ಮುಂಬೈ: ಸೌತ್ ಬ್ಯೂಟಿ ಸಮಂತಾ ರುತ್ ಪ್ರಭು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ವೈಯಕ್ತಿಕ ಜೀವನ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ನಟಿ ಸಮಂತಾ ತಮ್ಮ ಮುಂಬರುವ ಸರಣಿ ಸಿಟಾಡೆಲ್: ಹನಿ ಬನ್ನಿ ವಿಚಾರವಾಗಿ ಬಿಸಿಯಿದ್ದಾರೆ.
ಇದನ್ನು ಓದಿ: VIDEO| ಸದನದಲ್ಲಿನ ಪ್ರತಿಯೊಬ್ಬರ ನಗುವಿಗೆ ಕಾರಣವಾಯ್ತು ಜಯಾ ಬಚ್ಚನ್ ಪರಿಚಯಿಸಿಕೊಂಡ ರೀತಿ..
ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಸಮಂತಾ ಅವರನ್ನು, ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿನ ಏರಿಳಿತಗಳನ್ನು ಹೇಗೆ ಎದುರಿಸುತ್ತೀರಿ. ನೀವು ಯಾವುದೇ ವಿಚಾರವನ್ನು ಬಿಟ್ಟುಕೊಡುವುದಿಲ್ಲವೆ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸ್ಯಾಮ್, ನಾನು ಸೋಲನ್ನು ಒಪ್ಪಿಕೊಂಡು ಬಿಟ್ಟುಕೊಡುತ್ತೇನೆ. ಬಿಟ್ಟುಕೊಡುವುದಿಲ್ಲ ಎಂದು ಹೇಳಲಾರೆ, ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ನಾನು ಮತ್ತೆ ಹಿಂತಿರುಗುತ್ತೇನೆ ಎಂದು ಹೇಳಿದರು.
ಅಲ್ಲದೆ ನಾನು ಈ ವಿಷಯವನ್ನು ನನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಬೇಕಿತ್ತು. ಅದೇನೆಂದರೆ ನಾನು ಗೌರವಿಸುವ ವ್ಯಕ್ತಿಯಿಂದ ಕೆಲವು ಅದ್ಭುತವಾದ ಮಾತುಗಳನ್ನು ಕೇಳಿದ್ದೇನೆ. ನಿಮಗೆ ತೊಂದರೆಯಾಗುವುದರಲ್ಲಿ ನಿಮ್ಮ ಭವಿಷ್ಯವನ್ನು ಕಂಡುಕೊಳ್ಳುತ್ತೀರಿ ಎಂದು ಅವರು ಹೇಳಿದರು. ಯಾವುದೇ ಸಮಸ್ಯೆ ಎದುರಾದರೂ ನಮಗೆ ಮುಂದಿನ ದಾರಿ ತಿಳಿಯುತ್ತದೆ ಎಂದು ತಿಳಿಸಿದರು.
ಬಾಲಿವುಡ್ ನಟ ವರುಣ್ ಧವನ್ ಜತೆ ಸಮಂತಾ ರುತ್ ಪ್ರಭು ಸ್ಕ್ರೀನ್ ಶೇರ್ ಮಾಡಿರುವ ಸಿಟಾಡೆಲ್: ಹನಿ ಬನ್ನಿ ನವೆಂಬರ್ 7ರಂದು ಒಟಿಟಿಗೆ ಪದಾರ್ಪಣೆ ಮಾಡಲಿದೆ. ಸ್ವತಃ ವರುಣ್ ಧವನ್ ಮತ್ತು ಸಮಂತಾ ವಿಶೇಷ ಕಾರ್ಯಕ್ರಮದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)
ಪಾಸ್ತಾಗೆ ಕರಿಬೇವಿನ ಒಗ್ಗರಣೆ ಹಾಕಿದಂತಿದೆ; ರಾಹುಲ್ಗಾಂಧಿ ವಿರುದ್ಧ ಬಿಜೆಪಿ ಸಂಸದೆ ವಿವಾದಾತ್ಮಕ ಹೇಳಿಕೆ