ಮುಂಬೈ: ಬಿಟೌನ್ನ ಹಾಟ್ ಆ್ಯಂಡ್ ಬೋಲ್ಡ್ ನಟಿ ಸನ್ನಿ ಲಿಯೋನ್ ತಮ್ಮ ಮಾದಕ ಲುಕ್ನಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಭಾರತೀಯ ಚಲನಚಿತ್ರೋದ್ಯಮದಲ್ಲಿನ ಸಾಧನೆಗಳ ಹೊರತಾಗಿಯೂ ತನ್ನ ಹಿಂದಿನದನ್ನೂ ಹೆಚ್ಚಾಗಿ ಹೈಲೈಟ್ ಮಾಡುವ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಬಾಯ್ಫ್ರೆಂಡ್ ಜತೆ ಬ್ರೇಕಪ್ ಮಾಡಿಕೊಂಡ್ರ ಶ್ರದ್ಧಾ ಕಪೂರ್? ಹೀಗೆನ್ನಲು ಕಾರಣವಾಯ್ತು ನಟಿಯ ಈ ಕೆಲಸ
ಇತ್ತೀಚಿಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ನಟಿ ಸನ್ನಿ ಲಿಯೋನ್ ಅವರನ್ನು ಅಡಲ್ಟ್ ಫಿಲ್ಮ ಸ್ಟಾರ್ ಎಂದು ಲೆಬೆಲ್ ಅಥವಾ ಟ್ಯಾಗ್ ಮಾಡುವ ಬಗ್ಗೆ ಪ್ರಶ್ನಿಸಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಸನ್ನಿ ಲಿಯೋನ್ ಬಾಲಿವುಡ್ಗೆ ಬಂದ 13 ವರ್ಷವಾಗಿದೆ. ಇನ್ನು ನನ್ನ ಹಳೆಯ ವೃತ್ತಿಜೀವನದ ನಿರಂತರ ಲೆಬಲ್ ಬಗ್ಗೆ ಮಾತನಾಡುತ್ತಿರುವುದು ಬೇಸರ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.
ನಾನು ಮೊದಲು ಭಾರತಕ್ಕೆ ಬಂದಾಗ ಜನರು ಕೆಲವು ಲೇಬಲ್‌ಗಳು ಅಥವಾ ಟ್ಯಾಗ್‌ಗಳನ್ನು ಬಳಸುವುದು ಸಾಮಾನ್ಯವಾಗಿತ್ತು. ಅದು ನಾನು ನಿರೀಕ್ಷಿಸಿದ ಸಂಗತಿಯಾಗಿತ್ತು. ಆದರೆ ಈಗ ಬಾಲಿವುಡ್ಗೆ ಬಂದು 13 ವರ್ಷಗಳ ನಂತರವೂ ಮತ್ತೆ ಈ ವಿಷಯ ಬರುತ್ತಿರುವುದು ಬೇಸರ ತಂದಿದೆ. ನಾವು ಪ್ರಸ್ತುತ ಮಾಡುತ್ತಿರುವ ಕೆಲಸದ ಮೇಲೆ ಕೇಂದ್ರಿಕರಿಸಬೇಕು ಜತೆಗೆ ಮುಂದೆ ಸಾಗಬೇಕು. ಅದನ್ನು ಹೊರತುಪಡಿಸಿ ಹಳೆಯ ವಿಚಾರವನ್ನೇ ಇನ್ನೂ ಮಾತನಾಡುವುದು ಆಸಕ್ತಿದಾಯಕವಲ್ಲ ಎಂದು ಹೇಳಿದ್ದಾರೆ.
ನಾವೆಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಹಾಗೂ ನಮ್ಮದೇ ಆದ ರೀತಿಯಲ್ಲಿ ಪ್ರಗತಿ ಸಾಧಿಸಿದ್ದೇವೆ. ನೀವು ಇದನ್ನು ಬಿಡದಿದ್ದರೆ, ನಾವೆಲ್ಲರೂ ಹೇಗೆ ಮುಂದುವರಿಯುತ್ತೇವೆ? ಈಗ ಅದೇ ಟ್ಯಾಗ್ ಬಗ್ಗೆ ಮಾತನಾಡುವುದು ನನಗೆ ವಿಚಿತ್ರ ಎನ್ನಿಸುತ್ತದೆ. ಇದು ನನ್ನ ಜೀವನದಲ್ಲಿ ನಡೆದಿರುವುದು ನಿಮಗೆ ತಿಳಿದಿರುವ ವಿಷಯ ಎಂದು ಹೇಳಿದರು.
ಸನ್ನಿ ಲಿಯೋನ್ 2005ರಲ್ಲಿ ಖಾಸಗಿ ವಾಹಿನಿಯ ರೆಡ್ ಕಾರ್ಪೆಟ್ ವರದಿಗಾರ್ತಿಯಾಗಿ ಭಾರತೀಯ ಮನರಂಜನಾ ಉದ್ಯಮದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. 2011ರಲ್ಲಿ ‘ಬಿಗ್ ಬಾಸ್‘ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಮತ್ತಷ್ಟು ಪ್ರಾಮುಖ್ಯತೆ ಪಡೆದರು. ಸನ್ನಿ ಲಿಯೋನ್ ಕೆನಡಾದ ಒಂಟಾರಿಯೊದಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದರು. ಆಕೆಯ ನಿಜವಾದ ಹೆಸರು ಕರೆಂಜಿತ್ ಕೌರ್ ವೋಹ್ರಾ. ಅವರು ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಉಭಯ ಪೌರತ್ವವನ್ನು ಹೊಂದಿದ್ದಾರೆ. (ಏಜೆನ್ಸೀಸ್)
‘ದೇವರ’ ಮತ್ತೊಂದು ಸಾಂಗ್ ರಿಲೀಸ್; ಜೂ.ಎನ್ಟಿಆರ್, ಜಾನ್ವಿ ರೊಮ್ಯಾನ್ಸ್ಗೆ ಫ್ಯಾನ್ಸ್ ಹೇಳಿದ್ದು ಹೀಗೆ