ಚೆನ್ನೈ: ಕೇರಳದ ಸಾಂಸ್ಕೃತಿಕ ಸಂಪ್ರದಾಯದ ಹಬ್ಬಗಳಲ್ಲಿ ಓಣಂ ಕೂಡ ಒಂದು. ಸೆಪ್ಟೆಂಬರ್ 6 ರಿಂದ ಆರಂಭವಾಗಿರುವ ಓಣಂ ಭಾನುವಾರ (ಸೆಪ್ಟೆಂಬರ್ 15) ಕೊನೆ ಗೊಳ್ಳಲಿದೆ. ಸೂಪರ್ಸ್ಟಾರ್ ರಜನಿಕಾಂತ್ ಅವರು ಅದ್ಧೂರಿಯಾಗಿ ಓಣಂ ಹಬ್ಬವನ್ನು ಆಚರಿಸಿದ್ದಾರೆ. ಕೂಲಿ ಸಿನಿಮಾದ ಚಿತ್ರೀಕರಣದ ವೇಳೆ ಈ ಸೆಲೆಬ್ರೇಷನ್ನಡದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿ: ನಟನೆಗೆ ಬರುವ ಮುನ್ನವೆ ನನ್ನ ತಾಯಿ ಸಲಹೆ ನೀಡಿದ್ರು; ಹೇಮಮಾಲಿನಿ ಹೇಳಿಕೊಟ್ಟ ಪಾಠ ನೆನೆದ ಇಶಾ ಡಿಯೋಲ್
ಇಲ್ಲೊಂದು ಟ್ವಿಸ್ಟ್ ಕೂಡ ಇದೆ. ಅದೇನೆಂದರೆ ಕೂಲಿ ಸಿನಿಮಾದ ಸೆಟ್ನಲ್ಲಿ ರಜನಿಕಾಂತ್ ಅವರು ತಮ್ಮ ಮುಂಬರುವ ‘ವೆಟ್ಟೈಯಾನ್’ ಚಿತ್ರದ ಹಾಡು ‘ಮಾನಸಿಲಯೋ’ಗೆ ಸ್ಟೆಪ್ ಹಾಕಿದ್ದಾರೆ. ಅಂದರೆ ತಮ್ಮ ಮತ್ತೊಂದು ಸಿನಿಮಾದ ಹಾಡಿಗೆ ಪ್ರಸ್ತುತ ಚಿತ್ರೀಕರಣ ನಡೆಯುತ್ತಿರುವ ಸೆಟ್ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಇದು ಎಲ್ಲೆಡೆ ಸಂಚಲನ ಮೂಡಿಸಿದ್ದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ತಲೈವಾ ರಜನಿಕಾಂತ್ ಪಂಚೆಕಾಟುಗಳಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಇತ್ತೀಚೆಗೆ ರಜನಿಕಾಂತ್ ಅಭಿನಯದ ವೆಟ್ಟೈಯಾನ್ ಚಿತ್ರದ ಮೊದಲ ಸಿಂಗಲ್ ಬಿಡುಗಡೆಯಾಗಿದೆ. ‘ಮನಸಿಲಯೋ’ ಹಾಡನ್ನು ವಿಷ್ಣು ಎಡವನ್ ಮತ್ತು ಸೂಪರ್ ಸುಬು ಬರೆದಿದ್ದಾರೆ. ಇದನ್ನು ದಿವಂಗತ ಗಾಯಕರಾದ ಮಲೇಷ್ಯಾ ವಾಸುದೇವನ್, ಯುಗೇಂದ್ರನ್ ವಾಸುದೇವನ್, ಅನಿರುದ್ಧ್ ರವಿಚಂದರ್ ಮತ್ತು ದೀಪ್ತಿ ಸುರೇಶ್ ಹಾಡಿದ್ದಾರೆ. ಮಲೇಷ್ಯಾ ವಾಸುದೇವನ್ ಅವರ ಗಾಯನವನ್ನು AI ತಂತ್ರಜ್ಞಾನ ಬಳಸಿಕೊಂಡು ಮರುಸೃಷ್ಟಿಸಲಾಗಿದೆ. ಇದೀಗ ಈ ಹಾಡಿನಲ್ಲಿ ‘ಕೂಲಿ’ ಚಿತ್ರತಂಡ ಕುಣಿದು ಕುಪ್ಪಳಿಸಿದೆ.
ವೆಟ್ಟೈಯಾನ್ ಸಿನಿಮಾದಲ್ಲಿ ರಜನಿಕಾಂತ್, ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫಹದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್ ಮತ್ತು ದುಶಾರಾ ವಿಜಯನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿಜೆ ಜ್ಞಾನವೇಲ್ ಅವರು ಆ್ಯಕ್ಷನ್-ಕಟ್ ಹೇಳಿರುವ ಈ ಸಿನಿಮಾ ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ.
ಇನ್ನು ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಚಿತ್ರದ ಚಿತ್ರೀಕರಣ ನಡೆಯುತ್ತಿರುವುದು ಗೊತ್ತೆ ಇದೆ. ಇತ್ತೀಚೆಗೆ ರಜನಿಕಾಂತ್ ಅವರ ಕ್ಯಾರೆಕ್ಟರ್ ಪೋಸ್ಟರ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಸಿನಿಮಾ 2025ರ ದ್ವಿತೀಯಾರ್ಧದಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ. ಸಿನಿಮಾದಲ್ಲಿ ನಾಗಾರ್ಜುನ, ಸೌಬಿನ್ ಶಾಹಿರ್, ಸತ್ಯರಾಜ್, ಉಪೇಂದ್ರ ಮತ್ತು ಶ್ರುತಿ ಹಾಸನ್ ನಟಿಸಿದ್ದಾರೆ.(ಏಜೆನ್ಸೀಸ್)
ಕಾರಣವಿಲ್ಲದೆ ಆ ಸಿನಿಮಾಗಳಿಂದ ನನ್ನನ್ನು ತೆಗೆದುಹಾಕಿದ್ರು; ಬಹಳ ನೋವಾಯಿತು ಎಂದ ಐಶ್ವರ್ಯಾ ರೈ ಬಚ್ಚನ್