More

  ಸಮಾಜದ ಕೆಳ ಸ್ತರದ ಜನರನ್ನು ಮೇಲೆತ್ತುವ ಪ್ರಯತ್ನ : ಅಜಿತ್ ಕುಮಾರ್ ರೈ ಮಾಲಾಡಿ ಕರೆ

  ಮಧೂರು: ಸಮಾಜದ ಕೆಳ ಸ್ತರದ ಜನರನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನವನ್ನು ಬಂಟರ ಸಂಘಗಳು ಮಾಡಬೇಕಾಗಿದೆ ಎಂದು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಭಿಪ್ರಾಯಪಟ್ಟರು.

  ಮಧೂರು ಬಂಟರ ಸಮಿತಿ ವತಿಯಿಂದ ಮಧೂರಿನ ಪರಕ್ಕಿಲದಲ್ಲಿ ಸಂಘದ ನೂತನ ಕಾರ್ಯಾಲಯ ಉದ್ಘಾಟನೆ ಹಾಗೂ ಬಯಲು ರಂಗ ಮಂದಿರದ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

  ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರುಗುತ್ತು ಅಧ್ಯಕ್ಷತೆ ವಹಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಯಮುನಾ ಎಸ್.ಶೆಟ್ಟಿ ಕುದ್ರೆಪ್ಪಾಡಿಗುತ್ತು, ಕುದ್ರೆಪ್ಪಾಡಿಗುತ್ತು ಮಹಾಬಲ ಶೆಟ್ಟಿ, ಶ್ಯಾಮಲಾ ಎಂ.ಶೆಟ್ಟಿ ಸ್ವಾಗತಿಸಿದರು.

  ವಕೀಲರಾದ ಸದಾನಂದ ರೈ, ಮಹಾಬಲ ಶೆಟ್ಟಿ ಕೂಡ್ಲು, ನಿವೃತ್ತ ಮುಖ್ಯ ಶಿಕ್ಷಕ ಎಸ್.ಎನ್.ರಾಮ ಶೆಟ್ಟಿ ಶಿರಿಬಾಗಿಲು ಶುಭ ಹಾರೈಸಿದರು. ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡ್ ಸನ್ಮಾನಿತರನ್ನು ಪರಿಚಯಿಸಿದರು. ಡಾ.ವಿದ್ಯಾ ಮೋಹನದಾಸ್ ರೈ, ಬಂಟರ ಸಂಸ್ಕೃತಿ, ಸಂಪ್ರದಾಯ ಕುರಿತು ಉಪನ್ಯಾಸ ನೀಡಿದರು. ಅಶೋಕ್ ರೈ ಸೂರ್ಲು ಸ್ವಾಗತಿಸಿದರು.

  ಬಂಟರ ಸಂಘದ ವಿವಿಧ ಘಟಕಗಳ ಅಧ್ಯಕ್ಷರಾದ ಬಾಬು ರೈ ಗಂಗೆ ಕೂಡ್ಲು, ನಾರಾಯಣ ಶೆಟ್ಟಿ ಶಿರಿಬಾಗಿಲು, ಬಾಲಕೃಷ್ಣ ಮಧೂರು, ಪುರಂದರ ಶೆಟ್ಟಿ ಮಾಯಿಪ್ಪಾಡಿ ಉಪಸ್ಥಿತರಿದ್ದರು. ರೋಹಿತಾಕ್ಷಿ ಬಿ.ರೈ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮೀ ಅಡಪ, ಚಿತ್ರಲೇಖ ರೈ, ಲೀಲಾವತಿ ಎಸ್.ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ರಮೇಶ್ ಶೆಟ್ಟಿ ವಂದಿಸಿದರು.

  ಸಹಕರಿಸಿದವರಿಗೆ ಗೌರವಾರ್ಪಣೆ

  ಬೆಂಗಳೂರು ಬಂಟರ ಸಂಘದ ಸದಾನಂದ ಸುಲಾಯ ಕಾರ್ಯಾಲಯ ಉದ್ಘಾಟಿಸಿದರು. ನಟ ಶಿವಧ್ವಜ ಶೆಟ್ಟಿ ಬಯಲು ರಂಗ ಮಂದಿರ ಲೋಕಾರ್ಪಣೆಗೊಳಿಸಿದರು. ನೂತನ ಕಾರ್ಯಾಲಯ ಭವನ, ಬಯಲು ರಂಗ ಮಂದಿರದ ನಿರ್ಮಾಣಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ವಿಶ್ರಾಂತ ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಪತ್ರಕರ್ತ ರಾಜೇಶ್ ರೈ ಚಟ್ಲ, ಮದನ ರೈ ಅವರನ್ನು ಸನ್ಮ್ಮಾನಿಸಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts