ನನ್ನ ಕೆರಿಯರ್​ ನಾಶಕ್ಕೆ ಯತ್ನಿಸಿದ್ದು ಆ ಪ್ರಬಲ ವ್ಯಕ್ತಿಗಳೆ; ಬಿಟೌನ್​​ನ​​ ಕರಾಳ ಮುಖ ಬಿಚ್ಚಿಟ್ಟ ವಿವೇಕ್​​ ಒಬೆರಾಯ್​​​​

ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್​​ನ ಟಾಪ್​ ನಟರಲ್ಲಿ ವಿವೇಕ್​ ಒಬೆರಾಯ್​ ಕೂಡ ಒಬ್ಬರು. ಹಿಟ್​ ಸಿನಿಮಾಗಳನ್ನು ನೀಡಿದರೂ ಯಾವುದೇ ಕೆಲಸವಿರಲಿಲ್ಲ. ಸಾರ್ವಜನಿಕವಾಗಿ ಅವಮಾನ ಎದುರಿಸಿದೆ ಅಲ್ಲದೆ ಚಿತ್ರರಂಗದಲ್ಲಿನ ಪ್ರಬಲ ವ್ಯಕ್ತಿಗಳು ನನ್ನ ವೃತ್ತಿಜೀವನವನ್ನು ನಾಶ ಮಾಡಲು ಪ್ರಯತ್ನಿಸಿದರು ಎಂದು ಬಿಟೌನ್​ನ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ: ಅಮೀರ್​ಖಾನ್​ ಮಗನ ಜತೆ ಖುಷಿ ಕಪೂರ್​ ರೋಮ್ಯಾನ್ಸ್​​; ಈ ಕುರಿತು ಜಾಹ್ನವಿ ಕಪೂರ್​​ ಹೇಳಿದಿಷ್ಟು..

ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ವಿವೇಕ್​ ಒಬೆರಾಯ್​ ಬಾಲಿವುಡ್​ನಲ್ಲಿ ತಾನು ಅನುಭವಿಸಿದ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನೀವು ಕೆಟ್ಟ ಸಮಯವನ್ನು ಅನುಭವಿಸಿದಾಗ ಅದರ ತೀವ್ರತೆ ತಿಳಿಯುತ್ತದೆ. ಆ ಸಮಯದಲ್ಲಿ ಕಷ್ಟ ಎನ್ನಿಸುವುದು ಅಲ್ಪಾವಧಿಯಲ್ಲಿದ್ದರೆ ಅದರಿಂದ ಗುಣಮುಖರಾಗಿ ತಕ್ಷಣವೇ ಹೊರಬರಬಹುದು. ಆದರೆ ಆ ನಕಾರಾತ್ಮಕತೆಯು ದೀರ್ಘಕಾಲದವರೆಗೆ ಇದ್ದರೆ ಅದರಿಂದ ಚೇತರಿಸಿಕೊಳ್ಳುವುದು ಕಷ್ಟವಾಗುವುದರ ಜತೆಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ಗಾಯವು ಗುಣವಾಗುತ್ತಿದ್ದರೆ ಹಳೆಯ ನೋವು ಮರುಕಳಿಸುತ್ತದೆ. ಇದರಿಂದ ಮುಂದೆ ಸಾಗಲು ಕಷ್ಟವಾಗುತ್ತದೆ ಎಂದು ಹೇಳಿದರು.

ಅಂತಹ ಕೆಟ್ಟ ಪರಿಸ್ಥಿತಿಯಿಂದ ನಾವು ಹೊರಬರಲು ಪ್ರಯತ್ನಿಸದಿದ್ದರೆ ಮುಂದೆ ಹೋಗುವುದೇ ಅಸಾಧ್ಯವಾಗುತ್ತದೆ. ನನ್ನ ವಿಷಯದಲ್ಲಿ ಆ ಕೆಟ್ಟ ಪರಿಸ್ಥಿತಿ ತೀವ್ರತೆಯು ಹೆಚ್ಚಿತ್ತು. ಅದರ ಪರಿಣಾಮವಾಗಿ ನಾನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಂಗ್​ ಆದೆ, ಸಾರ್ವಜನಿಕವಾಗಿ ಅವಮಾನ ಎದುರಿಸಿದೆ, ವೃತ್ತಿಜೀವನದಲ್ಲಿ ಹಿಟ್​​ ಸಿನಿಮಾಗಳನ್ನು ನೀಡಿದ್ದರು ನನಗೆ ಬಳಿ ಯಾವುದೇ ಸಿನಿಮಾಗಳಿರಲಿಲ್ಲ. ಸಹಿ ಹಾಕಿದ್ದ ಎಷ್ಟೋ ಪ್ರಾಜೆಕ್ಟ್​ಗಳನ್ನು ನನ್ನಿಂದ ಕಸಿದುಕೊಳ್ಳಲಾಯಿತು. ಇದಷ್ಟೆ ಅಲ್ಲ ಭೂಗತ ಜಗತ್ತಿನಿಂದ ಬೆದರಿಕೆಗಳು ಬಂದವು ಎಂದು ವಿವೇಕ ಒಬೆರಾಯ್​ ತಿಳಿಸಿದರು.

ಆಗ ವಿಷಯಗಳನು ಬೇರೆ ಮಟ್ಟದಲ್ಲಿ ನಡೆಯುತ್ತಿದ್ದವು. ಅಂತಹ ಪರಿಸ್ಥಿತಿಯಲ್ಲಿ ಒಬ್ಬರು ಶಾಂತವಾಗಿರಲು ಹೇಗೆ ಸಾಧ್ಯ. ನನಗೆ ಭದ್ರತೆ ಒದಗಿಸಿದ್ದರಿಂದ ಚೆನ್ನಾಗಿ ಇದ್ದೆ ಆದರೆ ನನ್ನ ಹೆತ್ತವರು, ಸಹೋದರಿಯ ಬಗ್ಗೆ ಏನು? ಅವರ ಸುರಕ್ಷತೆಯ ಬಗ್ಗೆ ನಿರಂತರವಾಗಿ ಚಿಂತಿಸುತ್ತಿದ್ದೆ. ಇವೆಲ್ಲವೂ ನನ್ನ ಕೆಲಸದ ಮೇಲೆ ಪರಿಣಾಮ ಬೀರಿದೆ. ನನಗೆ ಕೆಲಸದ ಮೇಲೆ ಏಕಾಗ್ರತೆ ಇರುತ್ತಿರಲಿಲ್ಲ. ಕ್ರಮೇಣ ನನ್ನ ವೃತ್ತಿಜೀವನವು ನೆಲಕಚ್ಚಿತು. ಆದರೆ ಆ ಪರಿಸ್ಥಿತಿಗಳಿಂದ ನಾನು ಧೈರ್ಯವಾಗಿ ಹೊರಬಂದೆ ಎಂದು ವಿವರಿಸಿದರು.

ವಿವೇಕ್ ಒಬೆರಾಯ್ ಮತ್ತು ಸಲ್ಮಾನ್ ಖಾನ್ ನಡುವಿನ ವಿವಾದ ಎಲ್ಲರಿಗೂ ಗೊತ್ತಿರುವ ವಿಚಾರವೆ. ವಿವೇಕ್ ಸಲ್ಮಾನ್ ಬೆದರಿಕೆ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ಆರೋಪಿಸಿದ್ದರು. ಅಂದಿನಿಂದ ಬಾಲಿವುಡ್​ ಭಾಯಿಜಾನ್​​ನಿಂದಾಗಿ ವಿವೇಕ್ ಇಂಡಸ್ಟ್ರಿಯಿಂದ ಹೊರ ಉಳಿದರು ಎಂದು ಹೇಳಲಾಗುತ್ತದೆ. (ಏಜೆನ್ಸೀಸ್​​)

ಅಡುಗೆಯವರಿಗೆ ನೀಡಲು ನನ್ನ ಬಳಿ ಹಣ ಇರಲಿಲ್ಲ; ಕಣ್ಣೀರಿಟ್ಟ ದಿನಗಳನ್ನು ನೆನೆದ ಫ್ಯಾಷನ್​ ಡಿಸೈನರ್​ ಮಸಾಬಾ

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…