More

    14 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ ಬಿಡುಗಡೆ ಮಾಡಿದ ಕೇಂದ್ರ: ಕರ್ನಾಟಕ ಪಟ್ಟಿಯಲ್ಲಿದೆಯೇ?

    ನವದೆಹಲಿ: ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ 14 ರಾಜ್ಯಗಳಿಗೆ ಒಟ್ಟು 6,195 ಕೋಟಿ ರೂಪಾಯಿ ಆದಾಯ ಕೊರತೆ ಅನುದಾನವನ್ನು ಬಿಡುಗಡೆ ಮಾಡಿದೆ. ಕರೊನಾ ಸಂಕಷ್ಟ ಕಾಲದಲ್ಲಿ ಇದು ಫಲಾನುಭವಿ ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲವಾಗಿ ಲಭ್ಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವರ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.

    ಇದು ಆದಾಯ ಕೊರತೆ ಅನುದಾನವನ್ನು ಸಮಾನ ಮಾಸಿಕ ಕಂತಾಗಿ ಪಾವತಿಸಲಾಗುತ್ತಿದೆ. ಹದಿನಾಲ್ಕು ರಾಜ್ಯಗಳಿಗೆ ಇದು ಆರನೆ ಸಮಾನ ಮಾಸಿಕ ಕಂತಿನ ಅನುದಾನವಾಗಿದೆ. ಇದೇ ರೀತಿಯ ಅನುದಾನವನ್ನು ಏಪ್ರಿಲ್​ನಿಂದ ಆಗಸ್ಟ್​ ತನಕ ಪಾವತಿಸಲಾಗಿದೆ. ರಾಜ್ಯಗಳು ಆದಾಯ ನಷ್ಟ ಅನುಭವಿಸಿದಾಗ ಅದನ್ನು ಭರ್ತಿ ಮಾಡುವುದಕ್ಕೆ ಹಣಕಾಸು ಆಯೋಗ ಈ ರೀತಿಯಾಗಿ ಕೇಂದ್ರ ಸರ್ಕಾರಕ್ಕೆ ಅನುಕೂಲ ಮಾಡಿಕೊಡುತ್ತದೆ. ಇದನ್ನು ಪೋಸ್ಟ್​ ಡೆವೊಲೂಷನ್ ರೆವೆನ್ಯೂ ಡೆಫಿಸಿಟ್ ಗ್ರಾಂಟ್ ಎಂದು ಹೇಳುತ್ತಾರೆ.

    ಇದನ್ನೂ ಓದಿ: ‘ದಾವೂದ್​ ಮನೆಯನ್ನು ಧ್ವಂಸ ಮಾಡುವ ತಾಕತ್ತಿಲ್ಲದವರು ಕಂಗನಾ ಕಚೇರಿ ಕೆಡವಿದ್ದಾರೆ…’

    ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್​, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳಗಳೇ ಈ ಅನುದಾನ ಪಡೆದ ಹದಿನಾಲ್ಕು ರಾಜ್ಯಗಳು. (ಏಜೆನ್ಸೀಸ್)

    50,000 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಸರ್ಕಾರದ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts