ಮುಂಬೈ: ಲೋಕಸಭೆಯಲ್ಲಿ ರಾಹುಲ್ಗಾಂಧಿ ಅವರು ಜಾತಿಯ ವಿಚಾರವಾಗಿ ಉಂಟಾದ ಗದ್ದಲದ ನಡುವೆ ಇದೀಗ ನಟಿ, ಮಂಡಿ ಸಂಸದೆ ಕಂಗನಾ ರಣಾವತ್ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: ರಾಮನ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ: ವಿವಾದ ಹುಟ್ಟುಹಾಕಿದ ಡಿಎಂಕೆ ಸಚಿವನ ಹೇಳಿಕೆ
ಕೇಂದ್ರ ಬಜೆಟ್ ಅಧಿವೇಶನದಲ್ಲಿ ಭಾರತೀಯ ಜನತಾ ಪಕ್ಷದ ಸಂಸದ ಅನುರಾಗ್ ಠಾಕೂರ್ ಅವರು ಜಾತಿ ಗೊತ್ತಿಲ್ಲದವರು ಜಾತಿಗಣತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು. ಬಳಿಕ ಅವರು, ಜಾತಿ ಗೊತ್ತಿಲ್ಲದವರು ಜಾತಿಗಣತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದೆ. ನಾನು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಆದರೆ ರಾಹುಲ್ ಗಾಂಧಿ ಅವರು ಅನುರಾಗ್ ಠಾಕೂರ್ ನನ್ನನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದರು.
ಈಗ ಮಂಡಿ ಸಂಸದೆ ಕಂಗನಾ ರಣಾವತ್ ರಾಹುಲ್ಗಾಂಧಿ ಅವರ ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ ಜಾತಿ ಬಗ್ಗೆ ಹೇಳಿರುವ ರಾಹುಲ್ ಅವರ ಹಳೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. “ಅಪ್ನಿ ಜಾತ್ ಕಾ ಕುಚ್ ಅತಾ ಪತಾ ನಹೀ, ಮೇ ಮುಸ್ಲಿಂ, ಡ್ಯಾಡ್ ಪಾರ್ಸಿ, ಮಮ್ಮಿ ಕ್ರಿಶ್ಚಿಯನ್ ಔರ್ ಖುದ್ ಐಸಾ ಲಗ್ತಾ ಹೈ ಜೈಸೆ ಪಾಸ್ತಾ ಕೋ ಕಡಿ ಪತ್ತೆ ಕಾ ತಡಕಾ ಲಗಾಕರ್ ಕಿಚಡಿ ಬನಾನೇ ಕಿ ಕೊಶಿಶ್ ಕಿ ಹೋ, ಔರ್ ಇನ್ ಕೋ ಸಬ್ಕಿ ಜಾತ್ ಪತಾ ಕರ್ನೀ ಹೈ. (ನಿಮಗೆ ನಿಮ್ಮ ಜಾತಿಯ ಬಗ್ಗೆ ಏನೂ ತಿಳಿದಿಲ್ಲ, ನಿಮ್ಮ ತಾತ ಮುಸ್ಲಿಂ, ತಂದೆ ಪಾರ್ಸಿ, ಮಮ್ಮಿ ಕ್ರಿಶ್ಚಿಯನ್, ಯಾರೋ ಪಾಸ್ತಾಗೆ ಕರಿಬೇವಿನ ಒಗ್ಗರಣೆ ಕೊಟ್ಟು ಖಿಚಡಿ ಮಾಡಲು ಪ್ರಯತ್ನಿಸಿದಂತೆ ಕಾಣುತ್ತದೆ. ಆದರೆ ಅವರು ಪ್ರತಿಯೊಬ್ಬರ ಜಾತಿಯನ್ನು ತಿಳಿದುಕೊಳ್ಳಲು ಬಯಸುತ್ತಾರೆ.) ಎಂದು ಬರೆದಿದ್ದಾರೆ.
ರಾಹುಲ್ ಗಾಂಧಿಯವರು ಹೇಗೆ ಸಾರ್ವಜನಿಕವಾಗಿ ಜನರ ಜಾತಿಯನ್ನು ಕೇಳುತ್ತಾರೆ, ನಾಚಿಕೆಯಾಗಬೇಕು ಎಂದು ಕಂಗನಾ ರಣಾವತ್ ಟೀಕಿಸಿದ್ದಾರೆ. ಲೋಕಸಭಾ ಚುನಾವಣೆ 2024ರಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಕಂಗನಾ ರಣಾವತ್ ಸಂಸದರಾಗಿ ಆಯ್ಕೆಯಾಗಿದ್ದಾರೆ.(ಏಜೆನ್ಸೀಸ್)
ಕೇಂದ್ರ ಗೃಹಸಚಿವರು ಅಹ್ಮದ್ ಷಾ ಅಬ್ದಾಲಿಯ ವಂಶಸ್ಥರು: ಉದ್ಧವ್ ಠಾಕ್ರೆ