

ಮುಂಬೈ: ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ, ತಮ್ಮ ಕೆಲಸದಲ್ಲಿ ಸದಾ ಬಿಸಿಯಾಗಿದರುವ ಬಾಲಿವುಡ್ನ ಆ್ಯಂಗ್ರಿ ಯಂಗ್ಮ್ಯಾನ್ ಅಮಿತಾಭ್ ಬಚ್ಚನ್ ತಾವು ಅನುಭವಿಸಿದ ಶಾದಕಿಂಗ್ ಘಟನೆಯೊಂದನ್ನು ಇತ್ತೀಚೆಗೆ ಬಹಿರಂಗಗೊಳಿಸಿದ್ದಾರೆ.
ಅಮಿತಾಭ್ ಬಚ್ಚನ್ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡುತ್ತಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿಯಿಂದ ನಾನು ಮೂರ್ಛೆ ಹೋಗುತ್ತಿದೆ. ಆದರೆ ಅಷ್ಟರಲ್ಲಿ ನನ್ನನ್ನು ನಾನು ನಿಯಂತ್ರಿಸಿಕೊಂಡೆ ಎಂದು ಬಿಗ್ಬಿ ಹೇಳಿದ್ದಾರೆ. ಆ ಘಟನೆಯನ್ನು ನೆನಪಿಸಕೊಂಡ ಅವರು ಆ ವ್ಯಕ್ತಿಯ ಬಗ್ಗೆ ಸಾಕಷ್ಟು ಹೊಗಳಿದ್ದಾರೆ.
ನಾನು ನ್ಯೂಯಾರ್ಕ್‌ನ ಹೋಟೆಲ್‌ನಲ್ಲಿ ತಂಗಿದ್ದೆ. ಒಂದು ದಿನ ಯಾರೋ ಬಂದು ನನ್ನ ರೂಮ್ ಬಾಗಿಲು ಬಡಿದರು. ನಾನು ಬಾಗಿಲು ತೆರೆದಾಗ ಬೇರೆ ಯಾರೂ ಅಲ್ಲ, ಅಲ್ಲಿ ಮೈಕೆಲ್ ಜಾಕ್ಸನ್ ನಿಂತಿದ್ದರು. ಅವರನ್ನು ನೋಡಿ ನನಗೆ ಪ್ರಜ್ಞೆ ತಪ್ಪಿ ಮೂರ್ಛೆ ಹೋಗುತ್ತಿತ್ತು. ಆದರೆ ಹೇಗೋ ನನ್ನನ್ನು ನಾನು ನಿಯಂತ್ರಿಸಿಕೊಂಡು ಅವರನ್ನು ಸ್ವಾಗತಿಸಿದೆ. ಬಳಿಕ ಅವರು ಇದು ನನ್ನ ರೂಮ್ ಅಲ್ಲವೆ ಎಂದ ಕೇಳಿದರು. ನಾನು ಇಲ್ಲ ಎಂದು ಹೇಳಿದೆ. ಅವರು ಮಿಸ್ಸಾಗಿ ನನ್ನ ರೂಮ್ಗೆ ಬಂದಿದ್ದಾರೆ ಎಂದು ಆಗ ತಿಳಿಯಿತು ಎಂದು ಹೇಳಿದರು.
ಬಳಿಕ ಮೈಕಲ್ ಜಾಕ್ಸನ್ ಅವರ ರೂಮಿಗೆ ಹೋದ ಬಳಿಕ ಯಾರನ್ನೋ ಕಳುಹಿಸಿ ಫೋನ್ ಮಾಡಿ ಅವರ ರೂಮಿಗೆ ನನ್ನನ್ನು ಆಹ್ವಾನಿಸಿದರು. ನನಗೆ ಮೊದಲ ಬಾರಿಗೆ ಅವರೊಂದಿಗೆ ಕುಳಿತು ಮಾತನಾಡಲು ಅವಕಾಶ ಸಿಕ್ಕಿತು ಎಂದು ಅಮಿತಾಭ್ ಹೇಳಿದರು. ಅಷ್ಟು ಜನಪ್ರಿಯತೆ ಇದ್ದರೂ ಅವರು ತುಂಬಾ ಕರುಣಾಮಯಿ. ಅವರೊಂದಿಗೆ ನನ್ನ ಮೊದಲ ಭೇಟಿ ಹೀಗಾಯಿತು ಎಂದು ತಿಳಿಸಿದರು.
ಮೈಕೆಲ್ ಜಾಕ್ಸನ್ ಒಬ್ಬ ಗಾಯಕ. ಅವರನ್ನು ಪಾಪ್ ಕಿಂಗ್ ಎಂದು ಕರೆಯಲಾಗುತ್ತಿತ್ತು. ವೃತ್ತಿಜೀವನದಲ್ಲಿ ಅವರು ಸಂಗೀತ ಮತ್ತು ಡ್ಯಾನ್ಸ್ಗೆ ಅಪಾರ ಕೊಡುಗೆಗಳನ್ನು ನೀಡಿದರು. ಅವರು 2009ರಲ್ಲಿ ನಿಧನರಾದರು. ಅಮಿತಾಭ್ ಬಚ್ಚನ್ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಚಿತ್ರದಲ್ಲಿನ ಅವರ ಅದ್ಭುತ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ವೆಟ್ಟೈಯಾನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ತಮಿಳಿನಲ್ಲಿ ಅವರ ಚೊಚ್ಚಲ ಚಿತ್ರವಾಗಿದೆ. (ಏಜೆನ್ಸೀಸ್)