ನಟನೆಗೆ ಬರುವ ಮುನ್ನವೆ ನನ್ನ ತಾಯಿ ಸಲಹೆ ನೀಡಿದ್ರು; ಹೇಮಮಾಲಿನಿ ಹೇಳಿಕೊಟ್ಟ ಪಾಠ ನೆನೆದ ಇಶಾ ಡಿಯೋಲ್​​

Untitled-design-2024-09-15T171817.242-1
Published on

ಮುಂಬೈ: ಡ್ರೀಮ್​ ಗರ್ಲ್​​ ಹೇಮಾಮಾಲಿನಿ ಮತ್ತು ಧರ್ಮೇಂದ್ರ ಅವರು ಮಗಳು ಇಶಾ ಡಿಯೋಲ್ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿರಂಗದಲ್ಲಿ ತಾಯಿಯಂತೆ ಹೆಸರು ಗಳಿಸಲು ಸಾಧ್ಯವಾಗಲಿಲ್ಲ. ಸ್ಟಾರ್​​ ದಂಪತಿ ಮಗಳಾದರು ಬಣ್ಣದ ಜಗತ್ತಿನಲ್ಲಿ ತಮ್ಮ ಕಠಿಣ ಪರಿಶ್ರಮ ಮತ್ತು ಹೋರಾಟದಿಂದ ತಮ್ಮದೆ ಸ್ಥಾನವನ್ನು ಗಿಟ್ಟಿಸಿಕೊಂಡರು. ಆದರೆ ತಾಯಿಯಂತೆ ಚಲನಚಿತ್ರಗಳಲ್ಲಿ ಹೆಸರು ಗಳಿಸಲು ಸಾಧ್ಯವಾಗಲಿಲ್ಲ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಇಶಾ ಡಿಯೋಲ್​​​ ಅವರು, ತಾವು ಬಾಲಿವುಡ್​ಗೆ ಪ್ರವೇಶಿಸುವ ಮೊದಲು ಅವರ ತಾಯಿ ಹೇಮಮಾಲಿನ ಅವರಿಗೆ ನೀಡಿದ್ದ ಸಲಹೆಗಳ ಬಗ್ಗೆ ಮಾತನಾಡಿದ್ದಾರೆ. ಪುರುಷ ಪ್ರಾಬಲ್ಯವಿರುವ ಉದ್ಯಮದಲ್ಲಿ ಇಶಾ ಯಾವುದೆ ತೊಂದರೆ ಮತ್ತು ಅಹಿತಕರ ಸನ್ನಿವೇಶಗಳಿಗೆ ಸಿಲುಕುವುದನ್ನು ತಪ್ಪಿಸಲು ಹಾಗೂ ಅವಳು ಹೇಗೆ ದಾರಿ ಮಾಡಿಕೊಳ್ಳಬೇಕು ಎಂಬುದನ್ನು ಅರಿಯಲು ಅವರು ಈ ಸಲಹೆ ನೀಡಿದ್ದರಂತೆ.

ನನ್ನ ತಾಯಿ ನಟಿಸುವ ಸಮಯದಲ್ಲಿ ನಟಿಯರು ಮತ್ತು ಕೇಶ ವಿನ್ಯಾಸಕರು ಮಾತ್ರ ಮಹಿಳೆಯರಿದ್ದರು. ನನ್ನ ತಾಯಿಗೆ ಉದ್ಯಮದಲ್ಲಿ ಅನುಭವವಿರುವುದು ನನ್ನ ಅದೃಷ್ಟ. ಅವರು ಯಾವಾಗಲೂ ತೊಂದರೆಗೆ ಸಿಲುಕದಂತೆ ಮತ್ತು ಸೆಟ್‌ಗಳಲ್ಲಿ ಅನಾನುಕೂಲತೆಯನ್ನು ಅನುಭವಿಸುವುದರಿಂದ ನನ್ನನ್ನು ರಕ್ಷಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ನಾನು ಚಿಕ್ಕ ಸ್ಕರ್ಟ್ ಧರಿಸಿದಾಗ ಟೇಕ್‌ಗಳ ಮಧ್ಯೆ ಕುಳಿತುಕೊಂಡಾಗ ನನ್ನ ತೊಡೆ ಕಾಣದಂತೆ ಟವೆಲ್​​ ಬಳಸುವಂತೆ ಹೇಳುತ್ತಿದ್ದರು. ಅದೇ ರೀತಿ ಲೋನೆಕ್ ಟಾಪ್ ಧರಿಸಿದರೆ ಶಾಟ್​​ಗಳ ನಡುವೆ ಅದನ್ನು ಮುಚ್ಚಲು ಬಟ್ಟೆಯನ್ನು ನೀಡುತ್ತಿದ್ದರು ಎಂದು ವಿವರಿಸಿದ್ದಾರೆ.

ಅಲ್ಲದೆ ಸೆಟ್​ನಲ್ಲಿ ಅಹಿತಕರ ಸಂಪರ್ಕವನ್ನು ತಪ್ಪಿಸಲು ತಬ್ಬಿಕೊಳ್ಳುವ ದೃಶ್ಯಕ್ಕೂ ಕೆಲವು ಸಲಹೆ ನೀಡಿದ್ದಾರೆ. ಕ್ಯಾಮೆರಾ ಮುಂದೆ ನಾನು ನನ್ನ ತೋಳುಗಳನ್ನು ನನ್ನ ಮುಂದಕ್ಕೆ ಇಟ್ಟು ಬಳಿಕ ನನ್ನ ಸಹನಟನ ಕುತ್ತಿಗೆ ಹಿಡಿದುಕೊಳ್ಳುತ್ತೇನೆ. ಇದರಿಂದ ಅನಾನುಕೂಲವಾದಗ ಹಿಂದಕ್ಕೆ ತಳ್ಳಬಹುದು ಎಂದು ಇಶಾ ಹೇಳಿದರು.

ನನ್ನ ತಾಯಿ ಟಾಪ್​​ ಸ್ಟಾರ್​ಗಳಲ್ಲಿ ಒಬ್ಬರು. ಅವರು ಪುರುಷ ಸಹನಟರಿಗೆ ಸಮಾನವಾದ ಸಂಭಾವನೆಯನ್ನು ಪಡೆದಿದ್ದಾರೆ. ಅವರು ಸಂಭಾನೆಗಾಗಿ ವಾದ ಮಾಡಬೇಕಾದ ಸಂದರ್ಭವೆ ಇರಲಿಲ್ಲ. ಏಕೆಂದರೆ ಹೇಮಾಮಾಲಿನಿ ಸಿನಿಮಾದಲ್ಲಿದ್ದರೆ ಚಿತ್ರ ಹಿಟ್​ ಆಗುತ್ತದೆ ಎಂಬ ನಂಬಿಕೆಯಿತ್ತು. ಪ್ರತಿ ಎರಡನೇ ಮತ್ತು ಮೂರನೇ ಚಿತ್ರಕ್ಕೆ ಅವರೇ ನಾಯಕಿಯಾಗಿ ಬೇಕಿತ್ತು ಎಂದು ತನ್ನ ತಾಯಿಯನ್ನು ಹೊಗಳಿದರು. ​

ಇಶಾ ಡಿಯೋಲ್​​​ ಕೋಯಿ ಮೇರೆ ದಿಲ್ ಸೇ ಪೂಛೆ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು, ಧೂಮ್ ಚಿತ್ರದಲ್ಲಿನ ಅಭಿನಯದ ನಂತರ ಸ್ಟಾರ್‌ಡಮ್ ಗಳಿಸಿದರು. ಈ ಚಿತ್ರದಲ್ಲಿ ಉದಯ್ ಚೋಪ್ರಾ, ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ ಮತ್ತು ರಿಮಿ ಸೇನ್ ನಟಿಸಿದ್ದಾರೆ. ಕುಚ್ ತೋ ಹೈ, ಯುವಾ, ಧೂಮ್, ಕಾಲ್, ಶಾದಿ ನಂ.1, ನೋಎಂಟ್ರಿ, ಜಸ್ಟ್ ಮ್ಯಾರೀಡ್, ಹೈಜಾಕ್​, ಹಲವು ಸಿನಿಮಾಗಳ ಇಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net