ಗಾಂಜಾ ವ್ಯಸನಿಗಳ ಚಳಿ ಬಿಡಿಸಿದ ಪೊಲೀಸರು, ಉಡುಪಿಯಲ್ಲಿ 10 ಮಂದಿ ವಶಕ್ಕೆ

ganja
Published on

ಉಡುಪಿ: ಗಾಂಜಾ ಸೇವನೆಗೆ ಸಂಬಂಧಿಸಿ ಕಳೆದ ಎರಡು ದಿನಗಳಲ್ಲಿ ಪೊಲೀಸರು ಜಿಲ್ಲಾದ್ಯಂತ 10 ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಮ್ಮಾಡಿ ಸಂತೋಷ ನಗರದ ನಾಗರಾಜ(23), ಕುಂಭಾಶಿ ಗ್ರಾಮದ ವಿನಾಯಕ ನಗರ ನಿವಾಸಿ ಆಕಾಶ್(20), ಮೂಡುಗೋಪಾಡಿ ನಿವಾಸಿ ಮುಶ್ರೀಫ್ ಅಹಮ್ಮದ್(24),ಕಾರ್ಕಳ ಪತ್ತೊಂಜಿಕಟ್ಟೆ ಮೈದಾನದ ಬಳಿ ಕಜೆ ರಸ್ತೆಯ ಮಹಮ್ಮದ್ ಅಜರ್(24),

ನಾವುಂದ ಎಂಜಿ ರಸ್ತೆಯ ಮಿಸ್ಬಾ(22), ಇಜಾಜ್ ಅಹಮ್ಮದ್(19) ಮತ್ತು ಬಡಾಕೆರೆಯ ಮಹಮ್ಮದ್ ಆಸಿಫ್(30), ಕುಂದಾಪುರ ಠಾಣಾ ವ್ಯಾಪ್ತಿಯ ತಲ್ಲೂರು ಜಂಕ್ಷನ್ ಬಳಿ ಕೋಟೆಬಾಗಿಲು ನಿವಾಸಿ ಗುರುರಾಜ್ ಖಾರ್ವಿ(22),

ಹೆಮ್ಮಾಡಿ ಜಂಕ್ಷನ್ ಬಳಿ ಪ್ರಸನ್ನ(23), ಬಂಗ್ಲೆಗುಡ್ಡೆ ಬಳಿ ಸದ್ಬಾವನ ನಗರದ ಪ್ರಜ್ವಲ್(25) ಎಂಬವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net