ಮುಂಬೈ: ಬಾಲಿವುಡ್‌ನ ಟಾಪ್ ನಟಿಯರಲ್ಲಿ ಐಶ್ವರ್ಯಾ ರೈ ಕೂಡ ಒಬ್ಬರು. ಇಂದಿಗೂ ಅವರ ಕ್ರೇಜ್ ಕಡಿಮೆಯಾಗಿಲ್ಲ. ತಮ್ಮ ಗ್ಲಾಮರ್ ಮತ್ತು ಸೌಂದರ್ಯದಿಂದ ಎಲ್ಲರ ಹೃದಯ ಗೆದ್ದಿರುವ ನಟಿ. ನಟಿ ಐಶ್ವರ್ಯಾ ಮತ್ತು ಶಾರೂಖ್ ಖಾನ್ ಕಾಂಬಿನೇಷನ್ನಲ್ಲಿ ಬಂದಂತಹ ಸಿನಿಮಾಗಳು ಸೂಪರ್ ಹಿಟ್ ಆಗಿರುವುದು ಗೊತ್ತೆ ಇದೆ. ಆದರೆ ಶಾರೂಖ್ ಅವರೊಂದಿಗೆ ನಟಿಸಬೇಕಿದ್ದ ಐದು ಸಿನಿಮಾಗಳು ಐಶ್ವರ್ಯಾ ಕೈತಪ್ಪಿದ್ದು ಹೇಗೆ ಎಂಬುದರ ಕುರಿತ ಸ್ವತಃ ಐಶ್ವರ್ಯಾ ರೈ ಹೇಳಿರುವುದು ಏನು ಗೊತ್ತಾ.
ಇದನ್ನು ಓದಿ: ಮಗಳ ಜತೆಗಿನ ಐಶ್ವರ್ಯಾ ರೈ ಬಚ್ಚನ್ ವಿಡಿಯೋ ವೈರಲ್; ಆರಾಧ್ಯ ಕುರಿತು ನೆಟ್ಟಿಗರು ಹೀಗೆಳಿದ್ದೇಕೆ?
ಸದ್ಯ ಐಶ್ವರ್ಯಾ ರೈ ಅವರ ಥ್ರೋಬ್ಯಾಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಂದರ್ಶನವೊಂದರಲ್ಲಿ ಐಶ್ವರ್ಯಾ ಈ ಬಗ್ಗೆ ಮಾತನಾಡಿದ್ದು, ‘ಚಲ್ತೆ-ಚಲ್ತೆ’, ‘ಕಲ್ ಹೋ ನಾ ಹೋ’, ‘ವೀರ್-ಜಾರಾ’ ಮುಂತಾದ ಬ್ಲಾಕ್‌ಬಸ್ಟರ್ ಚಲನಚಿತ್ರಗಳು ನಾನು ನಟಿಸಬೇಕಿತ್ತು. ಆದರೆ ಯಾವುದೇ ಕಾರಣವಿಲ್ಲದೆ ನನ್ನನ್ನು ಬದಲಾಯಿಸಲಾಯಿತು. ನಿರ್ಮಾಪಕರ ಈ ನಿರ್ಧಾರ ಅಭಿಮಾನಿಗಳಿಗೆ ಮಾತ್ರವಲ್ಲಿ ಚಿತ್ರರಂಗದ ಅನೇಕರನ್ನು ಆಶ್ಚರ್ಯಗೊಳಿಸಿತು ಎಂದು ತಿಳಿಸಿದರು.
ಇದು ನಿಮ್ಮ ನಿರ್ಧಾರವೆ ಎಂದು ಕೇಳಿದಾಗ, ಐಶ್ವರ್ಯಾ ಇಲ್ಲ, ಯಾವ ಕಾರಣಕ್ಕೆ ನನ್ನನ್ನು ಸಿನಿಮಾದಿಂದ ತೆಗೆದರು ಎಂಬುದಕ್ಕೆ ನನಗೂ ಉತ್ತರ ಸಿಕ್ಕಿಲ್ಲ. ನನ್ನನ್ನು ಬದಲಾಯಿಸುವ ನಿರ್ಧಾರ ಅವರದ್ದೇ. ಆ ಸಮಯದಲ್ಲಿ ನಾನು ಆಘಾತಕ್ಕೊಳಗಾಗಿದ್ದೆ, ಬಹಳ ನೋವನ್ನು ಅನುಭವಿಸಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ನೀವು ಶಾರೂಖ್ ಅವರನ್ನು ಪ್ರಶ್ನಿಸಿದ್ದೀರಾ ಎಂದು ಕೇಳಿದ್ದಕ್ಕೆ, ಇದು ನನ್ನ ಸ್ವಭಾವದಲ್ಲಿಲ್ಲ. ಯಾರಿಗಾದರೂ ಅದನ್ನು ವಿವರಿಸುವ ಅವಶ್ಯಕತೆಯಿದೆ ಎಂದರೆ ಅವರು ಮಾಡುತ್ತಾರೆ. ಅವರು ಎಂದಿಗೂ ಮಾಡದಿದ್ದರೆ ಅವರಿಗೆ ಆ ಉದ್ದೇಶವಿಲ್ಲ ಎಂದರ್ಥ. ಹಾಗಾಗಿ ಏನು ಮತ್ತು ಏಕೆ ಎಂಬುದನ್ನು ನಾನು ಕೇಳಲಿಲ್ಲ. ನಾನು ಯಾವುದೇ ವ್ಯಕ್ತಿಯ ಬಳಿಗೆ ಹೋಗುವುದಿಲ್ಲ. ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ ಎಂದು ತಿಳಿಸಿದರು.
ಆ ಸಮಯದಲ್ಲಿ ಶಾರೂಖ್ಖಾನ್ ಅವರು ಬಾಹ್ಯ ಒತ್ತಡಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ವರದಿಯಾಗಿತ್ತು. ಆದರೆ ನಿಖರವಾದ ವಿವರಗಳು ಸ್ಪಷ್ಟವಾಗಿಲ್ಲ. ಮೊಹಬ್ಬತೇನ್, ದೇವದಾಸ್, ಹಮ್ ತಮ್ಹಾರೆ ಹೈ ಸನಮ್ ಸೂಪರ್ ಹಿಟ್ ಕೊಟ್ಟ ಶಾರೂಖ್ ಮತ್ತು ಐಶ್ವರ್ಯಾ ಜೋಡಿ 2016ರಲ್ಲಿ ಕರಣ್ ಜೋಹರ್ ಅವರ ‘ಏ ದಿಲ್ ಹೈ ಮುಷ್ಕಿಲ್’ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. (ಏಜೆನ್ಸೀಸ್)
ಮುದ್ದು ಮಗಳ ಆಗಮನದಿಂದ ದೀಪ್ವೀರ್ ಖುಷ್; ತಾಯ್ತನದ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದು ಹೀಗೆ…