‘ದೇವರ’ ಮತ್ತೊಂದು ಸಾಂಗ್​ ರಿಲೀಸ್​​​; ಜೂ.ಎನ್​ಟಿಆರ್​​, ಜಾನ್ವಿ ರೊಮ್ಯಾನ್ಸ್​​ಗೆ ಫ್ಯಾನ್ಸ್​ ಹೇಳಿದ್ದು ಹೀಗೆ

Untitled-design-30
Published on

ಹೈದರಾಬಾದ್​​: ಮಾಸ್‌ ಮ್ಯಾನ್‌ ಎನ್‌ಟಿಆರ್‌ ಮತ್ತು ಜಾನ್ವಿ ಕಪೂರ್​​​​ ಅಭಿನಯದ ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾ ಈಗಾಗಲೇ ಸಾಕಷ್ಟು ಹೈಪ್​​ ಕ್ರಿಯೆಟ್​ ಮಾಡಿದೆ. ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರದ ಹಾಡುಗಳು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಇದೀಗ ಸಿನಿಮಾ ಎರಡನೇ ಹಾಡು ಐದು ಭಾಷೆಗಳಲ್ಲಿ ರಿಲೀಸ್​ ಆಗಿದೆ.

ತೆಲುಗಿನಲ್ಲಿ ಚುಟ್ಟಮಲ್ಲೆ, ಹಿಂದಿಯಲ್ಲಿ ಧೀರೆ ಧೀರೆ, ತಮಿಳಿನಲ್ಲಿ ಪತ್ತವೈಕ್ಕುಂ, ಕನ್ನಡದಲ್ಲಿ ಸ್ವಾತಿಮುತ್ತೆ ಸಿಕ್ಕಂಗೈತೆ ಮತ್ತು ಮಲಯಾಳಂನಲ್ಲಿ ಕನ್ನಿನಾಥನ್ ಕಾಮನೋತ್ತಂ ಎಂಬ ಸಾಹಿತ್ಯದೊಂದಿಗೆ ಆರಂಭವಾಗುವ ಈ ರೊಮ್ಯಾಂಟಿಕ್​​ ಹಾಡಿಗೆ ಅನಿರುದ್ಧ್ ರವಿಚಂದರ್ ಧ್ವನಿ ನೀಡಿದ್ದಾರೆ. ಶಿಲ್ಪಾ ರಾವ್​​​​ ಅವರ ಗಾಯನದೊಂದಿಗೆ ಬಾಸ್ಕೊ ಮಾರ್ಟಿಸ್ ನೃತ್ಯ ಸಂಯೋಜನೆ ಇದೆ.

3 ನಿಮಿಷ 44 ಸೆಕೆಂಡ್‌ಗಳ ಈ ಹಾಡಿಗೆ ಫ್ಯಾನ್ಸ್​​ ಫಿದಾ ಆಗಿದ್ದು, ಎಲ್ಲರೂ ಈ ಹಾಡು ಡ್ಯುಯೆಟ್ ಆಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನನಗೆ ಎನ್​ಟಿಆರ್​ ಹಾಗೂ ಶ್ರೀದೇವಿ ಅವರ ನೆನಪು ಬರುತ್ತಿದೆ, ಜಾನ್ವಿ ಜೂನಿಯರ್​ ಶ್ರೀದೇವಿ, ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. ದೇವರ ಬಿಗ್​ ಬಜೆಟ್​ ಪ್ಯಾನ್​ ಇಂಡಿಯಾ ಸಿನಿಮಾವಾಗಿದೆ. ಇದು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ದೇವರ-1 ಸೆಪ್ಟೆಂಬರ್​ನಲ್ಲಿ ತೆರೆಕಾಣಲಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net