

ಬೆಂಗಳೂರು: ದೇಹವು ಆರೋಗ್ಯವಾಗಿರಲು ಅನೇಕ ಪೋಷಕಾಂಶಗಳು ಮತ್ತು ವಿಟಮಿನ್‌ಗಳು ಅಗತ್ಯ. ಅದರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳು ಮತ್ತು ತರಕಾರಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕಿವಿ ಹಣ್ಣು ಕೂಡ ಅಂತಹ ಹಣ್ಣುಗಳಲ್ಲಿ ಒಂದಾಗಿದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೇಹವನ್ನು ಒಳಗಿನಿಂದ ಉತ್ತೇಜಿಸುತ್ತದೆ. ಸ್ವಲ್ಪ ಹುಳಿ ಮತ್ತು ಸಿಹಿಯಾಗಿರುವ ಕಿವಿ ರಸವನ್ನು ಕುಡಿಯುವುದರಿಂದ ಹಲವಾರು ಗಂಭೀರ ಕಾಯಿಲೆಗಳಿಂದ ದೇಹವನ್ನು ರಕ್ಷಿಸಬಹುದು. ಬೇಸಿಗೆ ಕಾಲದಲ್ಲಿ ಕಿವಿ ರಸ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ. ವಿಟಮಿನ್ ಸಿ, ವಿಟಮಿನ್ ಕೆ, ವಿಟಮಿನ್ ಇ, ಫೋಲೇಟ್, ಪೊಟ್ಯಾಸಿಯಮ್ ಇದರಲ್ಲಿ ಸಾಕಷ್ಟು ಕಂಡುಬರುತ್ತವೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದೆಲ್ಲದರೊಂದಿಗೆ ಇನ್ನು ಅನೇಕ ಪ್ರಯೋಜನಗಳಿವೆ, ಅದನ್ನು ಕೆಳಗೆ ಪಟ್ಟಿ ಮಾಡಲಾಗಿದೆ.