

ನವದೆಹಲಿ: ಮುಂದಿನ ಕೆಲ ದಶಕಗಳಲ್ಲಿ ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸುವ ರೋಚಕ ಕಾರ್ಯಾಚರಣೆ ನಡೆಸುವ ಬಗ್ಗೆ ನಾಸಾ ಕೆಲಸ ಮಾಡುತ್ತಿದ್ದು, ಇದಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಗಗನ ಯಾತ್ರಿಗಳು ಮಂಗಳ ಗ್ರಹದಲ್ಲಿ ದೀರ್ಘ ಪ್ರಯಾಣ ಮತ್ತು ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಬಹುದೆಂದು ಖಚಿತ ಪಡಿಸಿಕೊಳ್ಳಲು ಸಂಪೂರ್ಣ ಸಂಶೋಧನೆ ನಡೆಸಲಾಗುತ್ತಿದೆ. 2030ರ ಯೋಜನೆಗಳೊಂದಿಗೆ, ಭೂಮಿಯಾಚೆಗಿನ ಮಾನವನ ಅದ್ಭುತ ಸಾಹಸಕ್ಕಾಗಿ ನಾಸಾ ಸಿದ್ಧವಾಗುತ್ತಿದೆ.
ಸೌರವ್ಯೂಹದ ಕೆಲ ಸ್ಥಳಗಳಲ್ಲಿ ಮಂಗಳ ಪ್ರಮುಖ ಸ್ಥಳವಾಗಿದೆ. ಈ ಹಿಂದೆ ಇಲ್ಲಿ ಮಾನವ ಜೀವನ ಬೆಂಬಲಿಸುವ ಅಂಶಗಳಿದ್ದವು. ಅದರ ಕೆಂಪು ಮೇಲ್ಮೈ ಧೂಳು ಮತ್ತು ಕಬ್ಬಿಣದ ಆಕ್ಸೈಡ್ನಿಂದ ಆವೃತವಾಗಿದೆ. ಅಲ್ಲದೆ ಹಿಂದೆ ಇಲ್ಲಿ ಮನುಷ್ಯ ಬದುಕು ಸವೆಸಿರಬಹುದು ಎಂದು ಅಂದಾಜಿಸಲು ಪೂರಕ ಸುಳಿವುಗಳೂ ಕಂಡುಬಂದಿದೆ. ಮಂಗಳಕ್ಕೆ ಮಾನವನನ್ನು ಕಳುಹಿಸಿ ಅನ್ವೇಷಣೆ ನಡೆಸುವುದು ನಮ್ಮ ಉದ್ದೇಶ. ಏಕೆಂದರೆ ಸೌರವ್ಯೂಹದಲ್ಲಿ ಜೀವಿಗಳು ಅಸ್ತಿತ್ವದಲ್ಲಿ ಇದ್ದಿರಬಹುದೆಂದು ತಿಳಿದಿರುವ ಇತರ ಸ್ಥಳಗಳಲ್ಲಿ ಮಂಗಳ ಕೂಡ ಒಂದು ಎಂದು ನಾಸಾ ವಿವರಿಸಿದೆ. ಮಂಗಳ ಗ್ರಹದಲ್ಲಿ ಜೀವಿಗಳು ಇದ್ದವೇ ಇಲ್ಲವೇ ಎಂಬುದು ಭೂಮಿಯ ಇತಿಹಾಸದ ಬಗ್ಗೆ ನಮಗೆ ಹೆಚ್ಚಿನದನ್ನು ಕಲಿಸಲಿದೆ. ವಿಶ್ವದಲ್ಲಿ ಬೇರೆಲ್ಲಿಯಾದರೂ ಜೀವವಿದೆಯೇ ಎಂಬ ದೊಡ್ಡ ಪ್ರಶ್ನೆಗೆ ಉತ್ತರಿಸಲು ಕೂಡ ಇದು ಸಹಾಯ ಮಾಡಲಿದೆ. ಈ ಕಾರ್ಯಾಚರಣೆಯು ಕೇವಲ ಇನ್ನೊಂದು ಗ್ರಹವನ್ನು ತಲುಪುವುದಕ್ಕಿಂತ ಹೆಚ್ಚು ನಾವು ಜೀವನವನ್ನು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದನ್ನು ಕೂಡ ಅದು ಬದಲಾಯಿಸಲಿದೆ ಎಂದು ನಾಸಾ ಹೇಳಿದೆ.
ಸುನಿತಾ, ವಿಲ್ಮೋರ್ ಸ್ಪೇಸ್ವಾಕ್: ಭೂಮಿಗೆ ಮರಳಲಾಗದೆ ಸುಮಾರು ಎಂಟು ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಉಳಿದು ಕೊಂಡಿರುವ ನಾಸಾ ಗಗನಯಾನಿಗಳಾದ ಸುನಿತಾ ವಿಲಿಯಮ್್ಸ ಮತ್ತು ಬುಚ್ ವಿಲ್ಮೋರ್, ಗುರುವಾರ ಜತೆಯಾಗಿ ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸಿದರು. ಭಾರತೀಯ ಮೂಲದ ಕಮಾಂಡರ್ ಸುನಿತಾ ವಿಲಿಯಮ್್ಸ ಮತ್ತು ವಿಲ್ಮೋರ್, ಐಎಸ್ಎಸ್ನಿಂದ ಹೊರಗಡೆ ತೇಲಿ ಬಂದು ನಿರ್ವಹಣಾ ಕಾರ್ಯವನ್ನು ನಡೆಸಿದರು. ಇಬ್ಬರೂ ನಿಲ್ದಾಣದ ಹೊರ ಭಾಗವನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡಿದರು. ಭೂಮಿಯಿಂದ ಆಗಮಿಸಿದ ನಂತರ, ಜತೆಯಲ್ಲೇ ಬಂದಿರಬಹುದಾದ ಯಾವುದಾದರೂ ಸೂಕ್ಷಾ್ಮಣು ಜೀವಿಗಳು ಇನ್ನೂ ಜೀವಂತವಿದ್ದು ಕಂಡಿಗಳ (ವೆಂಟ್) ಮೂಲಕ ತಪ್ಪಿಸಿಕೊಂಡು ಹೋಗಿವೆಯೇ ಎಂದು ಪರಿಶೀಲಿಸುವುದು ಅದರ ಉದ್ದೇಶವಾಗಿತ್ತು. ‘ನೋಡಿ, ನಾವಿಲ್ಲಿದ್ದೇವೆ’ ಎಂದು ಸ್ಪೇಯ್್ನ ಮೇಲಿನಿಂದ 420 ಕಿಲೋ ಮೀಟರ್ ಎತ್ತರದಲ್ಲಿ ಹೊರಬಂದ ವಿಲ್ಮೋರ್ ಉದ್ಗರಿಸಿದರು. ಈ ಇಬ್ಬರೂ ಗಗನಯಾನಿಗಳು ತಮ್ಮ ಹಿಂದಿನ ಐಎಸ್ಎಸ್ ವಾಸ್ತವ್ಯದ ವೇಳೆ ಕೂಡ ಸ್ಪೇಸ್ವಾಕ್ ಮಾಡಿದ್ದರು. ಗುರುವಾರದ್ದು ಪ್ರಸ್ತುತ ವಾಸ್ತವ್ಯದ ಮೊದಲ ಬಾಹ್ಯಾಕಾಶ ನಡಿಗೆಯಾಗಿದೆ.