ಮುಂಬೈ: ಪ್ರಸಿದ್ಧ ಫ್ಯಾಷನ್ ಡಿಸೈನರ್ ಮತ್ತು ನಟಿ ಮಸಾಬಾ ತಾವು ಎದುರಿಸಿದ ಆರ್ಥಿಕ ಸಂಕಷ್ಟ ಮತ್ತು ಕಷ್ಟಕರ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಾನು ಆ ಸಮಯದಲ್ಲಿ ಮನೆಯಲ್ಲಿದ್ದ ಅಡುಗೆಯವರಿಗೆ ಪಾವತಿಸಲು ನನ್ನ ಬಳಿ ಹಣ ಇರಲಿಲ್ಲ ಎಂದು ತಮ್ಮ ಅಸಹಾಯಕತೆಯ ಪರಿಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ
ಇದನ್ನು ಓದಿ: ಕನ್ನಡ್ ಅಲ್ಲ.. ಕನ್ನಡ; ಅಭಿನಯ ಚಕ್ರವರ್ತಿ ಸುದೀಪ್ ಪಾಠ ಮಾಡಿದ್ದು ಯಾರಿಗೆ?
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಕಷ್ಟದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಮಸಾಬಾ, ಕರೋನಾ ಸಾಂಕ್ರಾಮಿಕ ರೋಗ 2020ರಲ್ಲಿ ಅಪ್ಪಳಿಸಿದ ಸಮಯ ನನ್ನ ಜೀವನದ ಅತ್ಯಂತ ಕೆಟ್ಟ ಸಮಯವಾಗಿದೆ. ಎಷ್ಟು ಕೆಟ್ಟದಾಗಿತ್ತು ಎಂದರೆ ನನ್ನ ಅಡುಗೆಯವರಿಗೆ ಕೊಡಲು ನನ್ನ ಬಳಿ 12 ಸಾವಿರ ರೂಪಾಯಿ ಇರಲಿಲ್ಲ. ಲಾಕ್ಡೌನ್ ಆದಾಗ ನಾನು ಒಂದು ಅಥವಾ ಎರಡು ದಿನ ಆಗಬಹದು ಎಂದು ಭಾವಿಸಿದ್ದೆ. ಆದರೆ ಅದು 14 ದಿನಗಳವರೆಗೆ ವಿಸ್ತರಿಸಲಾಯಿತು. ಮಾರ್ಚ್ ಅಥವಾ ಏಪ್ರಿಲ್ ಆರಂಭ ಎನ್ನಿಸುತ್ತದೆ. ಕೈಯಲ್ಲಿ ಹಣವಿಲ್ಲ, ವ್ಯಾಪಾರವೆಂದರೆ ಯಾರು ಏನನ್ನೂ ಖರಿದೀಸುತ್ತಿಲ್ಲ. ಫ್ಯಾಷನ್ ಜಗತ್ತು ನೆಲಕಚ್ಚಿತ್ತು ಎಂದು ಹೇಳಿದರು.
ಆ ಸಮಯದಲ್ಲಿ ನನ್ನ 5 ಫ್ರಾಂಚಿಸಿಗಳನ್ನು ಕ್ಲೋಸ್ ಮಾಡಲಾಯಿತು. ಸಿಬ್ಬಂದಿ ಕರೆ ಬಂದರೆ ಸಾಕು ನನಗೆ ಅಳು ಬರುತಿತ್ತು. ಏನಾದರೂ ಆಗಲಿ ಕೆಲಸ ಮಾಡಲೇಬೇಕು ಎಂದು ನಂಬಿದ್ದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ನಲ್ಲಿ 2 ಲಕ್ಷ ರೂಪಾಯಿ ಇತ್ತು. ಅದನ್ನು ಇಟ್ಟುಕೊಂಡು ಆಗಿರುವ ನಷ್ಟ ಕಡಿಮೆ ಆಗುತ್ತದೆ ಎಂದು ಭಾವಿಸಿದ್ದೆ ಅದರೆ ಅದು ಆಗಲಿಲ್ಲ. ಪ್ರತಿ ಬಾರಿ ಸಿಬ್ಬಂದಿ ಮಳಿಗೆಯಲ್ಲಿ ಯಾರು ಏನನ್ನೂ ತೆಗೆದುಕೊಳ್ಳುತ್ತಿಲ್ಲ ಎಂದಾಗ ಅಳುತ್ತಿದ್ದೆ ಎಂದು ತಿಳಿಸಿದರು.
ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಸರ್ ವಿವಿಯನ್ ರಿಚರ್ಡ್ಸ್ ಮತ್ತು ಹಿರಿಯ ನಟಿ ನೀನಾ ಗುಪ್ತಾ ಅವರ ಮಗಳು ಮಸಾಬಾ. ಭಾರತೀಯ ಚಲನಚಿತ್ರ ನಿರ್ಮಾಪಕ ಮಧು ಮಾಂಟೆನಾ ಅವರನ್ನು ಮಸಾಬಾ 2015ರಲ್ಲಿ ವಿವಾಹವಾದರು. ಕಾರಣಗಳೇನು ಎಂಬುದು ತಿಳಿದಿಲ್ಲ ಈ ಜೋಡಿ 2018ರಲ್ಲಿ ಬೇರ್ಪಟ್ಟರು ಮತ್ತು ಸೆಪ್ಟೆಂಬರ್ 2019ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಬಳಿಕ ಜನವರಿ 2023ರಲ್ಲಿ ನಟ ಸತ್ಯದೀಪ್ ಮಿಶ್ರಾ ಅವರನ್ನು ವಿವಾಹವಾದರು.(ಏಜೆನ್ಸೀಸ್)
ಆ ವ್ಯಕ್ತಿ ನೋಡಿ ಮೂರ್ಛೆ ಹೋಗುತ್ತಿದ್ದೆ ಅಷ್ಟರಲ್ಲಿ..; ಬಿಗ್ಬಿ ಅಮಿತಾಭ್ ಹೇಳಿದಿಷ್ಟು..