More

    ದಿನಕ್ಕೆ 11 ನಿಮಿಷ ವಾಕ್​ ಮಾಡಿ… ಆರೋಗ್ಯವಾಗಿ ಬಾಳಿ!

    ಬೆಂಗಳೂರು: ಪ್ರತಿದಿನ ಕೆಲ ಕಾಲ ವಾಕಿಂಗ್​ ಮಾಡುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು. ನಿಯಮಿತ ವ್ಯಾಯಾಮದ ಪ್ರಾಮುಖ್ಯತೆಯನ್ನು ಯಾರೂ ಒತ್ತಿಹೇಳಲು ಸಾಧ್ಯವಿಲ್ಲ. ಜನರಲ್ಲಿ ದೀರ್ಘಕಾಲದ ಕಾಯಿಲೆಗಳ ಹೆಚ್ಚುತ್ತಿದೆ. ನಡಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಊಟ ಮಾಡಿದ ತಕ್ಷಣ ಮಲಗಬಾರದು. ಅದರಿಂದ ಸೋಮಾರಿ ತನ ಉಂಟಾಗುತ್ತದೆ. ಅದರೆ ಕೆಲವರಿಗೆ ಊಟ ಮಾಡಿದ ತಕ್ಷಣ ನಿದ್ದೆ ಬರುತ್ತದೆ. ಅದನ್ನು ಹಿಮ್ಮೆಟ್ಟಲು ವಾಕಿಂಗ್​ ಪ್ರಯೋಜನಕಾರಿ.

    ಕೆಲವು ನಿಮಿಷಗಳ ನಡಿಗೆಯು ಹಲವಾರು ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಊಟದ ನಂತರ ಎರಡು ನಿಮಿಷಗಳ ಕಾಲ ನಡೆಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಟೈಪ್ 2 ಮಧುಮೇಹವನ್ನು ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ತಜ್ಷರ ಪ್ರಕಾರ ಊಟದ ನಂತರ ಗ್ಲೂಕೋಸ್ ರಕ್ತಕ್ಕೆ ಸೇರಿಕೊಳ್ಳುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಕೆಗೆ ಕಾರಣವಾಗುತ್ತದೆ.

    ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ 6 ಹಂತದ ಬೆಳಗಿನ ದಿನಚರಿ

    ವಾಕಿಂಗ್​ ಮಾಡುವುದರಿಂದ ಸಕ್ಕರೆಯ ಮಟ್ಟವನ್ನು ಕೆಳಗಿಳಿಸಬಹುದು. ಹಾಗಾಗಿ ಊಟದ ನಂತರ ಕೆಲ ಕಾಲ ನಡೆಯುವುದು ಬಹಳ ಪ್ರಯೋಜನಕಾರಿ. ದಿನಕ್ಕೆ 11 ನಿಮಿಷಗಳ ಬಿರುಸು ನಡಿಗೆ ಮಧ್ಯಮ ತೀವ್ರತೆಯ ದೈಹಿಕ ವ್ಯಾಯಾಮಕ್ಕೆ ಸಮಾನ ಎಂದು ಅಧ್ಯಯನಗಳು ತಿಳಿಸುತ್ತವೆ. ಇದರಿಂದ ಹರದ್ರೋಗದ ಸ್ಟ್ರೋಕ್​​ ಮತ್ತು ಕ್ಯಾನ್ಸರ್​ನಂತ ​ಸಮಸ್ಯೆಗಳನ್ನು ತಡೆಯುತ್ತದೆ.

    ಊಟದ ನಂತರ ನಡೆಯುವುದರ ಪ್ರಯೋಜನಗಳು

    1) ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ
    2) ಹೃದಯರಕ್ತನಾಳದ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ
    3) ಕೀಲುಗಳ ಬಲವನ್ನು ಹೆಚ್ಚಿಸುತ್ತದೆ
    4) ಮನಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಯೋಜನಕಾರಿ
    5) ಮೂಳೆ, ಮಾಂಸಗಳ ಬಲವನ್ನು ವೃದ್ಧಿಸುತ್ತದೆ
    6) ರಕ್ತ ಚಲನವನ್ನು ಹೆಚ್ಚಿಸುತ್ತದೆ
    7) ಸಂತೋಷಕ್ಕೆ ಕಾರಣವಾಗುವ ಹಾರ್ಮೋನಗಳ ವೃದ್ಧಿಗೆ ಸಹಾಯಕಾರಿ
    8) ಕರುಳಿನ ಆರೋಗ್ಯಕ್ಕೆ ಕೂಡ ಒಳ್ಳೆಯದು (ಏಜೆನ್ಸೀಸ್​)

    VIDEO VIRAL | ಜಾಗದ ಜಗಳಕ್ಕೆ ಹಾಡಹಗಲೇ 6 ಜನರನ್ನು ಗುಂಡಿಟ್ಟು ಕೊಂದ ಕಿರಾತಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts