More

    ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಚಿರತೆ ದಾಳಿಯಿಂದ ಸ್ವಲ್ಪದರಲ್ಲೇ ಪಾರು!

    ಹರಾರೆ: ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಗೈ ವಿಠಲ್ ಚಿರತೆ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅವರನ್ನು ಹರಾರೆಗೆ ಕರೆದೊಯ್ದು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.

    ಇದನ್ನೂ ಓದಿ: ಪಾಟ್ನಾದಲ್ಲಿ ಭೀಕರ ಅಗ್ನಿ ಅವಘಡ.. ಆರು ಮಂದಿ ಸಜೀವ ದಹನ

    ಹುಮನಿ ಅರಣ್ಯ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ. ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಅವರ ಪತ್ನಿ ಹನಾ ಹೇಳಿದ್ದಾರೆ. ಚಿರತೆ ದಾಳಿಯಿಂದ ವಿಠಲ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು. ತನ್ನ ಪತಿಗೆ ತಕ್ಷಣ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದಳು.

    ವಿಠಲ್ ಜಿಂಬಾಬ್ವೆಯ ಅರಣ್ಯದಲ್ಲಿ ಸಫಾರಿ ವಹಿವಾಟು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಹುಮನಿ ಅರಣ್ಯದಲ್ಲಿ ಚಾರಣ ಮಾಡುತ್ತಿದ್ದಾಗ ಚಿರತೆಯೊಂದು ದಾಳಿ ನಡೆಸಿತ್ತು. ತೀವ್ರ ರಕ್ತಸ್ರಾವವಾಗುತ್ತಿದ್ದ ಅವರಿಗೆ ಹಿಪ್ಪೋ ಕ್ಲಿನಿಕ್ ನಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಹೆಲಿಕಾಪ್ಟರ್ ಮೂಲಕ ಹರಾರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಉತ್ತಮ ಚಿಕಿತ್ಸೆಗಾಗಿ ಮಿಲ್ಟನ್ ಮಾರ್ಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಠಲ್ ಅವರ ಪತ್ನಿ ಹನಾ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ.

    2013ರಲ್ಲಿ ವಿಠಲ್ ಅವರ ಹಾಸಿಗೆಯ ಕೆಳಗೆ ಬೃಹತ್ ಮೊಸಳೆಯೊಂದು ಮಲಗಿತ್ತು. ಮರುದಿನ, ವಿಠಲರ ಸಹಾಯಕ ಬಂದು ಮೊಸಳೆಯನ್ನು ನೋಡಿ ಎಚ್ಚರಿಸಿದ್ದರು. ಸುಮಾರು ಹತ್ತು ವರ್ಷಗಳ ಕಾಲ ಜಿಂಬಾಬ್ವೆ ಪರ ಆಡಿದ ವಿಠಲ್ ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 46 ಟೆಸ್ಟ್ ಹಾಗೂ 147 ಏಕದಿನ ಪಂದ್ಯಗಳಲ್ಲಿ ಭಾಗವಹಿಸಿದ್ದರು.

    “ಒಂದು ರಾತ್ರಿಗೆ ನನ್ನ ರೇಟ್ ಎಷ್ಟು ಅಂದ್ರೆ?” ಬಿಗ್‌ಬಾಸ್ ಪ್ರಿಯಾಂಕಾ ಸಿಂಗ್ ಕಾಮೆಂಟ್ಸ್ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts