ಢಾಕಾ: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಸನಾ ಜಾವೇದ್‌ರನ್ನು ವಿವಾಹವಾದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಾಗಿನಿಂದ ಎಲ್ಲೆಡೆ ಕೋಲಾಹಲವೇ ಉಂಟಾಗಿದೆ. ಸಾನಿಯಾ ಮಿರ್ಜಾ ಅವರಿಂದ ವಿಚ್ಛೇದನ ಪಡೆದು ಮೂರನೇ ಮದುವೆಯಾದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಜೊತೆಗಿನ ಸ್ನೇಹದ ಬಗ್ಗೆ ಮನಬಿಚ್ಚಿ ಮಾತನಾಡಿದ ಎಬಿ ಡಿವಿಲಿಯರ್ಸ್?
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಫಾರ್ಚೂನ್ ಬಾರಿಶಾಲ್ ಮಾಲೀಕ ಮಿಜಾನುರ್ ರೆಹಮಾನ್ ಶುಕ್ರವಾರ ಶೋಯೆಬ್ ಮಲಿಕ್ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮಲಿಕ್ ಯಾವುದೇ ಫಿಕ್ಸಿಂಗ್ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಿಂದ ಅವರನ್ನು ಹೊರಹಾಕಲಾಗಿದೆ ಎಂಬ ಸುದ್ದಿ ಬಂದ ನಂತರ ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ ಮಿಜಾನುರ್ ರೆಹಮಾನ್, ಶೋಯೆಬ್ ಮಲಿಕ್ ಕುರಿತ ವದಂತಿಯ ಬಗ್ಗೆ ನಾನು ತೀವ್ರವಾಗಿ ಖಂಡಿಸುತ್ತೇನೆ. ಮಲ್ಲಿಕ್ ಶ್ರೇಷ್ಠ ಆಟಗಾರ. ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದು ತಪ್ಪು. ನಾವು ಸತತ ಎರಡು ಪಂದ್ಯಗಳನ್ನು ಸೋತಿದ್ದೇವೆ. ಆದ್ದರಿಂದ ನಾವು ಮುಂದಿನ ಮ್ಯಾಚ್ಗಳತ್ತ ಗಮನ ಹರಿಸಬೇಕು ಮತ್ತು ನಾವು ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸವಿದೆ ಎಂದು ರೆಹಮಾನ್ ತಿಳಿಸಿದರು.
Official statement ;
I would like to address and dismiss the recent rumors circulating about my playing position with Fortune Barishal. I had a thorough discussion with our captain, Tamim Iqbal, and we mutually planned the way forward. I had to leave Bangladesh for a… pic.twitter.com/kmPqPt1nxv— Shoaib Malik 🇵🇰 (@realshoaibmalik) January 26, 2024
ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿದ್ದು ಯಾಕೆ ಗೊತ್ತಾ ?: ಜನವರಿ 22 ರಂದು ಬಾರಿಶಾಲ್ ಮತ್ತು ಖುಲ್ನಾ ಟೈಗರ್ಸ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಬಾರಿಶಾಲ್ ಪರ ಬೌಲಿಂಗ್ ದಾಳಿಗಿಳಿದ್ದ ಮಲಿಕ್ ಕೇವಲ ಒಂದು ಓವರ್ ಬೌಲ್ ಮಾಡಿ 18 ರನ್ ನೀಡಿದ್ದರು. ಈ ಓವರ್ನಲ್ಲಿ ಮಲಿಕ್ ಬರೋಬ್ಬರಿ 3 ನೋ ಬಾಲ್‌ಗಳನ್ನು ಎಸೆದಿದ್ದರು. ಸಾಮಾನ್ಯವಾಗಿ ವೇಗಿಗಳು ಒಂದು ಓವರ್ನಲ್ಲಿ ಮೂರು ನೋ ಬಾಲ್ ಎಸೆದರೆ ಯಾರಿಗೂ ಅಚ್ಚರಿಯಾಗುತ್ತಿರಲಿಲ್ಲ. ಆದರೆ ಸ್ಪಿನ್ ಬೌಲರ್ ಒಬ್ಬರು ಸತತ ಮೂರು ನೋಬಾಲ್ ಎಸೆದದ್ದು ನೋಡಿ ಮಲಿಕ್ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ಶೋಯೆಬ್ ಮಲಿಕ್ ಇದ್ದಕ್ಕಿದ್ದಂತೆ ಪಂದ್ಯಾವಳಿಯನ್ನು ಮಧ್ಯದಲ್ಲಿ ತೊರೆದು ದುಬೈಗೆ ತೆರಳಿದ್ದಾರೆ ಎಂದು ವರದಿಯಾಗಿತ್ತು.
ಶೋಯೆಬ್ ಮಲಿಕ್ ಏಕದಿನ ಮತ್ತು ಟೆಸ್ಟ್ ಸ್ವರೂಪದಿಂದ ನಿವೃತ್ತರಾಗಿದ್ದಾರೆ. ಆದರೆ ಟಿ20 ಮಾದರಿಯಿಂದ ನಿವೃತ್ತಿಯಾಗಿಲ್ಲ.
INDIA ಮೈತ್ರಿಕೂಟಕ್ಕೆ ಅಘಾತ: ಮತ್ತೆ ಬಿಜೆಪಿ ಜೊತೆ ನಿತೀಶ್ಕುಮಾರ್ ದೋಸ್ತಿ!