ಬಾಯ್​ಫ್ರೆಂಡ್​​ ಜತೆ ಬ್ರೇಕಪ್​ ಮಾಡಿಕೊಂಡ್ರ ಶ್ರದ್ಧಾ ಕಪೂರ್?​​ ಹೀಗೆನ್ನಲು ಕಾರಣವಾಯ್ತು ನಟಿಯ ಈ ಕೆಲಸ

Untitled-design-29
Published on

ಮುಂಬೈ: ಬಾಲಿವುಡ್​​ ಬೆಡಗಿ ಶ್ರದ್ಧಾಕಪೂರ್​​ ಸದ್ಯ ತಮ್ಮ ಮುಂಬರುವ ಹಾರರ್-ಕಾಮಿಡಿ ಸ್ತ್ರೀ-2 ಸಿನಿಮಾದ ಪ್ರಿರೀಲಿಸ್​​ ಪ್ರಚಾರಗಳಲ್ಲಿ ನಿರತರಾಗಿದ್ದಾರೆ. ಇದರ ಜತೆಗೆ ಅವರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಹುದಿನಗಳಿಂದ ಬಿಟೌನ್​ ಅಂಗಳದಲ್ಲಿ ಶ್ರದ್ಧಾ ಅವರ ಬಾಯ್​ಫ್ರೆಂಡ್​​ ಬಗೆಗಿನ ವದಂತಿ ಸಾಕಷ್ಟು ಚರ್ಚೆಯಲ್ಲಿತ್ತು. ಈಗ ಮತ್ತೆ ಅದೆ ಸುದ್ದಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾಗಿದ್ದು ಶ್ರದ್ಧಾ ಕಪೂರ್​​​​ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ರಾಹುಲ್​ ಮೋದಿ ಅವರನ್ನು ಅನ್​ಫಾಲೋ ಮಾಡಿರುವುದು.

ಈ ವರ್ಷದ ಆರಂಭದಲ್ಲಿ ಹಲವು ಸಮಾರಂಭಗಳಲ್ಲಿ ಶ್ರದ್ಧಾ ಕಪೂರ್​ ಮತ್ತು ರಾಹುಲ್​ ಮೋದಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ವಿವಾಹದಲ್ಲೂ ಈ ಇಬ್ಬರು ಭಾಗಿಯಾಗಿದ್ದರು. ಕೆಲವು ದಿನಗಳ ಹಿಂದೆ ಶ್ರದ್ಧಾ ಮೊದಲ ಬಾರಿಗೆ ರಾಹುಲ್ ಅವರೊಂದಿಗೆ ತೆಗೆದುಕೊಂಡ ಸೆಲ್ಫಿ ಫೋಟೊವನ್ನು ಹಂಚಿಕೊಂಡಿದ್ದರು.ಇದರಿಂದ ರಾಹುಲ್​ ಮೋದಿ ಶ್ರದ್ಧಾ ಕಪೂರ್​​ ಅವರ ಭಾಯ್​ಫ್ರೆಂಡ್​ ಎಂಬ ಸುದ್ದಿ ಸಾಕಷ್ಟು ಚರ್ಚೆಯಲ್ಲಿತ್ತು. ಆದರೆ ಶ್ರದ್ಧಾ ಕಪೂರ್ ತನ್ನ ಸಂಬಂಧವನ್ನು ಬಹಿರಂಗವಾಗಿ ಇದುವರೆಗೂ ಎಲ್ಲಿಯೂ ಒಪ್ಪಿಕೊಂಡಿಲ್ಲ.

ಸದ್ಯ ಶ್ರದ್ಧಾ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ರಾಹುಲ್​ ಮೋದಿ ಅವರನ್ನು ಅನ್​ಫಾಲೋ ಮಾಡಿದ್ದರೆ. ಅಷ್ಟೇ ಅಲ್ಲ ರಾಹುಲ್ ಅವರ ಸಹೋದರಿ, ಅವರ ಪ್ರೊಡಕ್ಷನ್ ಹೌಸ್ ಮತ್ತು ಅವರ ನಾಯಿಯ ಖಾತೆಯನ್ನೂ ಅನ್ ಫಾಲೋ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ರಾಹುಲ್​ ಮೋದಿ ಜತೆಗಿನ ಶ್ರದ್ಧಾ ಕಪೂರ್​​ ಸಂಬಂಧ ಮುರಿದುಹೋಗಿದೆ, ಇದು ಆಕೆಯ ಮುಂದಿನ ಸಿನಿಮಾ ಸ್ತ್ರೀ-2 ರ ಪ್ರಚಾರದ ಗಿಮಿಕ್​ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ಈ ಬಗ್ಗೆ ರಾಹುಲ್​ ಮೋದಿ ಮತ್ತು ಶ್ರದ್ಧಾ ಕಪೂರ್​ ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ.

ಶ್ರದ್ಧಾ ಕಪೂರ್​ ಅಭಿನಯದ ಸ್ತ್ರೀ-2 ಸಿನಿಮಾ ಆಗಸ್ಟ್​​ 15ರಂದು ಬಿಡುಗಡೆಯಾಗಲಿದೆ. ಈ ಸೀಕ್ವೆಲ್​ನಲ್ಲಿ ರಾಜ್​ಕುಮಾರ್​​ ರಾವ್​​​, ಪಂಕಜ್​ ತಿವಾರಿ, ಅಭಿಷೇಕ್​ ಬ್ಯಾಜರ್ಜಿ ಸೇರಿ ಹಲವು ತಾರಗಣವಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net