More

    ಉತ್ತಮ ಆರೋಗ್ಯಕ್ಕಾಗಿ 6 ಹಂತದ ಬೆಳಗಿನ ದಿನಚರಿ

    ಬೆಂಗಳೂರು: “ಕರುಳಿನ ಆರೋಗ್ಯ ಮುಖ್ಯ,” ಎಂಬ ಮಾತನ್ನು ಇದನ್ನು ಕೇಳಿರುತ್ತೀವಿ. ‘ಕರುಳಿನ ಆರೋಗ್ಯ’ ಎಂಬುದು ಅತ್ಯಾಧುನಿಕವಾಗಿದೆ. ಆದರೆ ಎಷ್ಟು ಮಂದಿಗೆ ಇದರ ನಿಜವಾದ ಅರ್ಥವನ್ನು ತಿಳಿದಿದೆಯೋ ಗೊತ್ತಿಲ್ಲ. ಉತ್ತಮ ಕರುಳಿನ ಆರೋಗ್ಯ ಎಂದರೆ ಜೀರ್ಣಾಂಗದಲ್ಲಿ ಸರಿಯಾದ ಪ್ರಮಾಣದ ಉತ್ತಮ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಗಳನ್ನು ಹೊಂದಿರುವುದು. ಇದು ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಮತ್ತಷ್ಟು ಸಹಾಯ ಮಾಡುತ್ತದೆ. ಈ ಸೂಕ್ಷ್ಮಜೀವಿಗಳು ಬಹಳ ಸೂಕ್ಷ್ಮ ಆದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

    ಜೀರ್ಣಕ್ರಿಯೆ, ಇಮ್ಯೂನಿಟಿ, ಮನಸ್ಥಿತಿ, ಕರುಳಿನ ಆರೋಗ್ಯ ಸೇರಿದಂತೆ ಒಟ್ಟಾರೆ ದೇಹದ ಮೇಲೆ ಆರೋಗ್ಯದ ಮೇಲೆ ಇದರ ಪ್ರಭಾವ ಹೆಚ್ಚಿದೆ. ಇದರೊಂದಿಗೆ ನಾವು ಬದುಕಲು ಕೂಡ ಇದರ ಅಸ್ತಿತ್ವ ಅತ್ಯಗತ್ಯ. ಉತ್ತಮ ಜೀರ್ಣಕ್ರಿಯೆಗಾಗಿ ಹಲವಾರು ಮಾರ್ಗಗಳಿವೆ. ದಿನಚರಿಯು ಶಿಸ್ತು ಕುಡ ಒಂದು. ಬೆಳ್ಳಿಗೆ ಎದ್ದ ಕೂಡಲೆ ಏನು ಮಾಡುತ್ತೀವಿ ಎಂಬುದು ಬಹಳ ಮುಖ್ಯ. ಏಕೆಂದರೆ ಎದ್ದ ತಕ್ಷಣ ಮಾಡುವ ಕೆಲಸ, ಮನಸ್ಥಿತಿ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಲು ಬೆಳಗಿನ ದಿನಚರಿ ಹೆಚ್ಚು ಪರಿಣಾಮ ಬೀರುತ್ತಿದೆ. ಉತ್ತಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲೂ ಕೂಡ ಬೆಳಗಿನ ದಿನಚರಿ ಮುಖ್ಯ. ಅದಕ್ಕಾಗಿ ಬೆಳಗಿನ ದಿನಚರಿಯನ್ನು ಸರಿಯಾಗಿ ಪಾಲಿಸಬೇಕು. ಮಾದರಿ ಬೆಳಗಿನ ದಿನಚರಿಯನ್ನು ಕೆಳಗೆ ತಿಳಿಸಿದೆ.

    ಇದನ್ನೂ ಓದಿ: HEALTH TIPS | ಇಲ್ಲಿವೆ ಕಿವಿ ಹಣ್ಣಿನ 5 ಪ್ರಯೋಜನಗಳು…!

    ಕರುಳಿನ ಆರೋಗ್ಯಕ್ಕಾಗಿ 5-ಹಂತದ ಬೆಳಗಿನ ದಿನಚರಿ

    1) ಒಂದು ಲೋಟ ನೀರಿನಿಂದ ದಿನವನ್ನು ಪ್ರಾರಂಭಿಸಬೇಕು: ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ನಿರ್ಜಲೀಕರಣದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

    2) ಪೂರಕವನ್ನು ಪರಿಗಣಿಸಿ: ಪ್ರಿಬಯಾಟಿಕ್‌ಗಳು ಕರುಳಿನಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವ ಆಹಾರಗಳು. ಸೇಬುಗಳು, ಪಲ್ಲೆಹೂವುಗಳು, ಬಾಳೆಹಣ್ಣು, ಬಾರ್ಲಿ, ಓಟ್ಸ್, ಚಿಯಾ ಮತ್ತು ಅಗಸೆ ಬೀಜ, ಬೆಳ್ಳುಳ್ಳಿ ಮತ್ತು ಈರುಳ್ಳಿ, ಬೀನ್ಸ್ ಮತ್ತು ದ್ವಿದಳ ಧಾನ್ಯಗಳಂತಹ ಆಹಾರಗಳಲ್ಲಿ ಪ್ರಿಬಯಾಟಿಕ್‌ಗಳು ಹೆಚ್ಚಾಗಿ ಕಂಡುಬರುತ್ತವೆ. ಆದ್ದರಿಂದ ಅವುಗಳನ್ನು ಬೆಳಗಿನ ಸಮಯದಲ್ಲಿ ಸೇವಿಸಬೇಕು.

    3) ಪ್ರೋ ಗಟ್ ಆರೋಗ್ಯ ಆಹಾರ ಪದಾರ್ಥಗಳು: ಜೀರ್ಣಕ್ರಿಯೆಗೆ ಹೆಚ್ಚಿನ ಫೈಬರ್ ಆಹಾರಗಳು ಅತ್ಯಗತ್ಯ. ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಆಹಾರದಲ್ಲಿ ಹೆಚ್ಚಿನ ತರಕಾರಿ, ಹಣ್ಣು ಮತ್ತು ಬೀಜಗಳನ್ನು ಸೇರಿಸಬೇಕು.

    4) ವ್ಯಾಯಾಮ: ವ್ಯಾಯಾಮವು ಅತ್ಯಂತ ಮುಖ್ಯ. ಏಕೆಂದರೆ ಇದು ಚಯಾಪಚಯ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಉತ್ತಮ ಚಯಾಪಚಯ ಎಂದರೆ ಉತ್ತಮ ಜೀರ್ಣಕ್ರಿಯೆ ಕೂಡ. ವ್ಯಾಯಾಮ ಮನಸ್ಸಿನ ಮೇಲೆ ಕೂಡ ಪರಿಣಾಮ ಬೀರುತ್ತದೆ.

    5) ಧ್ಯಾನ: ಮೈಂಡ್​​ಫುಲ್​​ನೆಸ್​​ ಅಭ್ಯಾಸ ಮಾಡಲು ಧ್ಯಾನ ಉತ್ತಮ ಮಾರ್ಗವಾಗಿದೆ. ಇದು ಕರುಳಿಗೆ ಒತ್ತಡವಾಗದಿರಲು ಸಹಾಯ ಮಾಡುತ್ತದೆ. ಅದರೊಂದಿಗೆ ಇದನ್ನು ಪ್ರತಿದಿನ ಮಾಡುವುದರಿಂದ ಮಾನಸಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ.

    6) ಮಿತವಾದ ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರ ಸೇವನೆ: ಸಂಸ್ಕರಿಸಿದ ಸಕ್ಕರೆ ಕರುಳಿನ ಸೂಕ್ಷ್ಮಾಣುಜೀವಿಗಳನ್ನು ಕೆಣಕುತ್ತದೆ. ಸಂಸ್ಕರಿತ ಆಹಾರಗಳು ಮತ್ತು ಸಕ್ಕರೆಗಳಲ್ಲಿ ಹೆಚ್ಚಿನ ಆಹಾರ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳಿಗೆ ಆಹಾರವನ್ನು ನೀಡುತ್ತದೆ.

    ಇದು ಒಂದು ಮಾದರಿ ಬೆಳಗಿನ ದಿನಚರಿಯಾಗಿದೆ. ಇದನ್ನು ನಿಮ್ಮ ಜೀವನ ಶೈಲಿಗೆ ತಕ್ಕ ಹಾಗೆ ಬದಲಾಯಿಸಿಕೊಂಡು ಆರೋಗ್ಯ ಜೀವನವನ್ನು ನಡೆಸಬಹುದು. (ಏಜೆನ್ಸೀಸ್​​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts