ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದಿದ್ದೇಕೆ ಮನೋಜ್​​ ಬಾಜಪೇಯಿ

ಮುಂಬೈ: ಬಾಲಿವುಡ್​ನ ಬಹುಮುಖ ಪ್ರತಿಭೆ ಮತ್ತು ಹಿರಿಯ ನಟ ಮನೋಜ್ ಬಾಜಪೇಯಿ ಅವರು ನಟಿಸಿರುವ ಭಯ್ಯಾ ಜಿ ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಮನೋಜ್​​ ಬಾಜಪೇಯಿ ಅವರ 100ನೇ ಚಿತ್ರವಾಗಿದೆ. ಇದೇ ಸಂದರ್ಭದಲ್ಲಿ ಮನೋಜ್​ ಬಾಜಪೇಯಿ ಅವರು, ತಾವು ಸಿನಿಮಾರಂಗಕ್ಕೆ ಬಂದ ಸಮಯದಲ್ಲಿ ಅನೇಕ ಚಲನಚಿತ್ರ ನಿರ್ಮಾಪಕರು ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದರು. ಆದ ಕಾರಣ ಅವರೊಂದಿಗೆ ಕೆಲಸ ಮಾಡುವ ಆಸೆಯನ್ನ ಪೂರೈಸಲಾಗಲಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ: ಪೌರಾಣಿಕ ಕಥೆಗಳನ್ನು ಸಿನಿಮಾ ಮಾಡುವುದು ಅಪಾಯಕಾರಿ; ರಾಮ್​ಗೋಪಾಲ್​ ವರ್ಮಾ

ನನಗೆ ಗುಲ್ಜಾರ್ ಸಾಬ್ ಜತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ, ಗೋವಿಂದ್ ನಿಹಲಾನಿ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದೆ, ಆದರೆ ಅದೆಲ್ಲಾ ಸಾಧ್ಯವಾಗಲಿಲ್ಲ. ನನ್ನ ವೃತ್ತಿಜೀವನದಲ್ಲಿ ಜುಬೈದಾ ಚಿತ್ರದಲ್ಲಿ ಶ್ಯಾಮ್ ಬೆನಗಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು ಎಂದರು. ಬಳಿಕ ಅವರು, ಸಂಜಯ್ ಲೀಲಾ ಬನ್ಸಾಲಿ ಅವರ ಹೆಸರನ್ನು ತೆಗೆದುಕೊಂಡು ಅವರೊಂದಿಗೆ ಕೆಲಸ ಮಾಡುವ ಆಸೆಯಿದೆ ಎಂದು ಹೇಳಿದರು.

ಮನೋಜ್​​ ಬಾಜಪೇಯಿ ಅವರು ನಗುತ್ತಲೇ, ಸಂಜಯ್ ಲೀಲಾ ಬನ್ಸಾಲಿ ಅವರು ಮಾಡುವ ಬಹುತೇಕ ಚಿತ್ರಗಳಲ್ಲಿ ನನ್ನಂತಹ ನಟರ ಅಗತ್ಯವಿಲ್ಲ ಎಂದು ಹೇಳಿದರು. ಅವರು ನನ್ನಲ್ಲಿ ಏನು ಸುಂದರವಾಗಿ ಕಾಣುತ್ತಾರೆ? ಸಂಜಯ್‌ಗೆ ಸಿನಿಮಾದಲ್ಲಿ ಸುಂದರವಾಗಿ ತೋರಿಸಲು ಏನೂ ಇರುವುದಿಲ್ಲ ಎಂದು ಮನೋಜ್ ಹೇಳಿದರು. ಅಲ್ಲದೆ ಸಂಜಯ್​​ ವಿಭಿನ್ನ ರೀತಿಯ ಸಿನಿಮಾ ನಿರ್ಮಾಪಕ ಎಂದು ಹೊಗಳಿದರು.

ಸಂಜಯ್ ಲೀಲಾ ಬನ್ಸಾಲಿ ಅವರು ದೇವದಾಸ್ ಚಿತ್ರದಲ್ಲಿ ಚುನ್ನಿ ಲಾಲ್ ಪಾತ್ರವನ್ನು ತನಗೆ ನೀಡಿದ್ದರು ಎಂದು ಹಳೆಯ ಸಂದರ್ಶನವೊಂದರಲ್ಲಿ ಮನೋಜ್ ಬಾಜಪೇಯಿ ಹೇಳಿದ್ದರು. ಆದರೆ ಮನೋಜ್ ಬಾಜಪೇಯಿ ಆಫರ್​​​ ಅನ್ನು ರಸ್ಕರಿಸಿದ್ದಾಗಿ ತಿಳಿಸಿದರು. ಏಕೆಂದರೆ ಅವರು ‘ದೇವದಾಸ್’ ಪಾತ್ರದಲ್ಲಿ ನಟಿಸಲು ಇಚ್ಛಿಸಿದ್ದರಿಂದ ಚುನ್ನಿ ಲಾಲ್ ಪಾತ್ರ ಮಾಡಲು ನಿರಾಕರಿಸಿದ್ದಾಗಿ ಹೇಳಿದ್ದಾರೆ. ಆ ಚಿತ್ರ ಸೂಪರ್‌ಹಿಟ್ ಆಯಿತು, ಆದರೆ ಅದನ್ನು ಬಿಟ್ಟಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ರಂಗಭೂಮಿಯ ದಿನಗಳಿಂದಲೂ, ದಿಲೀಪ್ ಕುಮಾರ್ ಅವರ ಸಿನಿಮಾ ನೋಡಿದಾಗಿನಿಂದಲೂ ‘ದೇವದಾಸ್’ ಪಾತ್ರದಲ್ಲಿ ನಟಿಸಬೇಕೆಂಬ ಆಸೆ ಇತ್ತು ಎಂದಿದ್ದಾರೆ. (ಏಜೆನ್ಸೀಸ್​​)

ವಯನಾಡು ಭೂಕುಸಿತ ದುರಂತ; ಸಂತ್ರಸ್ತರ ಸಹಾಯಕ್ಕೆ 1 ಕೋಟಿ ರೂ. ನೀಡಿದ ಟಾಲಿವುಡ್​​ ‘ಮೆಗಾ’ಸ್ಟಾರ್ಸ್​​​

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…