More

    ಮಗುವಿಗೆ ತಾಯಿ ಆರೈಕೆ ಮುಖ್ಯ ಮಗು ಹಸ್ತಾಂತರ ವಿಚಾರಣೆ ವೇಳೆ ಹೈಕೋರ್ಟ್ ಅಭಿಮತ

    ಬೆಂಗಳೂರು :  ಗಂಡುಮಗುವು ತಂದೆಯ ಪಾಲನೆಯಲ್ಲಿದ್ದರೂ ಅದಕ್ಕೆ ತಾಯಿಯ ಆರೈಕೆ ಬಹಳ ಮುಖ್ಯ ಎಂದಿರುವ ಹೈಕೋರ್ಟ್, ವಾರದಲ್ಲಿ ಒಂದು ದಿನ ಮಾತ್ರ ತಾಯಿಯ ಭೇಟಿಗೆ ಅವಕಾಶ ನೀಡಿದರೆ ಸಾಲದು, ಕನಿಷ್ಠ ಎರಡು ದಿನವಾದರೂ ನೀಡಬೇಕು ಎಂದು ಮಧ್ಯಂತರ ಆದೇಶ ನೀಡಿದೆ.

    ಮಗುವಿನ ಸುಪರ್ದಿಯನ್ನು ತಾಯಿಗೆ ಹಸ್ತಾಂತರಿಸುವಂತೆ ಮದ್ದೂರು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಹಾಗೂ ನ್ಯಾಯಮೂರ್ತಿ ಶಿವಶಂಕರೇಗೌಡ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

    ಈ ವೇಳೆ ಅರ್ಜಿದಾರರ ಪರ ವಕೀಲ ಸಿದ್ಧಾರ್ಥ್ ಬಿ. ಮುಚ್ಚಂಡಿ, ಪತ್ನಿ ಹೇಳದೆ- ಕೇಳದೆ ಪತಿಯನ್ನು ತೊರೆದು ಮನೆಬಿಟ್ಟು ಹೋದ ದಿನದಿಂದಲೂ ಅರ್ಜಿದಾರರು ಮಕ್ಕಳನ್ನು ಸಲಹುತ್ತಿದ್ದಾರೆ. ಶಿಕ್ಷಣ, ವಸತಿ ಸೇರಿ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತ ಬಂದಿದ್ದಾರೆ. ಇದನ್ನು ಗಮನಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿಲವಾಗಿದೆ ಎಂದು ಆಕ್ಷೇಪಿಸಿದರು.

    ಅಲ್ಲದೆ, ಕಲಾಪದ ವೇಳೆ ಪೀಠದ ಸಮ್ಮುಖದಲ್ಲೇ ಮಗು ತನ್ನ ತಾಯಿಯೊಂದಿಗೆ ಹೋಗಲು ನಿರಾಕರಿಸಿದ್ದು ತಂದೆಯ ಪಾಲನೆಯಲ್ಲೇ ಇರಲು ಅಭಿಲಾಷೆ ವ್ಯಕ್ತಪಡಿಸಿದೆ. ಆದರೆ, ಆತ ಹದಿಹರೆಯದವ ಎನ್ನುವ ಕಾರಣಕ್ಕೆ ಅವನ ಹೇಳಿಕೆಯನ್ನು ಪರಿಗಣಿಸದೆ ವಿಚಾರಣಾ ನ್ಯಾಯಾಲಯವು ಆತನನ್ನು ತಾಯಿಯ ಸುಪರ್ದಿಗೆ ನೀಡುವಂತೆ ಆದೇಶ ಹೊರಡಿಸಿದೆ.

    ಇದು ಕಾನೂನಿಗೆ ವಿರುದ್ಧವಾದ ನಡೆ. ಹಾಗಾಗಿ ಈ ಆದೇಶವನ್ನು ರದ್ದುಗೊಳಿಸಬೇಕು. ಮಗುವನ್ನು ತಂದೆ ಸುಪರ್ದಿಗೆ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ತಾಯಿ ಮಗುವನ್ನು ಭೇಟಿ ಮಾಡಲು ವಾರದಲ್ಲಿ ಒಂದು ದಿನ ಅವಕಾಶ ನೀಡುವುದಾಗಿ ಹೇಳಿದರು.

    ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಪೀಠ, ಗಂಡು ಮಗುವು ತಂದೆಯ ಪಾಲನೆಯಲ್ಲಿದ್ದರು ಸಹ ತಾಯಿ ಆರೈಕೆ ಬಹಳ ಮುಖ್ಯ. ತಾಯಿಯ ಭೇಟಿಗೆ ಕೇವಲ ವಾರದಲ್ಲಿ ಒಂದು ದಿನ ಅವಕಾಶ ನೀಡಿದರೆ ಸಾಲದು ಕನಿಷ್ಠ ಎರಡು ದಿನವಾದರೂ ನೀಡಬೇಕು ಎಂದು ತಿಳಿಸಿ ತಾಯಿ ಮಗುವಿನ ಭೇಟಿಗೆ ಎರಡು ದಿನಗಳ ಅವಕಾಶ ನೀಡಿದೆ. ಅಲ್ಲದೆ, ಮಗುವಿನ ಸುಪರ್ದಿಯನ್ನು ತಾಯಿಗೆ ಹಸ್ತಾಂತರಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪಿಗೆ ತಡೆಯಾಜ್ಞೆ ವಿಧಿಸಿ ಪ್ರತಿವಾದಿಗೆ ಈ ಸಂಬಂಧ ನೋಟಿಸ್ ಜಾರಿಗೊಳಿಸಿದ್ದು, ವಿಚಾರಣೆಯನ್ನು ಮುಂದೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts