Mirza) ಮತ್ತು ಶೋಯಿಬ್ ಮಲಿಕ್ (Shoib Malik) 2010ರ ಏಪ್ರಿಲ್ 12ರಂದು ಹೈದರಾಬಾದ್‌ನಲ್ಲಿರುವ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾಂಪ್ರದಾಯಿಕ ಹೈದರಾಬಾದಿ ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ನಂತರ ಪಾಕಿಸ್ತಾನಿ ಪದ್ಧತಿಯಂತೆ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್)
ಸಾನಿಯಾ-ಶೋಯಿಬ್ ಮಧ್ಯೆ ಆಯೇಶಾ? ಡಿವೋರ್ಸ್ ವದಂತಿಗೆ ಸ್ಫೋಟಕ ತಿರುವು ಕೊಟ್ಟ ಪಾಕ್ ಮಾಧ್ಯಮಗಳು!
ಸಾನಿಯಾ ಮಿರ್ಜಾ-ಶೋಯಿಬ್ ಮಲಿಕ್ ಡಿವೋರ್ಸ್ ವದಂತಿ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಾನಿಯಾ ಫ್ರೆಂಡ್!
ಶೋಯೆಬ್ ಜತೆ ಡಿವೋರ್ಸ್! ವದಂತಿಗೆ ಪುಷ್ಟಿ ನೀಡಿದ ಮತ್ತೊಂದು ನೋವಿನ ಪೋಸ್ಟ್