ದುಬೈ: ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಆರಾಧ್ಯ SIIMA (ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್) 2024ರಲ್ಲಿ ಪಾಲ್ಗೊಳ್ಳಲು ದುಬೈ ಹೋಗಿರುವುದು ಗೊತ್ತೆ ಇದೆ. ದುಬೈ ವಿಮಾನ ನಿಲ್ದಾಣದಲ್ಲಿ ಇಬ್ಬರಿಗು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಅದೇ ದಿನ ಸಂಜೆ ತಾಯಿ-ಮಗಳು ಇಬ್ಬರು ರೆಡ್ ಕಾರ್ಪೆಟ್ ಮೇಲೆ ಮಿಂಚಿದರು. ಅಲ್ಲದೆ ಐಶ್ವರ್ಯಾ ಅಭಿಮಾನಿಗಳ ಫೋನ್ ತೆಗೆದುಕೊಂಡು ಸೆಲ್ಫಿ ಕೊಡುವ ಮೂಲಕ ಅವರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇದನ್ನು ಓದಿ: ‘ಕೂಲಿ’ ಸೆಟ್ನಲ್ಲಿ ‘ವೆಟ್ಟೈಯಾನ್’ ಹಾಡಿಗೆ ತಲೈವಾ ಡ್ಯಾನ್ಸ್; ರಜನಿಕಾಂತ್ ಓಣಂ ಸೆಲೆಬ್ರೇಷನ್ ವಿಡಿಯೋ ವೈರಲ್
ನಟಿ ಐಶ್ವರ್ಯಾ ರೈ ಪೊನ್ನಿಯಿನ್ ಸೆಲ್ವನ್-2ರಲ್ಲಿ ದ್ವಿಪಾತ್ರದಲ್ಲಿ ನಟಿಸಿರುವುದು ಸಿನಿಮಾ ನೋಡಿದವರಿಗೆ ತಿಳಿದೆ ಇರುತ್ತದೆ. ನಂದಿನಿ ಮತ್ತು ಮಂದಾಕಿನಿ ದೇವಿ ಎಂಬ ಪಾತ್ರದಲ್ಲಿ ಅಮೋಘವಾಗಿ ನಟಿಸುವ ಮೂಲಕ ಅಭಿಮಾನಿಗಳ ಮನಸೊರೆ ಮಾಡಿದ್ದಾರೆ. ಪೊನ್ನಿಯಿನ್ ಸೆಲ್ವನ್-2 ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ಐಶ್ವರ್ಯಾ ರೈ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ತಾಯಿ ಪ್ರಶಸ್ತಿ ಸ್ವೀಕರಿಸುವ ವಿಶೇಷ ಕ್ಷಣಗಳನ್ನು ಆರಾಧ್ಯ ತಮ್ಮ ಮೊಬೈಲ್ನಲ್ಲಿ ಸೆರೆಹಿಡಿಯುವುದರ ಜತೆಗೆ ಕ್ಷಣಗಳನ್ನು ಸಂಭ್ರಮಿಸಿದ್ದಾರೆ.
ಕಬೀರ್ ಖಾನ್ ಅವರು ಐಶ್ವರ್ಯಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಐಶ್ವರ್ಯಾ ರೈ, ನನಗೆ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕಾಗಿ SIIMA ಗೆ ಧನ್ಯವಾದ ಹೇಳುತ್ತೇನೆ. ನನ್ನ ಗುರು ಮಣಿರತ್ನಂ ನಿರ್ದೇಶಿಸಿದ ಪೊನ್ನಿಯಿನ್ ಸೆಲ್ವನ್ ಚಿತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ನಂದಿನಿ ಪಾತ್ರಕ್ಕೆ ಸಿಗುತ್ತಿರುವ ಗೌರವ ಇಡೀ ತಂಡಕ್ಕೆ ಸಲ್ಲಬೇಕು ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಬಳಿಕ ಸ್ಥಳದ ಹೊರಗೆ ಜಮಾಯಿಸಿದ ಅಭಿಮಾನಿಗಳಲ್ಲಿ ಸೆಲ್ಫಿ ತೆಗೆದುಕೊಂಡರು. ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟುಗೊಳಿಸಿದರು. SIIMA (ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು) ಸೆಪ್ಟೆಂಬರ್ 14ರಂದು ಉದ್ಘಾಟಿಸಲಾಯಿತು. ಈ ಪ್ರಶಸ್ತಿಯು ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಅತ್ಯಂತ ದೊಡ್ಡ ಮತ್ತು ಜನಪ್ರಿಯ ಪ್ರಶಸ್ತಿಯಾಗಿದೆ. ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಫಿಲ್ಮ್‌ಫೇರ್ ಮತ್ತು ಆಸ್ಕರ್ ಇರುವಂತೆಯೇ ದಕ್ಷಿಣ ಚಿತ್ರರಂಗದಲ್ಲಿ SIIMA ಪ್ರಶಸ್ತಿ ಇದೆ.(ಏಜೆನ್ಸೀಸ್)
ನಟನೆಗೆ ಬರುವ ಮುನ್ನವೆ ನನ್ನ ತಾಯಿ ಸಲಹೆ ನೀಡಿದ್ರು; ಹೇಮಮಾಲಿನಿ ಹೇಳಿಕೊಟ್ಟ ಪಾಠ ನೆನೆದ ಇಶಾ ಡಿಯೋಲ್