ಪೌರಾಣಿಕ ಕಥೆಗಳನ್ನು ಸಿನಿಮಾ ಮಾಡುವುದು ಅಪಾಯಕಾರಿ; ರಾಮ್​ಗೋಪಾಲ್​ ವರ್ಮಾ

ಹೈದರಾಬಾದ್​​: ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪ್ರತಿಯೊಂದು ವಿಷಯದ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಾರೆ. ಇತ್ತೀಚೆಗೆ ಟ್ರೆಂಡ್​ ಆಗಿರುವ ಪೌರಾಣಿಕ ಕಥೆಗಳನ್ನು ಸಿನಿಮಾ ಮಾಡುವುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, ಪೌರಾಣಿಕ ಕಥೆಗಳ ಮೇಲೆ ಸಿನಿಮಾ ನಿರ್ಮಿಸುವುದು ತುಂಬಾ ಅಪಾಯಕಾರಿ ಎಂದಿದ್ದಾರೆ.

ಇದನ್ನು ಓದಿ: ನಾನು ಸೋಲನ್ನು ಒಪ್ಪಿಕೊಳ್ಳುತ್ತೇನೆ.. ಆದರೆ ಅಲ್ಲಿಗೆ ಎಲ್ಲ ಮುಗಿಯುವುದಿಲ್ಲ ಎಂದಿದ್ದೇಕೆ ಸ್ಯಾಮ್​​​

ಇತ್ತೀಚಿನ ಸಂದರ್ಶನವೊಂದರಲ್ಲಿ ರಾಮ್​ ಗೋಪಾಲ್​ ವರ್ಮಾ ಅವರನ್ನು ಪೌರಾಣಿಕ ಕಥೆಗಳ ಮೇಲೆ ಸಿನಿಮಾ ಮಾಡುವ ಬಗ್ಗೆ ಕೇಳಲಾಯಿತು. ರಣಬೀರ್​ ಕಪೂರ್​ ಅಭಿನಯದ ರಾಮಾಯಣ, ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರದ ಬಗ್ಗೆ ಪ್ರಸ್ತಾಪಿಸಿ, ಧಾರ್ಮಿಕ ಚಿತ್ರಗಳನ್ನು ಮಾಡುವಾಗ ಚಿತ್ರ ನಿರ್ಮಾಪಕರು ವಿವಾದವನ್ನು ತಪ್ಪಿಸುವ ಮಾರ್ಗವನ್ನೂ ಕಂಡುಕೊಳ್ಳಬೇಕು ಎಂದು ಹೇಳಿದರು.

ಪೌರಾಣಿಕ ಕಥೆಗಳನ್ನು ಸಿನಿಮಾ ಮಾಡುವುದು ಅಪಾಯಕಾರಿ; ರಾಮ್​ಗೋಪಾಲ್​ ವರ್ಮಾ

ದೇಶದಲ್ಲಿ ಪೌರಾಣಿಕ ಕಥೆಗಳನ್ನು ಸಿನಿಮಾ ಮಾಡುವುದು ತುಂಬಾ ಅಪಾಯಕಾರಿ ಏಕೆಂದರೆ ಅದು ಜನರನ್ನು ಕೆರಳಿಸಬಹುದು. ಈ ಹಿಂದೆ ಇಂತಹ ಚಿತ್ರಗಳನ್ನು ಮಾಡಿ ಯಶಸ್ವಿಯಾಗಿರಬಹುದು. ಆದರೆ ಈಗ ಯಾವುದೇ ವಿವಾದಗಳಿಲ್ಲದೆ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗುವ ಸಾಧ್ಯತೆಗಳು ತುಂಬಾ ಕಡಿಮೆ. ಅಪಾಯಕಾರಿ ಎಂದು ಹೇಳಲು ಎರಡು ಕಾರಣಗಳಿವೆ, ಇದು ಜನರಿಗೆ ತಿಳಿದಿರುವ ಕಥೆಗಳು, ನೀವು ಅವುಗಳನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತೀರಿ. ಇದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಎರಡನೆಯ ಕಾರಣ ನಮ್ಮ ದೇಶದಲ್ಲಿ ಜನರು ಶ್ರೀರಾಮನನ್ನು ಪೂಜಿಸುತ್ತಾರೆ ಎಂದರು.

ಬಾಬುಭಾಯಿ ಮಿಸ್ತ್ರಿ ಅವರ ‘ಸಂಪೂರ್ಣ ರಾಮಾಯಣ’ ಮತ್ತು ಎನ್‌ಟಿ ರಾಮರಾವ್ ಅವರ ಪೌರಾಣಿಕ ಸಿನಿಮಾಗಳ ಯಶಸ್ಸನ್ನು ಉಲ್ಲೇಖಿಸಿದ ಅವರು, ಹಿಂದಿನ ಕಾಲದಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. ಆ ಚಿತ್ರಗಳನ್ನು ಜನರು ಗೌರವಪೂರ್ವಕವಾಗಿ ಪರಿಗಣಿಸಿದರು. ಆದರೆ ಈಗೀನ ಕಾಲದ ಓಂ ರಾವುತ್ ಅವರ ಆದಿಪುರುಷ ಸಿನಿಮಾ ನೋಡಿದರೆ ಸೈಫ್ ಅಲಿಖಾನ್ ಲುಕ್, ಹನುಮಂತನ ಲುಕ್ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ ಎಂದು ಹೇಳಿದರು. ಆದರೂ ಪೌರಾಣಿಕ ಕಥೆಗಳ ಸಿನಿಮಾ ಮಾಡಲು ನಿರಂತರ ಪ್ರಯತ್ನ ನಡೆಸುತ್ತಿರುವ ನಿರ್ಮಾಪಕರಿಗೆ ಶುಭಹಾರೈಸುತ್ತೇನೆ ಎಂದರು.

ಪೌರಾಣಿಕ ಕಥೆಗಳ ಸಿನಿಮಾ ಮಾಡುವುದು ಯುವಕರಿಗೆ ಪುರಾಣಗಳ ಬಗ್ಗೆ ತಿಳಿಸುವುದು ನಿರ್ಮಾಪಕರ ಗುರಿ ಎಂದು ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿ ಅದೇ ಗುರಿಯಾಗಿದ್ದರೆ ರಾಮಾಯಣ ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳಬಾರದು. ಹೊಸ ಕಥೆ ಯಾಕೆ ಮಾಡಬಾರದು, ರಾಮಾಯಣ ಎಂಬ ಶೀರ್ಷಿಕೆ ಇಡಬಾರದು ಎಂಬುದು ನನ್ನ ಉದ್ದೇಶ. ಪ್ರಭಾಸ್​​ ಸಿನಿಮಾ ಅಂತ ಆದಿಪುರುಷ ನೋಡುವುದೆ ಬೇರೆ. ರಾಮಾಯಣದ ಕಥೆ ಎಂದು ಹೇಳಿದಾಗ ಜನರು ಅದನ್ನು ನೋಡುವ ದೃಷ್ಟಿಕೋನವೆ ಬೇರೆ. ‘ರಾಮಾಯಣ’ ಎಂಬ ಹೆಸರನ್ನು ಬ್ರ್ಯಾಂಡ್ ಮಾಡದೆ ಸಿನಿಮಾ ಮಾಡುವ ಮೂಲಕ ವಿವಾದಗಳಿಂದ ಪಾರಾಗಬಹುದು ಎಂದು ನಿರ್ಮಾಕರಿಗೆ ಸಲಹೆ ನೀಡಿದರು.

ಶಿವ ಸಿನಿಮಾದ ಮೂಲಕ ಚಲನಚಿತ್ರ ನಿರ್ದೇಶಕರಾಗಿ 1989ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ,1990 ರಲ್ಲಿ ಅದೇ ಚಿತ್ರವನ್ನು ‘ಶಿವಂ’ ಎಂದು ರಿಮೇಕ್​​ ಮಾಡಿದರು. ಬಾಲಿವುಡ್​​ನಲ್ಲಿ ಇದು ಅವರ ಚೊಚ್ಚಲ ಸಿನಿಮಾವಾಗಿದೆ. (ಏಜೆನ್ಸೀಸ್)

VIDEO| ಸದನದಲ್ಲಿನ ಪ್ರತಿಯೊಬ್ಬರ ನಗುವಿಗೆ ಕಾರಣವಾಯ್ತು ಜಯಾ ಬಚ್ಚನ್ ಪರಿಚಯಿಸಿಕೊಂಡ ರೀತಿ..

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…