ಅಗಸ್ಟಾವೆಸ್ಟ್​ಲ್ಯಾಂಡ್ ಕೇಸ್ - ಮಾಜಿ ರಕ್ಷಣಾ ಕಾರ್ಯದರ್ಶಿ ವಿಚಾರಣೆಗೆ ಅನುಮತಿ ಕೋರಿದ ಸಿಬಿಐ

Agustawestland case cbi shashikant
Published on

ನವದೆಹಲಿ: ಅಗಸ್ಟಾವೆಸ್ಟ್​ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಡೀಲ್​ನ 3,600 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿಕಾಂತ ಶರ್ಮಾ ಅವರನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಸಿಬಿಐ ಅನುಮತಿ ಕೋರಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸಿಬಿಐ ಶೀಘ್ರವೇ ಪೂರಕ ಚಾರ್ಜ್​ ಶೀಟ್ ಸಲ್ಲಿಸುವುದಕ್ಕೆ ಸಿದ್ಧತೆಮಾಡಿಕೊಂಡಿದೆ. ಅದರಲ್ಲಿ ಕ್ರಿಶ್ಚಿಯನ್ ಮೈಕೆಲ್​ ಪಾತ್ರದ ವಿವರಣೆ ಇರಲಿದೆ. ಆತನನ್ನು ಯುಎಇನಿಂದ ಗಡಿಪಾರು ಮಾಡಿಸಿಕೊಂಡು ಭಾರತಕ್ಕೆ ಕರೆತರಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಈ ಸಂಬಂಧ ಸುದ್ದಿಸಂಸ್ಥೆಗೆ ಪತ್ರಿಕ್ರಿಯೆ ನೀಡಿರುವ ಶರ್ಮಾ, ತಾನು ಇತ್ತೀಚೆಗಷ್ಟೇ ಹೃದಯದ ಸರ್ಜರಿಗೆ ಒಳಗಾಗಿದ್ದು, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದೇನೆ. ತನ್ನ 4 ದಶಕಗಳ ಸೇವಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಈಗಲೂ ತನ್ನ ಎಲ್ಲ ಕೆಲಸಗಳ ಹೊಣೆಗಾರಿಕೆ ತನ್ನದೇ ಆಗಿದ್ದು, ತಪ್ಪುಗಳಾಗಿಲ್ಲ. ಆರೋಪಗಳೆಲ್ಲವೂ ನಿರಾಧಾರ ಎಂದಿದ್ದಾರೆ.

ಶಶಿಕಾಂತ ಶರ್ಮಾ 2011ರಿಂದ 2013ರ ನಡುವೆ ರಕ್ಷಣಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ತರುವಾಯ ಸಿಎಜಿ ಆಗಿ ನೇಮಕಗೊಂಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net