blank

ಆಧಾರ್ ಕಾರ್ಡ್‌ ಬಲಭಾಗದಲ್ಲಿ QR ಕೋಡ್‌ ಏಕಿದೆ ಗೊತ್ತಾ? ಉಪಯೋಗವೇನು? ಇಲ್ಲಿದೆ ಅಚ್ಚರಿ ಉತ್ತರ! Aadhaar card

Aadhaar card

Aadhaar card : ಕೇಂದ್ರ ಮತ್ತು ರಾಜ್ಯದ ಸವಲತ್ತುಗಳನ್ನು ಪಡೆಯುವುದರ ಜೊತೆಗೆ, ಆಧಾರ್ ಕಾರ್ಡ್ ದೇಶದ ನಾಗರಿಕರಿಗೆ ಅತ್ಯಂತ ಮುಖ್ಯವಾದ ಗುರುತಿನ ದಾಖಲೆಯಾಗಿದೆ.

blank

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಆಧಾರ್ ಕಾರ್ಡ್ ಅನ್ನು ನೀಡುತ್ತದೆ. ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಸರ್ಕಾರಿ ಕಾರ್ಯಕ್ರಮಗಳ ಪ್ರಯೋಜನ ಸೇರಿದಂತೆ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್​ ಕಡ್ಡಾಯವಾಗಿದೆ.

ಆಧಾರ್​ ಪ್ರಾಥಮಿಕ ಗುರುತಿನ ದಾಖಲೆಯಾಗಿರುವುದರಿಂದ, ಆಧಾರ್‌ನಲ್ಲಿರುವ ಮಾಹಿತಿಯು ನಿಖರವಾಗಿರಬೇಕು. ನಿಖರವಾಗಿದೆ ಎಂದು ಹೇಗೆ ಪರಿಶೀಲಿಸುವುದು? ಅದಕ್ಕಾಗಿ ನೀವು ಆಧಾರ್ ಕಾರ್ಡ್‌ನ ಬಲಭಾಗದಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಹೀಗೆ ಮಾಡಿದರೆ, ಆಧಾರ್ ಕಾರ್ಡ್‌ನ ವಿವರಗಳನ್ನು ನೀವು ಪರಿಶೀಲಿಸಬಹುದು. ಈ QR ಕೋಡ್ ಏಕೆ ಇದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಉಪಯೋಗವೇನು ಎಂದು ನಿಮಗೆ ತಿಳಿದಿದೆಯೇ? ನಾವಿಂದು ತಿಳಿದುಕೊಳ್ಳೋಣ.

ಇದನ್ನೂ ಓದಿ: ಇಂಥಾ ದೃಶ್ಯ ಹಿಂದೆಂದೂ ನೋಡಿರಲಿಲ್ಲ… ಕೊಹ್ಲಿ ಕ್ರೇಜ್​ ನೋಡಿ ಮತ್ತೊಮ್ಮೆ ಬೆರಗಾಯ್ತು ಕ್ರೀಡಾ ಜಗತ್ತು! Virat Kohli

ಆಧಾರ್‌ನಲ್ಲಿರುವ QR ಕೋಡ್ ಅನ್ನು Google Play Store, Apple Store, Windows ಹೊಂದಿರುವ ಸ್ಮಾರ್ಟ್‌ಫೋನ್‌ಗಳಿಗಾಗಿ UIDAI ನ mAadhaar ಅಪ್ಲಿಕೇಶನ್ ಅಥವಾ UIDAI ಅನುಮೋದಿಸಿದ QR ಕೋಡ್ ಸ್ಕ್ಯಾನಿಂಗ್ ಅಪ್ಲಿಕೇಶನ್ ಬಳಸಿ ಮಾತ್ರ ಸ್ಕ್ಯಾನ್ ಮಾಡಬಹುದು.

Windows ಅಪ್ಲಿಕೇಶನ್ ಅನ್ನು ಅಧಿಕೃತ ವೆಬ್‌ಸೈಟ್ “uidai.gov.in” ನಿಂದ ಡೌನ್‌ಲೋಡ್ ಮಾಡಬಹುದು. UIDAI ವೆಬ್‌ಸೈಟ್ ಪ್ರಕಾರ, ಆಧಾರ್ QR ಕೋಡ್‌ಗಳು ನಿವಾಸಿಯ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮತ್ತು ಆಧಾರ್ ಸಂಖ್ಯೆ ಸೇರಿದಂತೆ ವಿವರಗಳನ್ನು ಒಳಗೊಂಡಿರುತ್ತವೆ.

mAadhaar ಅಪ್ಲಿಕೇಶನ್ ಮೂಲಕ QR ಕೋಡ್​ ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಪರಿಶೀಲಿಸುವುದು ಹೇಗೆ?
* ಮೊದಲು mAadhaar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ತೆರೆಯಿರಿ.
* ನಂತರ QR ಕೋಡ್ ಸ್ಕ್ಯಾನರ್ ಅನ್ನು ತೆರೆಯಿರಿ
* ಆಧಾರ್ ಕಾರ್ಡ್‌ಗಳ ಎಲ್ಲ ಪ್ರತಿಗಳು QR ಕೋಡ್ ಅನ್ನು ಹೊಂದಿರುತ್ತವೆ.
* ಆಧಾರ್‌ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ

ಸ್ಕ್ಯಾನ್​ ಮಾಡಿದಾಗ ಆಧಾರ್ ಹೊಂದಿರುವವರ ಹೆಸರು, ಲಿಂಗ, ಜನ್ಮ ದಿನಾಂಕ, ವಿಳಾಸ ಮತ್ತು ಫೋಟೋ ಸೇರಿದಂತೆ ಮಾಹಿತಿಯನ್ನು ವೀಕ್ಷಿಸಬಹುದು. ಈ ವಿವರಗಳನ್ನು UIDAI ಡಿಜಿಟಲ್ ಸಹಿ ಮಾಡಿ ದೃಢೀಕರಿಸಿದೆ. ನಕಲಿ ಆಧಾರ್ ಕಾರ್ಡ್ ತಯಾರಿಸಿದ್ದರೆ, ಈ QR ಕೋಡ್ ಅನ್ನು ಪರಿಶೀಲಿಸುವ ಮೂಲಕ ಅದನ್ನು ಸುಲಭವಾಗಿ ಪತ್ತೆ ಮಾಡಬಹುದು. (ಏಜೆನ್ಸೀಸ್​)

ಆನ್​ಲೈನ್ ಉಗ್ರರ ಮೇಲೆ ಎನ್​ಐಎ! ಯುವಕರ ಸೆಳೆಯಲು ಟೆಲಿಗ್ರಾಂ, ಸಿಗ್ನಲ್​, ವೈಬರ್​ ಬಳಕೆ, 325 ಶಂಕಿತರು ಸೆರೆ

ಮಂಗಳಕ್ಕೆ ನಾಸಾ ಮಾನವಯಾನ? ಭೂಮಿಯಾಚೆ ಮಾನವನ ವಾಸಕ್ಕೆ ಯೋಜನೆ ಸಿದ್ಧ

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank